ಇಂದಿನ ಇಡೀ ಕುಟುಂಬಗಳ ಅಡುಗೆ ವ್ಯವಸ್ಥೆ ಗ್ಯಾಸ್ ಸಿಲಿಂಡರ್‌ಗಳ ಬಳಕೆ ಮೇಲೆ ಅವಲಂಬಿತವಾಗಿದೆ. ಬೆಳಗಿನ ಬೆಡ್ ಕಾಫಿಯಿಂದ ಆರಂಭಿಸಿ, ರಾತ್ರಿ ಊಟದವರೆಗೂ, ಪ್ರತಿಯೊಂದು ಆಹಾರದ ತಯಾರಿಕೆಯಲ್ಲಿ ಸಿಲಿಂಡರ್ ಬಹುಮೂಲ್ಯ ಪಾತ್ರ ವಹಿಸುತ್ತಿದೆ. ಆದರೆ ಈ ಸಿಲಿಂಡರ್ ಬಳಕೆಯಲ್ಲಿ ಸ್ವಲ್ಪ ನಿರ್ಲಕ್ಷತೆ ಜೀವಗಳಿಗೆ ಭಾರೀ ಅಪಾಯವಾಗಬಹುದು.
ಗ್ಯಾಸ್ ಲೀಕೇಜ್ ಹೇಗೆ ಆಗುತ್ತದೆ?
ಅನೇಕ ಮನೆಗಳಲ್ಲಿ ಗ್ಯಾಸ್ ಲೀಕೇಜ್‌ಗೆ ಮುಖ್ಯ ಕಾರಣ ರಬ್ಬರ್ ಪೈಪ್‌ನ ಹಾಳಾಗೋರೋದು, ತಪ್ಪು ಫಿಟಿಂಗ್ ಹೀಗೆ ಅನೇಕ ಕಾರಣಗಳಿವೆ. ಕೆಲವೊಮ್ಮೆ ಈ ಲೀಕೇಜ್ ನಮಗೆ ಗೊತ್ತಾಗದೆ ನಡೆದಿರಬಹುದು. ಗ್ಯಾಸ್ ಹೊರ ಬೀಳುತ್ತಿರುವಾಗ ಮಾತ್ರ ನಮಗೆ ಅರಿವಾಗುತ್ತದೆ.
ಲೀಕ್ ಆಗುವ ಅನಿಲದಿಂದ ಉಂಟಾಗುವ ಅಪಾಯಗಳು
ಲೀಕಾದ ಗ್ಯಾಸ್ ನೇರವಾಗಿ ಉಸಿರಾಟದ ಮೂಲಕ ದೇಹದಲ್ಲಿ ಪ್ರವೇಶಿಸಿ, ಶ್ವಾಸಕೋಶ, ನರಮಂಡಲ, ಲಿವರ್, ಕಿಡ್ನಿ, ಮೆದುಳಿಗೆ ತೀವ್ರ ಹಾನಿ ಮಾಡಬಹುದು. ತಲೆಸುತ್ತು, ನಡುಕ, ಮೂರ್ಛೆ, ನೆನಪಿನ ಶಕ್ತಿ ಕಡಿಮೆಯಾಗುವುದು, ಪಾರ್ಶ್ವವಾಯು ಮುಂತಾದ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಇದೆ.
ಅನಿಲ ಸೋರಿಕೆಯಾಗಿದಾಗ ಕೈಗೊಳ್ಳಬೇಕಾದ ಕ್ರಮಗಳು
ತಕ್ಷಣವೇ ದೇವರ ದೀಪ, ಗಂಧದ ಕಡ್ಡಿ ಆರಿಸಬೇಕು.
ರೆಗ್ಯುಲೇಟರ್ ಆಫ್ ಮಾಡಿ, ಎಲ್ಲ ಕಿಟಕಿ ಬಾಗಿಲುಗಳನ್ನು ತೆರೆಯಬೇಕು.
ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಆನ್/ಆಫ್ ಮಾಡಬಾರದು.
ತಕ್ಷಣ ಗ್ಯಾಸ್ ಪೂರೈಕೆದಾರರಿಗೆ ಅಥವಾ ಅಗ್ನಿಶಾಮಕ ದಳದವರಿಗೆ ಕರೆ ಮಾಡಬೇಕು.
affected ವ್ಯಕ್ತಿಗೆ ಶುದ್ಧ ಗಾಳಿ ಒದಗಿಸಿ, ವೈದ್ಯಕೀಯ ಸಹಾಯ ಪಡೆಯಬೇಕು.
ಮನೆಯಲ್ಲಿ ಮುಂದಾಗದಂತೆ ತಡೆಯುವ ಮುನ್ನೆಚ್ಚರಿಕಾ ಕ್ರಮಗಳು
ಪ್ರತಿ ವರ್ಷ ಗ್ಯಾಸ್ ಪೈಪ್ ಚೆಕ್ ಮಾಡಿಸಿ, ಅವಶ್ಯಕತೆ ಇದ್ದರೆ ಬದಲಾಯಿಸಿ.
ಸಿಲಿಂಡರ್ ಅನ್ನು ಬಿಸಿಲಿನಲ್ಲಿ ಇರಬಾರದು. ತಂಪಾದ, ಗಾಳಿಯುಳ್ಳ ಜಾಗದಲ್ಲಿರಬೇಕು.
ಉನ್ನತ ಗುಣಮಟ್ಟದ ಪೈಪ್ ಬಳಸಬೇಕು ಮತ್ತು ಲೀಕ್ ಪರೀಕ್ಷಿಸಲು ನುರಿತ ಸಿಬ್ಬಂದಿ ಸಹಾಯ ಪಡೆಯಬೇಕು.
ಅಡುಗೆ ಬಳಿಕ ಗ್ಯಾಸ್ ಸ್ಟವ್ ಚೆಕ್ ಮಾಡುವುದು ನಿತ್ಯದ ಅಭ್ಯಾಸವಾಗಿರಬೇಕು.