ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಒಂದು ವಾರಗಳ ಕಾಲ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಕದ್ರಾ, ಆಗುಂಬೆ, ಸಿದ್ದಾಪುರ, ಯಲ್ಲಾಪುರ, ಧರ್ಮಸ್ಥಳ, ಕಮ್ಮರಡಿ, ಕಳಸ, ಬೆಳ್ತಂಗಡಿ, ಶಿರಾಲಿ, ಪುತ್ತೂರು, ಮೂಡಿಗೆರೆ, ಸೋಮವಾರಪೇಟೆ, ಸುಳ್ಯ, ಮಂಗಳೂರು, ಕುಮಟಾ, ಕಾರ್ಕಳ, ಮಾಣಿ, ನಾಪೋಕ್ಲು, ಕೊಪ್ಪ, ಕೊಟ್ಟಿಗೆಹಾರ, ಶೃಂಗೇರಿ, ಜಯಪುರ, ಕುಂದಾಪುರ, ಮಂಕಿ, ಶಕ್ತಿನಗರ, ಬೆಳಗಾವಿ, ಉಡುಪಿ, ಮುಂಡಗೋಡು, ಬಾಳೆಹೊನ್ನೂರು, ಆನವಟ್ಟಿ, ಅರಕಲಗೋಡು, ಎನ್ಆರ್ಪುರದಲ್ಲಿ ಮಳೆಯಾಗಿದೆ.