ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕ್ಲೀಮ್ ಪ್ರೊಡಕ್ಷನ್ಸ್ ನಿರ್ಮಿಸಿ, ಹೊಂಬಾಳೆ ಫಿಲಂಸ್ ಪ್ರಸ್ತುತಪಡಿಸಿರುವ ಸಿನಿಮಾ ʼಮಹಾವತಾರ್ ನರಸಿಂಹʼ ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದೆ.
ಅನಿಮೇಷನ್ ಮೂಲಕ ವಿಷ್ಣುವಿನ ವಿವಿಧ ಅವತಾರಗಳ ಕತೆಯನ್ನು ಸಿನಿಮಾ ಕತೆಯಾಗಿ ಹೇಳುವ ಸಾಹಸಕ್ಕೆ ಹೊಂಬಾಳೆ ಕೈ ಜೋಡಿಸಿದೆ. ‘ಮಹಾವತಾರ: ನರಸಿಂಹ’ ಸಿನಿಮಾ ಈ ಮಹಾವತಾರ ಯೂನಿವರ್ಸ್ನ ಮೊದಲ ಸಿನಿಮಾ ಆಗಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.
ಮಹಾವಿಷ್ಣು, ನರಸಿಂಹನ ಅವತಾರ ಎತ್ತಿ ಹಿರಣ್ಯಕಶ್ಯಪುವಿನ ವಧೆ ಮಾಡುವ ಕತೆಯನ್ನು ಅನಿಮೇಷನ್ ತಂತ್ರಜ್ಞಾನ ಬಳಸಿ ಸಿನಿಮಾ ಮಾಡಲಾಗಿದೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.
‘ಮಹಾವತಾರ: ನರಸಿಂಹ’ ಸಿನಿಮಾವನ್ನು ಅಶ್ವಿಕ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ನಿರ್ಮಾಣ ಮಾಡಿದ್ದಾರೆ.
ಸಿನಿಮಾದ ಬಗ್ಗೆ ಮಾತನಾಡಿರುವ ನಿರ್ಮಾಪಕಿ ಶಿಲ್ಪಾ, ಐದು ವರ್ಷದ ಅವಿರತ ಪ್ರಯತ್ನದ ಬಳಿಕ, ನರಸಿಂಹ ಮತ್ತು ವರಾಹರ ದೈವಿಕ ಕಥೆಯನ್ನು ವಿಶ್ವದ ಮುಂದೆ ತರಲು ಸಜ್ಜಾಗಿದ್ದೇವೆ. ಪ್ರತಿಯೊಂದು ಕ್ಷಣ, ಪ್ರತಿಯೊಂದು ದೃಶ್ಯ, ಪ್ರತಿಯೊಂದು ಉಸಿರೂ ಈ ಕಥೆಯ ಆತ್ಮವಾಗಿದೆ. ನಿಮ್ಮ ಮನಸ್ಸು ತಲುಪುವ ದೃಶ್ಯ ವೈಭವಕ್ಕಾಗಿ ಸಿದ್ಧರಾಗಿ. ನರಸಿಂಹನ ಗರ್ಜನೆ ಬರಲಿದೆ ಎಂದಿದ್ದಾರೆ.