ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ಕಂಗನಾ ರಣಾವತ್ , ತಮ್ಮ ರಾಜಕೀಯ ಜೀವನದ ಬಗ್ಗೆ ನೇರವಾಗಿ ಮಾತನಾಡಿದ್ದು, ಹಲವು ವಿಚಾರವನ್ನು ಮನಬಿಚ್ಚಿ ಮಾತನಾಡಿದ್ದಾರೆ.
ಕಂಗನಾ ತಮ್ಮ ರಾಜಕೀಯದ ಕುರಿತು ಮಾತನಾಡಿ ನನಗೆ ರಾಜಕೀಯ ಸಂಪೂರ್ಣವಾಗಿ ಅರ್ಥವಾಗುತ್ತಿದೆ. ಆದರೆ ನಾನು ಇದನ್ನು ಆನಂದಿಸುತ್ತಿದ್ದೇನೆ ಎಂದೇನು ಹೇಳಲ್ಲ. ರಾಜಕೀಯವೆಂಬುದು ಸಂಪೂರ್ಣ ವಿಭಿನ್ನ ಕೆಲಸ. ಇದು ಸಮಾಜ ಸೇವೆಯಂತೆಯೇ. ಆದರೆ ಇದು ನನ್ನ ಹಿನ್ನೆಲೆಯಲ್ಲ. ಜನರಿಗೆ ಸೇವೆ ಸಲ್ಲಿಸುವುದಾಗಿ ನಾನು ಎಂದಿಗೂ ಯೋಚಿಸಿರಲಿಲ್ಲ ಎಂದಿದ್ದಾರೆ.
ನಾನು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ್ದೇನೆ. ಆದರೆ ಅದು ಬೇರೆ. ಯಾರಾದರೂ ನೋವಿನಲ್ಲಿ ಇದ್ದರೆ, ಅವರಿಗೆ ನಾನು ನೆರವಾಗಲು ಸಿದ್ಧಳಾಗಿರುತ್ತೇನೆ. ಆದರೆ ನಾನು ಸಂಸದಳಾಗಿ ಯಾವಾಗಲೂ ಪಂಚಾಯತ್ ಮಟ್ಟದ ಸಮಸ್ಯೆಗಳೊಂದಿಗೆ ಜನರು ನನ್ನ ಬಳಿ ಬರುತ್ತಾರೆ. ಅವರಿಗೆ ಹಾಳಾದ ರಸ್ತೆ, ಮೂಲಸೌಕರ್ಯದ ಸಮಸ್ಯೆಗಳು ಮುಖ್ಯ. ನಾನು ಅವರಿಗೆ ಅದು ರಾಜ್ಯ ಸರ್ಕಾರದ ವಿಷಯ ಎಂದು ಹೇಳಿದಾಗ, ಅವರು ನಿಮ್ಮ ಬಳಿ ಹಣವಿದೆ ನಿಮ್ಮ ಸ್ವಂತ ಹಣವನ್ನು ಬಳಸಿರಿ ಎನ್ನುತ್ತಾರೆ ಎಂದು ಕಂಗನಾ ಹೇಳಿದರು.
ತಮ್ಮನ್ನು ಭವಿಷ್ಯದ ಪ್ರಧಾನಿಯಾಗಿ ನೋಡುತ್ತೀರಾ ಎಂಬ ಪ್ರಶ್ನೆಗೆ ಕಂಗನಾ ತಕ್ಷಣ ತಿರಸ್ಕರಿಸಿ ‘ನಾನು ಭಾರತದ ಪ್ರಧಾನಿಯಾಗಲು ಸೂಕ್ತ ಎಂದು ಭಾವಿಸುವುದಿಲ್ಲ. ನನಗೆ ಆ ಮಟ್ಟದ ಉತ್ಸಾಹವೂ ಇಲ್ಲ, ಆಸಕ್ತಿಯೂ ಇಲ್ಲ ಎಂದರು.
ತಮ್ಮ ವ್ಯಕ್ತಿತ್ವ ಮತ್ತು ಜೀವನಶೈಲಿ ಕುರಿತು ಹೆಚ್ಚಿನ ವಿವರ ನೀಡುತ್ತಾ, ಸಮಾಜ ಸೇವೆ ಎಂದಿಗೂ ನನ್ನ ಹಿನ್ನೆಲೆಯಾಗಿರಲಿಲ್ಲ. ನಾನು ತುಂಬಾ ಸ್ವಾರ್ಥ ಜೀವನವನ್ನು ನಡೆಸಿದ್ದೇನೆ. ನನಗೆ ದೊಡ್ಡ ಮನೆ ಬೇಕು, ದೊಡ್ಡ ಕಾರು ಬೇಕು, ವಜ್ರಗಳು ಬೇಕು, ನಾನು ಚೆನ್ನಾಗಿ ಕಾಣಬೇಕೆಂದು ಬಯಸುತ್ತೇನೆ. ನಾನು ಬದುಕುತ್ತಿರುವ ಜೀವನವೇ ಆ ರೀತಿ ಎಂದರು.
ದೇವರು ನನ್ನನ್ನು ಯಾವ ಉದ್ದೇಶಕ್ಕಾಗಿ ಆರಿಸಿದ್ದಾನೆ ಎಂದು ನನಗೆ ತಿಳಿದಿಲ್ಲ. ಆದರೆ ನನ್ನ ಜೀವನವನ್ನು ಮಹಾ ತ್ಯಾಗವೆಂದು ನಾನು ನೋಡುವುದಿಲ್ಲ. ನನಗೆ ಆ ರೀತಿಯ ಜೀವನ ಇಷ್ಟವಿಲ್ಲ. ಹಾಗೆ ಬದುಕಲು ನನಗೆ ಸಾಧ್ಯವಿಲ್ಲ, ಮತ್ತು ಯಾರಿಗೂ ಅದು ಬೇಕಾಗಿಯೂ ಇರಬೇಕೆಂದು ನಾನು ಭಾವಿಸುವುದಿಲ್ಲ. ನನ್ನಲ್ಲಿ ಅದು ಇಲ್ಲ ಎಂದು ಕಂಗನಾ ಸ್ಪಷ್ಟಪಡಿಸಿದರು. ಕಂಗನಾ ಈ ಹೇಳಿಕೆಗಳನ್ನು, ಪ್ರವಾಹ ಪೀಡಿತ ಮಂಡಿ ಕ್ಷೇತ್ರಕ್ಕೆ ತಡವಾಗಿ ಭೇಟಿ ನೀಡಿದ್ದಕ್ಕಾಗಿ ಟೀಕೆಗಳನ್ನು ಎದುರಿಸಿದರು. ಬಳಿಕ ಅವರು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳೊಂದಿಗೆ ಸಂವಹನ ನಡೆಸಿ, ಅಗತ್ಯ ಸಹಾಯದ ಭರವಸೆ ನೀಡಿದ್ದರು.