ಹಿಂದೂ ಧರ್ಮದಲ್ಲಿ ಗುರು ಪೂರ್ಣಿಮಾ ದಿನಕ್ಕೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಈ ದಿನದಂದು ಗುರುಗಳನ್ನು ಸ್ಮರಿಸುವುದರಿಂದ, ಗುರುಗಳ ಪಾದ ಪೂಜೆಯನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯು ನೆಲೆಯಾಗುವುದು ಎನ್ನುವ ನಂಬಿಕೆಯಿದೆ.ಈ ಶುಭ ದಿನದಂದು ನಾವು ಮನೆಗೆ ಕೆಲವೊಂದು ವಸ್ತುಗಳನ್ನು ತರುವುದು ಮಂಗಳಕರವಾಗಿರುತ್ತದೆ.
ನೀವು ಗುರು ಪೂರ್ಣಿಮಾ ದಿನದಂದು ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆದುಕೊಳ್ಳಲು ಬಯಸಿದರೆ ಈ ದಿನ ಮನೆಗೆ ಭಗವದ್ಗೀತೆಯನ್ನು ತೆಗೆದುಕೊಂಡು ಬರಬೇಕು. ಈ ದಿನ ಭಗವದ್ಗೀತೆಯನ್ನು ತಂದ ನಂತರ ಅದನ್ನು ಪಠಿಸಬೇಕು.
ಶಂಖವು ಸಮುದ್ರ ಮಂಥನದ ಅವಧಿಯಲ್ಲಿ ದೊರೆತ ಅದ್ಭುತವಾದ ವಸ್ತುವೆಂದು ಪರಿಗಣಿಸಲಾಗುತ್ತದೆ. ಶಂಖದಲ್ಲಿ ಲಕ್ಷ್ಮಿ ದೇವಿಯು ವಾಸವಾಗಿರುತ್ತಾಳೆ.
ಗುರು ಪೂರ್ಣಿಮಾ ದಿನವು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಲು ಕೂಡ ಅತ್ಯಂತ ಮಹತ್ವದ ದಿನವಾಗಿದೆ. ನಾವು ಈ ದಿನದಂದು ಮಾಡುವ ಕೆಲವೊಂದು ಕೆಲಸಗಳು ನಮಗೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ತಂದುಕೊಡುತ್ತದೆ.
ಗುರು ಪೂರ್ಣಿಮಾ ದಿನದಂದು ಮನೆಗೆ ಲಾಫಿಂಗ್ ಬುದ್ದವನ್ನು ತಂದು ಇಡಬೇಕು. ಈ ದಿನದಂದು ನಾವು ಮನೆಗೆ ಲಾಫಿಂಗ್ ಬುದ್ಧನನ್ನು ತಂದು ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ.