ಹಕ್ಕಿ ಗಿಳಿಯಾಗುತ್ತಿದೆಯೇ?…ತರೂರ್ ‘ತುರ್ತು ಪರಿಸ್ಥಿತಿ’ ಲೇಖನ ವಿರುದ್ಧ ಗುಡುಗಿದ ಕಾಂಗ್ರೆಸ್ ಸಂಸದ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳಂ ದಿನಪತ್ರಿಕೆ ದೀಪಿಕಾದಲ್ಲಿ ಪ್ರಕಟವಾದ ಇತ್ತೀಚಿನ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಲೇಖನವು ವೈರಲ್ ಆಗಿದ್ದು, ತುರ್ತು ಪರಿಸ್ಥಿತಿಯನ್ನು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ “ಕರಾಳ ಯುಗ” ಎಂದು ಬಣ್ಣಿಸಿದ್ದಾರೆ . ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1975ರ ಜೂನ್ 25ರಿಂದ 1977ರ ಮಾರ್ಚ್‌ 21ರವರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ಕರಾಳ ಯುಗ. ಕಾನೂನು ಮತ್ತು ಸುವ್ಯವಸ್ಥೆಗಾಗಿ ಕೈಗೊಂಡ ಪ್ರಯತ್ನಗಳು ಕ್ರೌರ್ಯದ ರೂಪ ತಾಳಿತು. ಹಾಗೆಂದು ಆ ಕ್ರಮವನ್ನು ಸಮರ್ಥಿಸಲಾಗದು ಎಂದು ಅವರು ಹೇಳಿದ್ದಾರೆ.

ಇದೀಗ ಶಶಿ ತರೂರ್ ಅವರ ಹೇಳಿಕೆ ವಿವಾದಕ್ಕೆ ಗುರಿಯಾಗಿದೆ. ಬಿಜೆಪಿ ತುರ್ತು ಪರಿಸ್ಥಿತಿಯನ್ನು ಆಗಾಗ್ಗೆ ಬಳಸುವ ಮೂಲಕ ಕಾಂಗ್ರೆಸ್ ವಿರುದ್ಧ ದಾಳಿ ನಡೆಸುತ್ತಾ ಬಂದಿದೆ. ಇದೇ ರೀತಿಯ ಇದೀಗ ಶಶಿ ತರೂರ್ ಅವರ ಹೇಳಿಕೆಗಳಿಗೆ ಕಾಂಗ್ರೆಸ್ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಪಕ್ಷ ಔಪಚಾರಿಕವಾಗಿ ಖಂಡಿಸದಿದ್ದರೂ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪರೋಕ್ಷವಾಗಿ ತರೂರ್ ಗೆ ಪ್ರತಿಕ್ರಿಯಿಸಿದ್ದಾರೆ.

ಸಹೋದ್ಯೋಗಿಯೊಬ್ಬರು ಬಿಜೆಪಿಯ ಮಾತುಗಳನ್ನು ಪುನರಾವರ್ತಿಸಲು ಪ್ರಾರಂಭಿಸಿದಾಗ ಹಕ್ಕಿ ಗಿಳಿಯಾಗುತ್ತಿದೆಯೇ? ಎಂದು ನಿಮಗೆ ಆಶ್ಚರ್ಯವಾಗಿತ್ತು. ಹಕ್ಕಿಗಳಲ್ಲಿ ಮಿಮಿಕ್ರಿ ಕ್ಯೂಟ್ ಆಗಿರುತ್ತದೆ ಹೊರತು ರಾಜಕೀಯದಲ್ಲಿ ಅಲ್ಲ ಎಂದಿದ್ದಾರೆ. ಫೋಸ್ಟ್ ನಲ್ಲಿ ತರೂರ್ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಅವರ ತುರ್ತುಪರಿಸ್ಥಿತಿ ಲೇಖನ ಪ್ರಕಟವಾಗುತ್ತಿದ್ದಂತೆಯೇ ಟ್ಯಾಗೋರ್ ಈ ರೀತಿಯ ಫೋಸ್ಟ್ ಮಾಡಿದ್ದಾರೆ.

ಕಳೆದ ತಿಂಗಳು ಕೂಡಾ ಇದೇ ರೀತಿಯ ಫೋಸ್ಟ್ ವಾರ್ ನಡೆದಿತ್ತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು “ನಮಗೆ ದೇಶ ಮೊದಲು, ಆದರೆ ಕೆಲವರಿಗೆ ಮೋದಿಯೇ ಮೊದಲು” ಎಂದು ತರೂರ್ ಅವರನ್ನು ಟೀಕಿಸಿದ ಒಂದು ದಿನದ ನಂತರ, ತಿರುವನಂತಪುರಂ ಸಂಸದ ಸಾಮಾಜಿಕ ಮಾಧ್ಯಮದಲ್ಲಿ ಹಾರುತ್ತಿರುವ ಹಕ್ಕಿಯ ಫೋಟೋವನ್ನು ಹಂಚಿಕೊಂಡು, ‘ರೆಕ್ಕೆ ನಿಮ್ಮದು, ಹಾರಲು ಯಾರ ಅನುಮತಿಯೂ ಬೇಕಾಗಿಲ್ಲ. ಆಕಾಶ ಯಾರದ್ದೂ ಅಲ್ಲ’ ಎಂದು ಬರೆದಿದ್ದರು.ಶಶಿ ತರೂರ್ ಪೋಸ್ಟ್ ಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಅವರು, “ಹಾರಲು ಅನುಮತಿ ಕೇಳಬೇಡಿ. ಪಕ್ಷಿಗಳು ಮೇಲೆ ಹಾರಲು ಅನುಮತಿ ಅಗತ್ಯವಿಲ್ಲ ನಿಜ. ಆದರೆ ಇಂದು, ಸ್ವತಂತ್ರ ಹಕ್ಕಿ ಕೂಡ ಆಕಾಶದಲ್ಲಿ ಹಾರಬೇಕಾದರೆ ಹುಷಾರಾಗಿರಬೇಕು. ಏಕೆಂದರೆ, ಗಿಡುಗಗಳು, ರಣಹದ್ದುಗಳು ಮತ್ತು ‘ಹದ್ದುಗಳು’ ಯಾವಾಗಲೂ ಬೇಟೆಯಾಡುತ್ತಲೇ ಇರುತ್ತವೆ. ಸ್ವಾತಂತ್ರ್ಯವು ಎಲ್ಲರಿಗೂ ಮುಕ್ತವಲ್ಲ. ವಿಶೇಷವಾಗಿ ಪರಭಕ್ಷಕಗಳು ದೇಶಭಕ್ತಿಯನ್ನು ಗರಿಗಳಾಗಿ ಧರಿಸಿದಾಗ ಸ್ವಾತಂತ್ರ್ಯ ಮುಕ್ತವಲ್ಲ ಎಂದು ಎಚ್ಚರಿಸಿದ್ದರು. ಟಾಗೋರ್ ಅವರ ಪೋಸ್ಟ್‌ನಲ್ಲಿ ಪರಭಕ್ಷಕ ಪಕ್ಷಿಗಳ ಚಿತ್ರಗಳೂ ಇವೆ. ಇದು ಪಕ್ಷದೊಳಗಿನ ಆಂತರಿಕ ಉದ್ವಿಗ್ನತೆಯನ್ನು ಸೂಚಿಸುತಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!