February 6, 2026
Friday, February 6, 2026
spot_img

WPL 2026 Final | ಪಾಪ ಡೆಲ್ಲಿ ಡೇರ್‌ಡೆವಿಲ್ಸ್‌, ನಾಲ್ಕು ಬಾರಿ ಫೈನಲ್‌ಗೆ ಬಂದ್ರೂ ಟ್ರೋಫಿ ಕೈಗೆ ಸಿಕ್ತಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

2026ರ WPL ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ಫೈನಲ್‌ಗೆ ಬಂದಿರೋದು ಇದೇ ಮೊದಲಲ್ಲ. ಸತತ ನಾಲ್ಕನೇ ಬಾರಿ ಫೈನಲ್ಸ್‌ಗೆ ಬಂದರೂ ಡೆಲ್ಲಿ ಕ್ಯಾಪಿಟಲ್ಸ್‌ಗೆ ಟ್ರೋಫಿ ಸಿಕ್ತಾ ಇಲ್ಲ.

2023 ರಲ್ಲಿ ಆರಂಭವಾದ ಮಹಿಳಾ ಪ್ರೀಮಿಯರ್ ಲೀಗ್ ಇದುವರೆಗೆ 4 ಆವೃತ್ತಿಗಳನ್ನು ಕಂಡಿದೆ. ಅಚ್ಚರಿಯ ಸಂಗತಿಯೆಂದರೆ ಈ ನಾಲ್ಕು ಆವೃತ್ತಿಗಳ ಫೈನಲ್​ ಪಂದ್ಯವನ್ನು ಆಡಿದ ಏಕೈಕ ತಂಡವೆಂದರೆ ಅದು ಡೆಲ್ಲಿ ಕ್ಯಾಪಿಟಲ್ಸ್.

ಆದರೆ ಒಮ್ಮೆಯೂ ಡೆಲ್ಲಿ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಸಾಧ್ಯವಾಗಿಲ್ಲ. ಮೊದಲ 3 ಆವೃತ್ತಿಯಲ್ಲಿ ಮೆಗ್ ಲ್ಯಾನಿಂಗ್ ತಂಡವನ್ನು ಮುನ್ನಡೆದಸಿದ್ದರೆ, ಈ ಆವೃತ್ತಿಯಲ್ಲಿ ಜೆಮಿಮಾ ರಾಡ್ರಿಗಸ್ ತಂಡದ ನಾಯಕತ್ವವಹಿಸಿದ್ದರು. ನಾಯಕಿ ಬದಲಾದರೂ ಡೆಲ್ಲಿ ತಂಡದ ಅದೃಷ್ಟ ಮಾತ್ರ ಬದಲಾಗಲಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !