ಓಲಾ ಫೌಂಡೇಶನ್‌ ಸಹಯೋಗದಲ್ಲಿ ಜುಲೈ 12ರಂದು ವಿವಿಧ ಭಾಷೆಗಳಲ್ಲಿ ಯುವ ಪುಸ್ತಕ ಸರಣಿ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇತಿಹಾಸಕಾರ ಹಾಗೂ ಲೇಖಕ ಡಾ. ವಿಕ್ರಮ್ ಸಂಪತ್ ಅವರ ಭಾರತೀಯ ಇತಿಹಾಸ ಹಾಗೂ ಸಾಂಸ್ಕೃತಿಕ ಸಂಶೋಧನೆ ಫೌಂಡೇಶನ್(ಎಫ್‌ಐಹೆಚ್‌ಸಿಆರ್)‌ ಓಲಾ ಫೌಂಡೇಶನ್‌ ಸಹಯೋಗದಲ್ಲಿ ವಿವಿಧ ಭಾಷೆಗಳಲ್ಲಿ ‘ ಯುವ’ ಪುಸ್ತಕ ಸರಣಿ ಬಿಡುಗಡೆಗೊಳ್ಳಲಿದೆ. ಇದೇ ಮೊದಲ ಬಾರಿಗೆ ಭಾರತದ ಪುಸ್ತಕ ಪ್ರಕಟಣೆಯ ಇತಿಹಾಸದಲ್ಲಿ ಇಂಗ್ಲೀಷ್‌ ಪುಸ್ತಕ ಏಕಕಾಲದಲ್ಲಿ 6 ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.

ಜುಲೈ 12, ಶನಿವಾರದಂದು ಬೆಂಗಳೂರು ಹೆಬ್ಬಾಳದ ಮ್ಯಾರಿಯೇಟ್‌ನ ಹೊಟೇಲ್‌ ಕೋರ್ಟ್‌ಯಾರ್ಡ್ ನಲ್ಲಿ ಸಂಜೆ 4.30 ಕ್ಕೆ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಲೇಖಕಿ ಹಾಗೂ ರಾಜ್ಯಸಭೆ ಸದಸ್ಯೆಯಾಗಿರುವ ಶ್ರೀಮತಿ ಸುಧಾಮೂರ್ತಿ, ಮೈಸೂರು-ಕೊಡಗು ಲೋಕಸಭಾ ಸಂಸದ ಹಾಗೂ ರಾಜವಂಶಸ್ಥ ಶ್ರೀ ಯದುವೀರ್ ಒಡೆಯರ್ ಹಾಗೂ ಶ್ರೀ ಸತ್ಯಸಾಯಿ ಯುನಿವರ್ಸಿಟಿ ಫಾರ್‍‌ ಹ್ಯೂಮನ್ ಎಕ್ಸೆಲೆನ್ಸ್‌ ಹಾಗೂ ಮಧುಸೂದನ್ ಸಾಯಿ ಇನಸ್ಟಿಟ್ಯೂಟ್ ಆಫ್‌ ಮೆಡಿಕಲ್ ಸೈನ್ಸ್‌ ಮತ್ತು ರಿಸರ್ಚ್‌ನ ಫೌಂಡರ್ ಚಾನ್ಸೆಲರ್‍‌ ಸದ್ಗುರು ಶ್ರೀ ಮಧುಸೂದನ್ ಸಾಯಿ ಉಪಸ್ಥಿತರಿರಲಿದ್ದಾರೆ.

ಯುವ ಪುಸ್ತಕಗಳನ್ನು ಪ್ರಸಿದ್ಧ ಬರಹಗಾರರಾದ ಮಾಲಾ ಕುಮಾರ್, ವಿಜೇಂದ್ರ ಶರ್ಮಾ, ಡಾ. ಪ್ರದೀಪ್ ಚಕ್ರವರ್ತಿ ಹಾಗೂ ಹರಿಣಿ ಶ್ರೀನಿವಾಸನ್‌ ಬರೆದಿದ್ದು NAAV AI ಜೊತೆಗೆ ನಾಗಾ ಚೊಕ್ಕನಾಥನ್ (ತಮಿಳು), ಅರುಣ್‌ ದಾಗರ್ (ಹಿಂದಿ), ಮೈತ್ರೇಯಿ ಜೋಷಿ (ಮರಾಠಿ), ಶ್ರೀಗೌರಿ ಜೋಶಿ (ಕನ್ನಡ), ಸಂದೀಪ್‌ ವರ್ಮಾ (ಮಲೆಯಾಳಂ) ಲಕ್ಷ್ಮಣ ಶಾಸ್ತ್ರಿ(ತೆಲುಗು) ಭಾಷಾಂತರಿಸಿದ್ದಾರೆ.

ಎಫ್‌ಐಹೆಚ್‌ಸಿಆರ್ ನ ಯುವ ಕಾರ್ಯಕ್ರಮ 6-18 ವರ್ಷದ ಮಕ್ಕಳಲ್ಲಿ ಭಾರತದ ಇತಿಹಾಸ, ಹೋರಾಟಗಾರರು, ನಾಯಕರ ಕುರಿತು ಹೆಚ್ಚುತಿಳಿದಿಲ್ಲದ ಮಾಹಿತಿಯನ್ನು ತಲುಪಿಸುವ , ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತದೆ. ವಿದ್ಯಾರ್ಥಿಗಳಿಗಾಗಿ ರಾಷ್ಟ್ರಾದ್ಯಂತ ಪ್ರಬಂಧ ಸ್ಪರ್ಧೆ ಆಯೋಜನೆ, ಭಾರತದಲ್ಲಿ ಇತಿಹಾಸ ಶಿಕ್ಷಣದ ಕುರಿತು ಸರ್ವೆ, ಹಾಗೂ ಮಕ್ಕಳಿಗೆ ಉತ್ತಮ ಗುಣಮಟ್ಟದ ಇತಿಹಾಸ ಪುಸ್ತಕಗಳು ಕೂಡ ಎಫ್‌ಐಹೆಚ್‌ಸಿಆರ್ ನ ಹಲವು ಕಾರ್ಯಕ್ರಗಳಲ್ಲಿ ಸೇರಿವೆ.

ಕಾರ್ಯಕ್ರಮಲ್ಲಿ ವಿಕ್ರಮ್ ಸಂಪತ್ ಸಹ ಸ್ಥಾಪಕರಾಗಿರುವ NAAV AI ಎಂಬ ಎಐ ಚಾಲಿತ ಹ್ಯೂಮನ್‌ ‌ ರಿಫೈನ್ಡ್‌ ಟೆಕ್ನಾಲಜಿ ಸೆಲ್ಯೂಶನ್ ನ ಲೋಕಾರ್ಪಣೆ ಕೂಡ ನಡೆಯಲಿದೆ. NAAV AI 3 ಪುಸ್ತಕಗಳನ್ನು ಭಾರತದ 6 ಭಾಷೆಗಳಲ್ಲಿ ಭಾಷಾಂತರಿಸಲು ನೆರವಾಗಿದೆ. ಇದು ಆಡಿಯೋ, ಬರವಣಿಗೆಯನ್ನು ವಿವಿಧ ಭಾಷೆಗಳಲ್ಲಿ ಲಭ್ಯವಾಗಿಸಲು ಸಹಕಾರಿಯಾಗಲಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!