ಕಷ್ಟ ಎಂದಾಗ ಮೊದಲು ನೆನಪಾಗೋದು ಸ್ನೇಹಿತರು, ಸಂಬಂಧಿಕರು, ಪರಿಚಿತರು. ಆದರೆ, ಅವರಿಗೆ ಹಣ ಕೊಟ್ಟ ಮೇಲೆ ಅದು ಹಿಂದಿರುಗಿ ಬರುತ್ತೆ ಎನ್ನುವುದಕ್ಕೆ ಯಾವ ಭರವಸೆ ಇರಲ್ಲ. ಸಾಲ ಕೇಳೋ ಎಲ್ಲರಿಗೂ ಸಹಾಯ ಮಾಡಿದ್ರೆ, ಕೊನೆಗೆ ನೀವು ಕೈ ಚಾಚೋ ಸಾಧ್ಯತೆ ಹೆಚ್ಚು. ಹೀಗಾಗಿ, ಕೆಲವೊಂದು ರೀತಿಯ ವ್ಯಕ್ತಿಗಳಿಗೆ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅತ್ಯವಶ್ಯಕ.
ಮರೆತು ಬಿಡುವ ಜನರಿಗೆ ಸಾಲ ಬೇಡ
ಹಣ ಕೇಳುವಾಗ ಶ್ರದ್ಧೆಯಿಂದ ಮಾತನಾಡುವ ಈ ಜನ, ಹಣ ಸಿಕ್ಕ ಮೇಲ್ಮಟ್ಟಕ್ಕೆ ಮರೆತು ಬಿಡ್ತಾರೆ. ಹಿಂತಿರುಗಿಸುವ ಯಾವುದೇ ಪ್ರಾಮಾಣಿಕತೆ ಇಲ್ಲದೆ, ತಿಂಗಳುಗಳ ಕಾಲ ನಿಮ್ಮ ಹಣ ಮರೆತುಬಿಡುತ್ತಾರೆ. ಇಂತಹವರಿಗೆ ನಿಜವಾಗಿಯೂ ದುಡಿದು ಗಳಿಸಿದ ಹಣವನ್ನು ಕೊಡೋದು ನಿಮ್ಮ ನಷ್ಟವಲ್ಲದೇ ಬೇಸರಕ್ಕೂ ಕಾರಣವಾಗಬಹುದು.
ಮೋಜು ಮಸ್ತಿಗಾಗಿ ಹಣ ಕೇಳುವವರು
ಈವರೆಗೂ ಹೀಗೂ ಕೇಳಿರಬಹುದು – “ಇಂದು ಪಾರ್ಟಿಗೆ ಹೋಗ್ತಿದ್ದಿವಿ, ಸ್ವಲ್ಪ ದುಡ್ಡು ಕೊಡ್ತೀಯಾ?” ಅಂತ. ಇಂಥವರು ಖರ್ಚು ಮಾಡೋದು ತಮ್ಮ ಮನರಂಜನೆಗಾಗಿ, ಆದರೆ ಹಣ ಬೇಕಾದ್ರೆ ನಿಮ್ಮ ಕೇಳುತ್ತಾರೆ! ದುಡ್ಡಿನ ಬಗ್ಗೆ ಬೇಜವಾಬ್ದಾರಿ ಇರುವವರಿಗೆ ಸಾಲ ಕೊಡೋದು ನಿಮ್ಮ ಹಣದ ದುರ್ಬಳಕೆ ಮಾಡಿಕೊಳ್ಳೋವಂತೆ.
ಪದೇ ಪದೇ ಸಾಲ ಕೇಳುವವರು
ಈವರೆಗೂ ಕೊಟ್ಟ ಹಣ ಮರಳಿ ಸಿಕ್ಕಿಲ್ಲ, ಆದರೆ ಮತ್ತೆ “ಈಗ ಕೊಟ್ಟುಬಿಡು, ಮುಂದೆ ಸರಿ ಮಾಡ್ತೀನಿ” ಅಂತ ಕೇಳೋದು ಇಂಥವರ ಶೈಲಿ. ಇಂಥವರ ಜೊತೆಗೆ ನಿರಂತರ ಹಣದ ಲೆಕ್ಕವನ್ನಿಟ್ಟುಕೊಳ್ಳೋದು ಬಲು ಕಷ್ಟ. ಹೀಗಾಗಿ, ಹಿಂದಿನ ಸಾಲ ಪಾವತಿಸದವರೆರಿಗೂ ಸಾಲ ಕೊಡಬೇಡಿ.
ಅಸಡ್ಡೆ ತೋರುವವರು
ಸಾಲ ಕೇಳುವಾಗ ‘ಅಣ್ಣಾ’, ‘ತಮ್ಮಾ’ ಎಂದು ಮಾತಾಡುವವರು, ಹಣ ಹಿಂತಿರುಗಿಸೋ ವೇಳೆಗೆ ನಿಮ್ಮ ಕರೆಗೂ ಉತ್ತರಿಸೋದಿಲ್ಲ. ಮೆಸೇಜ್ಗೆ seen ಆಯ್ತು ಅಷ್ಟೆ! ಅದಕ್ಕೆ ಉತ್ತರವಿಲ್ಲ. ಇಂಥವರಿಂದ ನಿಮ್ಮ ಹಣ ವಾಪಸ್ ಸಿಗೋ ಭರವಸೆಯೇ ಇಲ್ಲ.
ಅಗತ್ಯವಿದ್ದಾಗ ಮಾತ್ರ ಸ್ಮರಿಸುವವರು
ಇವರು ನಿಮ್ಮನ್ನು ನೆನಪಿಸಿಕೊಳ್ಳೋದು ಕಷ್ಟದ ಸಮಯದಲ್ಲೆ. ಮಿಕ್ಕ ಸಮಯದಲ್ಲಿ ನಿಮ್ಮ ಅಸ್ತಿತ್ವವನ್ನೇ ಮರೆತುಹೋಗುತ್ತಾರೆ. ಇಂತಹ ಜನರಿಗೆ, ಅವರ ಅಗತ್ಯ ಪೂರೈಸೋ ಸಲಹೆ ಕೊಟ್ಟು ಬಿಡಿ – ಹಣವಲ್ಲ.