ಆರೋಗ್ಯಕರ ಮತ್ತು ಪೌಷ್ಟಿಕತೆ ತುಂಬಿದ ಬ್ರೇಕ್ ಫಾಸ್ಟ್ ಬೇಕಾದರೆ, ಆಲ್ಮಂಡ್ ಬಟರ್ ಸ್ಮೂದಿ ಉತ್ತಮ ಆಯ್ಕೆ. ಇದು ರುಚಿಕರವೂ ಆಗಿದ್ದು, ಶಕ್ತಿದಾಯಕವೂ ಆಗಿರುತ್ತದೆ. ಬೆಳಗಿನ ಉಪಹಾರಕ್ಕೆ ಅಥವಾ ವ್ಯಾಯಾಮದ ನಂತರ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳಿಗಾಗಿ ಇದನ್ನು ಉಪಯೋಗಿಸಬಹುದು.
ಬೇಕಾಗುವ ಪದಾರ್ಥಗಳು:
1.5 ಚಮಚ ಬಾದಾಮಿ ಬೆಣ್ಣೆ ಅಥವಾ almond butter
1 frozen ಬಾಳೆಹಣ್ಣು
1/2 ಕಪ್ frozen ಬೆರಿಹಣ್ಣುಗಳು( ನಿಮ್ಮ ಆಯ್ಕೆಯದ್ದು )
2 ಟೇಬಲ್ಸ್ಪೂನ್ ರೋಲ್ಡ್ ಓಟ್ಸ್
3/4 ಕಪ್ ಹಾಲು ಅಥವಾ ನೀರು
1 ಟೀಚಮಚ ಜೇನುತುಪ್ಪ (ಅಥವಾ ರುಚಿಗೆ ತಕ್ಕಷ್ಟು)
ಮಾಡುವ ವಿಧಾನ:
ಸ್ಮೂಥಿ ಮಾಡಲು ಬಾಳೆಹಣ್ಣು ಬೆರಿಹಣ್ಣುಗಳನ್ನು ಬ್ಲೆಂಡರ್ನ ಜಾರ್ ನಲ್ಲಿ ಸೇರಿಸಿ, ಅದಕ್ಕೆ 2 ಚಮಚ ರೋಲ್ಡ್ ಓಟ್ಸ್, 1.5 ಚಮಚ ಬಾದಾಮಿ ಬೆಣ್ಣೆ, 3/4 ಕಪ್ ಹಾಲು ಅಥವಾ ನೀರು, ಮತ್ತು 1 ಚಮಚ ಜೇನುತುಪ್ಪ (ಅಥವಾ ರುಚಿಗೆ ತಕ್ಕಷ್ಟು) ಸೇರಿಸಿ. ನಯವಾದ ಮಿಶ್ರಣ ಮಾಡಿದರೆ ಆಲ್ಮಂಡ್ ಬಟ್ಟರ್ ಸ್ಮೂದಿ ರೆಡಿ.