ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹೃದಯಾಘಾತದಿಂದ ಸರಣಿ ಸಾವು ಮುಂದುವರಿದಿದೆ. ಮೈಸೂರಿನಲ್ಲಿ 28 ವರ್ಷದ ಯುವಕ ಹೃದಯಾಘಾತಕ್ಕೆ ಬಲಿಯಾಗಿದ್ರೆ, ಕೊಡಗಿನಲ್ಲಿ 58 ವರ್ಷದ ಮಹಿಳೆ ಜೀವ ತೆತ್ತಿದ್ದಾರೆ.
ಚಾಮರಾಜ ಮೊಹಲ್ಲಾದ ನಿವಾಸಿ ದರ್ಶನ್ ಚೌದ್ರಿ (28) ಮೃತ ದುರ್ದೈವಿ. ದೇವರಾಜ ಮೊಹಲ್ಲಾದಲ್ಲಿ ಬಣ್ಣದ ಅಂಗಡಿ ಮಾಲೀಕನಾಗಿದ್ದ ದರ್ಶನ್ಗೆ ನಿನ್ನೆ ರಾತ್ರಿ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಪೋಷಕರು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಚಿಕಿತ್ಸೆ ನೀಡುವುದಕ್ಕೂ ಮನ್ನವೇ ದರ್ಶನ್ ಸಾವನ್ನಪ್ಪಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನಲ್ಲಿ 58 ವರ್ಷದ ಮಹಿಳೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸುಮಾ ಮೃತ ದುರ್ದೈವಿ. ನಿನ್ನೆ ಬೆಳಗ್ಗೆ ಮಹಿಳೆ ಸಾವನ್ನಪ್ಪಿದ್ದು, 2 ಗಂಡು ಮಕ್ಕಳು ಮತ್ತು ಪತಿಯನ್ನು ಅಗಲಿದ್ದಾರೆ.