ಗಣಿತ ಅಂದ್ರೆ ಭಯಾನಾ? ಇಲ್ಲಿದೆ ಸಿಂಪಲ್ ಟಿಪ್ಸ್, ಇದನ್ನ ಫಾಲೋ ಮಾಡಿದ್ರೆ ಸಾಕು maths easy peasy ಆಗೋಗ್ಬಿಡುತ್ತೆ!

ಗಣಿತ ಎಂಬ ವಿಷಯಕೆಲವರಿಗೆ ಬಹುಮಾನ, ಇನ್ನು ಕೆಲವರಿಗೆ ಬರಿಯೋಕು ಹಿಂಜರಿಕೆ. ಆದರೆ ತಜ್ಞರ ಅಭಿಪ್ರಾಯದಂತೆ, ಗಣಿತ ಕಬ್ಬಿಣದ ಕಡಲೆ ಅಲ್ಲ. ಗಣಿತಕ್ಕಿಂತ ಸುಲಭವಾದ ವಿಷಯ ಮತ್ತೊಂದಿಲ್ಲ ಅಂತಾರೆ. ಬೇಸಿಕ್ಸ್‌ ಮೇಲೆ ಹಿಡಿತ, ಸರಿಯಾದ ಅಭ್ಯಾಸ ಮತ್ತು ನಿತ್ಯ ಪಾಠದ ಪರಿಶೀಲನೆಯ ಮೂಲಕ ಈ ವಿಷಯದಲ್ಲಿ ಸಾಧನೆ ಸಾಧ್ಯ. ಕೆಲವೊಂದು ಸರಳ ಸಲಹೆಗಳನ್ನು ಅನುಸರಿಸಿದರೆ ಗಣಿತದ ಭೀತಿ ದೂರವಾಗಬಹುದು.

ಬಾಲ್ಯದಲ್ಲಿಯೇ ಬೇಸಿಕ್ಸ್ ಬಲಪಡಿಸಬೇಕು
ಗಣಿತದಲ್ಲಿ ಸುಲಭವಾಗಿ ಮುನ್ನಡೆಯಲು ಬೇಸಿಕ್ಸ್ ಬಹಳ ಮುಖ್ಯ. ಬಾಲ್ಯದ ಪಾಠಗಳು, ವಿಶೇಷವಾಗಿ ಟೇಬಲ್, ಫ್ಯಾಕ್ಟರ್, ಬೋಧನಾ ಸೂತ್ರಗಳನ್ನು ಸರಿಯಾಗಿ ಕಲಿತರೆ ಮುಂದಿನ ತರಗತಿಗಳ ಗಣಿತ ಸುಲಭವಾಗುತ್ತದೆ.

intelligent elementary school kid solving maths problem on chalkboard at classroom -concept of talented, brilliant student and education.

ಸೂತ್ರಗಳ ಅಭ್ಯಾಸಕ್ಕೆ ತ್ವರಿತ ಪ್ರಯತ್ನ
ಚಿಕ್ಕವಯಸ್ಸಿನಲ್ಲಿ ಮೂಲ ಸೂತ್ರವನ್ನು ಗ್ರಹಿಸಲು ಸಾಧ್ಯವಾಗದಿದ್ದರೆ ನಿಮಗೂ ಅದೇ ಭಯ ಕಾಡುತ್ತದೆ. ಅದಕ್ಕಾಗಿಯೇ ಮಾಧ್ಯಮಿಕ ತರಗತಿಗಳಲ್ಲಿ ಸೂತ್ರಗಳನ್ನು ಕಲಿಯುವುದು,ಅದನ್ನು ಅಭ್ಯಾಸ ಮಾಡುವುದು ತುಂಬಾ ಮುಖ್ಯ.

ತರಗತಿಯಲ್ಲಿ ಸಕ್ರಿಯರಾಗಿರಿ
ಪಾಠ ಸಮಯದಲ್ಲಿ ಶಿಕ್ಷಕರೊಂದಿಗೆ ಚರ್ಚೆ ಮಾಡಿ. ನಿಮಗೆ ಅರ್ಥವಾಗದ ಪ್ರಶ್ನೆಗಳನ್ನು ತಕ್ಷಣವೇ ಕೇಳಿ. ಉತ್ತಮ ನೋಟ್ಸ್ ತೆಗೆದುಕೊಳ್ಳಿ ಮತ್ತು ತಕ್ಷಣ ಮತ್ತೆ ಅದನ್ನು ಓದಿ.

I can't solve this!

ಪಠ್ಯೇತರ ಸಹಾಯವನ್ನು ಪಡೆದುಕೊಳ್ಳಿ
ಅರ್ಥವಾಗದಾಗ ಹೊರಗಿನ ಅನ್ಲೈನ್ ರಿಸೋರ್ಸ್‌ಗಳು, ಪಠ್ಯೋಪಕರಣಗಳು, ವಿಡಿಯೋ ಪಾಠಗಳು, ಆಟಗಳ ಮೂಲಕ ಕಲಿತರೆ ವಿಷಯ ಹೃದಯಕ್ಕೆ ಹತ್ತಿರವಾಗುತ್ತದೆ.

ಸಮಸ್ಯೆ ಬಗ್ಗೆ ತಾಳ್ಮೆ ಇಡಿ
ಒಮ್ಮೆ ಓದಿದರೆ ಅರ್ಥವಾಗುವುದಿಲ್ಲ ಎಂದು ಬೇಸರ ಪಡಬೇಡಿ. ಅದೇ ಸಮಸ್ಯೆಯನ್ನು ವಿವಿಧ ವಿಧಾನಗಳಲ್ಲಿ ನಿರಂತರ ಅಭ್ಯಾಸ ಮಾಡಿದರೆ ಲೆಕ್ಕ ಅನ್ನೋದು ಸುಲಭವಾಗುತ್ತೆ.

Little girl solving mathematical addition Preschool girl counting numbers on her fingers solving mathematical addition indian kid maths stock pictures, royalty-free photos & images

ಫ್ಯಾಕ್ಟರೈಸೇಶನ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡಿ
ಗಣಿತದ ಪ್ರಗತಿಗೆ ಫ್ಯಾಕ್ಟರೈಸೇಶನ್ ಬಹುಮುಖ್ಯ. ಇದನ್ನು ಸರಿಯಾಗಿ ಕಲಿತರೆ ಅಲ್ಜೆಬ್ರಾ, ಭಿನ್ನರಾಶಿ, ಸಮೀಕರಣ ಇತ್ಯಾದಿ ವಿಷಯಗಳು ಸುಲಭವಾಗುತ್ತವೆ.

ತಂತ್ರಜ್ಞಾನವನ್ನು ಬಳಸಿಕೊಳ್ಳಿ
ಆಧುನಿಕ ಯುಗದಲ್ಲಿ ಹಲವು ಉಪಯುಕ್ತ ವೆಬ್‌ಸೈಟ್‌ಗಳು, ಆ್ಯಪ್‌ಗಳು ಲಭ್ಯವಿದೆ. ಆಟಗಳ ರೂಪದಲ್ಲಿ ಕಲಿಯಬಹುದಾದ ಪಾಠಗಳು, ಚಟುವಟಿಕೆಗಳು, ಚಿಕ್ಕ ಪರೀಕ್ಷೆಗಳು ನಿಮಗೆ ತಕ್ಷಣ ಓದಿದದ್ದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

Happy indian mother teaching her son to do maths homework at home - concept of home schooling, tutor and education Happy indian mother teaching her son to do maths homework at home - concept of home schooling, tutor and education indian kid maths stock pictures, royalty-free photos & images

ಗಣಿತದಲ್ಲಿನ ಅಂಕ ಹೆಚ್ಚಿಸಲು ಯಾವ ಮಾಯಾಜಾಲವಿಲ್ಲ. ಸತತ ಅಭ್ಯಾಸ, ಸಕಾರಾತ್ಮಕ ಮನೋಭಾವ ಮತ್ತು ಸರಿಯಾದ ಮಾರ್ಗದರ್ಶನವಿದ್ದರೆ ನೀವು ಗಣಿತವನ್ನು ಗೆಲ್ಲಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!