ಮೇಷ
ಆದಾಯ ಗಳಿಕೆಯ ಹೊಸ ದಾರಿ ತೋರಲಿದೆ. ನಿಮ್ಮ ವ್ಯಕ್ತಿತ್ವ ಇತರರ ಮೆಚ್ಚುಗೆ ಗಳಿಸುವುದು. ವಿವಾಹಿತರ ಪಾಲಿಗೆ ಶುಭ ಬೆಳವಣಿಗೆ.
ವೃಷಭ
ವೃತ್ತಿ ಕ್ಷೇತ್ರದಲ್ಲಿ ನಯವಂಚಕರ ಬಗ್ಗೆ ಎಚ್ಚರದಿಂದಿರಿ. ಕುಟುಂಬದಲ್ಲಿ ಸಮಸ್ಯೆ ಉಂಟಾದೀತು. ಪ್ರೀತಿಯ ವ್ಯವಹಾರದಲ್ಲಿ ಬಿಕ್ಕಟ್ಟು.
ಮಿಥುನ
ಒತ್ತಡದ ಬದುಕಿಂದ ವಿರಾಮ ಪಡೆಯಿರಿ. ಆ ಮೂಲಕ ಮಾನಸಿಕ ನೆಮ್ಮದಿ ಪಡಕೊಳ್ಳಿ. ಯುವಕರು ಪ್ರೇಮದ ಅಹವಾಲು ಪಡೆಯುವಿರಿ.
ಕಟಕ
ಭಾವುಕತೆ ನಿಮ್ಮ ವಿವೇಕ ಮರೆಸಬಹುದು. ಸಹೋದರಿಯಿಂದ ಸಮಸ್ಯೆ ಸೃಷ್ಟಿ. ಶೇರು ಹೂಡಿಕೆಯಿಂದ ಲಾಭ. ಆಪ್ತ ಸಂಬಂಧ ಕೆಡಲಿದೆ.
ಸಿಂಹ
ನಿಮಗೆ ಅಚ್ಚರಿಯ ಬೆಳವಣಿಗೆ ಉಂಟಾದೀತು. ಅನ್ಯರ ಜತೆಗಿನ ವೈರವನ್ನು ದೀರ್ಘ ಎಳೆಯಬೇಡಿ. ಕೌಟುಂಬಿಕ ನೆಮ್ಮದಿ ಹಾಳಾಗುವ ಪ್ರಸಂಗ.
ಕನ್ಯಾ
ನಿಮ್ಮ ಮೇಲೆ ದೊಡ್ಡ ಜವಾಬ್ದಾರಿ ಬೀಳಲಿದೆ. ಮಾನಸಿಕ ಒತ್ತಡದಿಂದ ನೆಮ್ಮದಿ ಹಾಳು. ಪ್ರೀತಿಯ ಬಿಕ್ಕಟ್ಟು ಶಮನದಿಂದ ತುಸು ನಿರಾಳತೆ. ತುಲಾ
ವೃತ್ತಿ ಒತ್ತಡದಿಂದ ಇಂದು ಮುಕ್ತಿ. ಆಪ್ತರ ಜತೆ ಬೆರೆಯುವ ಅವಕಾಶ. ನಿಮ್ಮನ್ನು ಶ್ಲಾಘಿಸುವ ನಿರ್ವಹಣೆ ತೋರುವಿರಿ. ಖಾಸಗಿ ಚಿಂತೆ ಪರಿಹಾರ.
ವೃಶ್ಚಿಕ
ನಿಮ್ಮ ಶ್ರಮದಿಂದ ಉದ್ಯೋಗದಲ್ಲಿ ಯಶ. ಆರ್ಥಿಕ ಉನ್ನತಿ. ಪ್ರೀತಿಯ ವಿಷಯದಲ್ಲಿ ಎಚ್ಚರದ ಹೆಜ್ಜೆ ಇಡಿ. ಅಪಸ್ವರ ಏಳದಂತೆ ನೋಡಿಕೊಳ್ಳಿ.
ಧನು
ನಿಮ್ಮ ಗುಣಾತ್ಮಕ ನಡವಳಿಕೆ ಯಶಸ್ಸಿಗೆ ಕಾರಣವಾಗಲಿದೆ. ಎಲ್ಲರಿಂದ ದೂರವಾಗಿ ಬದುಕುವ ತುಡಿತ ಉಂಟಾದೀತು.
ಮಕರ
ಕುಟುಂಬದ ಹಿತಕ್ಕೆ ಹೆಚ್ಚು ಕಾಳಜಿ ವಹಿಸುವಿರಿ. ಉದ್ಯಮಿಗಳು ಇಂದು ಒಂದು ಹೆಜ್ಜೆ ಹಿಂದಿಡಿ. ದಿನದಂತ್ಯಕ್ಕೆ ವೈರಾಗ್ಯ ಭಾವ ಉಂಟಾದೀತು.
ಕುಂಭ
ವ್ಯಕ್ತಿಯೊಬ್ಬರ ಜತೆ ವಿಶ್ವಾಸಭರಿತ ಬಾಂಧವ್ಯ ಬೆಳೆಯಬಹುದು. ಆದಾಯದಲ್ಲಿ ಹೆಚ್ಚಳ. ಮನೆಯ ಸಮಸ್ಯೆ ಪರಿಹಾರದಿಂದ ನೆಮ್ಮದಿ.
ಮೀನ
ಚಿಪ್ಪಿನಿಂದ ಹೊರಬನ್ನಿ. ಎಲ್ಲರ ಜತೆ ಮುಕ್ತವಾಗಿ ಬೆರೆಯಿರಿ. ಎಲ್ಲರನ್ನು ಸಂಶಯದಿಂದ ನೋಡಬೇಡಿ. ವಿಶ್ವಾಸ ಮುಖ್ಯ ಎಂದರಿಯಿರಿ.
ದಿನಭವಿಷ್ಯ: ಆದಾಯ ಗಳಿಕೆಗೆ ಹೊಸ ದಾರಿ ಕಾಣಲಿದೆ, ನಿಮ್ಮ ವ್ಯಕ್ತಿತ್ವ ಇತರರಿಗೆ ಇಷ್ಟ!
ಭವಿಷ್ಯ



