ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಜಿಲ್ಲೆಯಲ್ಲಿ ಸರಣಿ ಹೃದಯಾಘಾತ ಪ್ರಕರಣಗಳ ಕುರಿತು ತಜ್ಞರ ಸಮಿತಿ ತನಿಖೆ ನಡೆಸಿದ್ದು, ಇಂದು ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ.
ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಒಟ್ಟು 24 ಸಾವುಗಳಲ್ಲಿ 20 ಜನರು ಮಾತ್ರವೇ ಹೃದಯಾಘಾತದಿಂದ ಸಾವನ್ನಪ್ಪಿರುವುದನ್ನು ತಜ್ಞರ ವರದಿಯು ಖಚಿತ ಪಡಿಸಿದೆ.
ತಜ್ಞರ ಸಮಿತಿಯು ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ತಮ್ಮ ವರದಿಯನ್ನು ಸಲ್ಲಿಸಿದೆ.
ಹಾಸನ ಜಿಲ್ಲೆಯಲ್ಲಿ ಮೇ-ಜೂನ್ ನಲ್ಲಿ ಒಟ್ಟು 24 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಹೀಗೆ ಸಾವನ್ನಪ್ಪಿದ 24 ಮಂದಿಯ ಪೈಕಿ 20 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಾಲ್ವರಿಗೆ ಹೃದಯಾಘಾತವೇ ಆಗಿಲ್ಲ. ನಾಲ್ವರಲ್ಲಿ ಒಬ್ಬನಿಗೆ ಕಿಡ್ನಿ ಸಮಸ್ಯೆ, ಮತ್ತೊಬ್ಬನಿಗೆ ಆಕ್ಸಿಡೆಂಟ್ ಆಗಿ ಸಾವನ್ನಪ್ಪಿದ್ದರೇ, ಇನ್ನೊಬ್ಬ ಸೀವಿಯರ್ ಗ್ಯಾಸ್ಟ್ರೋ ಸಮಸ್ಯೆಯ ಕಾರಣ ಬಿಪಿ ಹೆಚ್ಚಾಗಿ ಸಾವನ್ನಪ್ಪಿದ್ದಾರೆ. 20 ಹೃದಯಾಘಾತ ಪ್ರಕರಣಗಳಲ್ಲಿ ಮೂರು ನಾನ್ ಹಾರ್ಟ್ ಅಟ್ಯಾಕ್ ಡೆತ್ ಆಗಿದ್ದಾರೆ ಎಂದಿದೆ.