ಪತಂಜಲಿಯಿಂದ ವಿಶ್ವದ ಅತಿದೊಡ್ಡ ಆಯುರ್ವೇದ ಟೆಲಿಮೆಡಿಸಿನ್ ಸೆಂಟರ್​​ಗೆ ಚಾಲನೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ನೇತೃತ್ವದ ಪತಂಜಲಿ ಆಯುರ್ವೇದ ಸಂಸ್ಥೆ ಇಂದು ಟೆಲಿಮೆಡಿಸಿನ್ ಕೇಂದ್ರವನ್ನು ಉದ್ಘಾಟಿಸಿದೆ. ಇದು ವಿಶ್ವದ ಅತಿ ದೊಡ್ಡ ಮತ್ತು ಅಧಿಕೃತ ಆಯುರ್ವೇದ ಟೆಲಿಮೆಡಿಸಿನ್ ಪ್ಲಾಟ್​​ಫಾರ್ಮ್ ಎನಿಸಿದೆ.

ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ವೇದ ಮಂತ್ರೋಚ್ಛಾರ ಮತ್ತು ಯಜ್ಞಗಳ ಮೂಲಕ ಈ ಪತಂಜಲಿ ಟೆಲಿ ಮೆಡಿಸಿನ್ ಸೆಂಟರ್ ಅನ್ನು ಔಪಚಾರಿಕವಾಗಿ ಅನಾವರಣಗೊಳಿಸಿದರು.

ಈ ಸಂದರ್ಭ ಮಾತನಾಡಿದ ಬಾಬಾ ರಾಮದೇವ್, ಈ ಟೆಲಿಮೆಡಿಸಿನ್ ಸೆಂಟರ್ ಹರಿದ್ವಾರದಿಂದ ಹಿಡಿದು ದೇಶದ ಪ್ರತೀ ಮನೆ ಬಾಗಿಲಿಗೂ ಭಾರತದ ಋಷಿ ಪರಂಪರೆಯನ್ನು ಹರಡುವ ದೈವಿಕ ಸಾಧನವಾಗಲಿದೆ ಎಂದು ಹೇಳಿದರು. ಈಗ ವೈದ್ಯಕೀಯ ಸೇವೆಗಳು ಆನ್‌ಲೈನ್‌ನಲ್ಲೇ ಲಭ್ಯ ಇದ್ದು, ಅನಾರೋಗ್ಯ ಪೀಡಿತರಿಗೆ ಇದು ಬಹಳ ಅನುಕೂಲವಾಗುತ್ತದೆ. ಪತಂಜಲಿಯ ಟೆಲಿಮೆಡಿಸಿನ್ ಕೇಂದ್ರವು ಮಾನವ ಸೇವೆಯ ಅತ್ಯುತ್ತಮ ಉಪಕ್ರಮವಾಗಿದೆ ಎಂದು ಬಣ್ಣಿಸಿದರು.

ಪತಂಜಲಿ ಟೆಲಿಮೆಡಿಸಿನ್ ಸೆಂಟರ್​​ನ ವಿಶೇಷತೆಗಳು
ಉಚಿತ ಆನ್‌ಲೈನ್ ಆಯುರ್ವೇದ ಸಮಾಲೋಚನೆ
ಟೆಲಿಮೆಡಿಸಿನ್ ನಂಬರ್- 18002961111
ಉನ್ನತ ತರಬೇತಿ ಪಡೆದ ವೈದ್ಯರ ತಂಡ
ಪ್ರಾಚೀನ ಗ್ರಂಥಗಳಲ್ಲಿ ತಿಳಿಸಲಾಗಿರುವ ಮತ್ತು ವ್ಯಕ್ತಿಗತಗೊಳಿಸಲಾಗಿರುವ ಹರ್ಬಲ್ ಸಂಯೋಜನೆಗಳು
ಡಿಜಿಟಲ್ ಹೆಲ್ತ್ ರೆಕಾರ್ಡ್ ಮತ್ತು ವ್ಯವಸ್ಥಿತವಾದ ಫಾಲೋಅಪ್
WhatsApp, ಫೋನ್ ಮತ್ತು ವೆಬ್ ಆಧಾರಿತ ಪ್ಲಾಟ್​​ಫಾರ್ಮ್​ಗಳ ಮೂಲಕ ಸುಲಭ ಪ್ರವೇಶ

ಈ ಉಪಕ್ರಮವು ಪ್ರತಿ ಮನೆಯಲ್ಲೂ ಅಧಿಕೃತ, ಶಾಸ್ತ್ರಾಧಾರಿತ ಆಯುರ್ವೇದ ಆರೋಗ್ಯ ಪರಿಹಾರಗಳಿಗೆ ಆಧಾರವಾಗಿರುತ್ತದೆ. ದೂರದ ಪ್ರದೇಶಗಳಲ್ಲಿರುವ ಮತ್ತು ವಿದೇಶಗಳಲ್ಲಿ ವಾಸಿಸುವ ಮತ್ತು ಕೇಂದ್ರಕ್ಕೆ ಭೇಟಿ ನೀಡಲು ಸಾಧ್ಯವಾಗದಿರುವ ಜನರಿಗೆ ಈ ಟೆಲಿಮೆಡಿಸಿನ್ ಸೆಂಟರ್ ಪ್ರಯೋಜನ ಆಗಬಹುದು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!