ಮೇಷ
ವೃತ್ತಿ ಕ್ಷೇತ್ರದಲ್ಲಿ ಸಂತೋಷದ ಸನ್ನಿವೇಶ. ದೀರ್ಘಾವಧಿ ಚಿಂತೆಯೊಂದಕ್ಕೆ ಕೆಲದಿನಗಳಲ್ಲೆ ಪರಿಹಾರ ದೊರಕಬಹುದು.
ವೃಷಭ
ನಿಮ್ಮ ಪ್ರಗತಿಗೆ ಅಡ್ಡಿ ತರುತ್ತಿರುವ ವಿಷಯ ಮೊದಲಿಗೆ ಇತ್ಯರ್ಥ ಮಾಡಿಕೊಳ್ಳಿ. ಅದನ್ನು ಬೆಳೆಯಲು ಬಿಡಬೇಡಿ. ಟೀಕೆಗೆ ಎರವಾಗದಿರಿ.
ಮಿಥುನ
ಸ್ವಂತ ವ್ಯವಹಾರದಲ್ಲಿ ಎಚ್ಚರದಿಂದ ಹೆಜ್ಜೆ ಇಡಿ. ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಯಾರನ್ನೂ ಕುರುಡಾಗಿ ನಂಬದಿರಿ. ವೃತ್ತಿಯಲ್ಲಿ ಉನ್ನತಿ.
ಕಟಕ
ಇಂದು ನಿಮ್ಮ ವ್ಯವಹಾರ ಸುಗಮವಾಗಿ ಸಾಗಲಿದೆ. ವಿಘ್ನಗಳ ನಿವಾರಣೆ. ಕೌಟುಂಬಿಕ ಜಗಳ ವಿಕೋಪಕ್ಕೆ ಕೊಂಡೊಯ್ಯಬೇಡಿ.
ಸಿಂಹ
ಹೊಸ ವ್ಯವಹಾರಕ್ಕೆ ಈಗಲೆ ಕೈಹಾಕದಿರಿ. ವಿಘ್ನಗಳು ಕಾಡಬಹುದು. ಕುಟುಂಬ ಸದಸ್ಯರ ಜತೆ ವಾಗ್ವಾದ ನಡೆದೀತು. ಸಹನೆ ಮುಖ್ಯ.
ಕನ್ಯಾ
ನಿಮ್ಮ ಕೆಲಸಕ್ಕೆ ಕೆಲವರು ಅಡ್ಡಗಾಲು ಹಾಕಲೆತ್ನಿಸುವರು. ಅವರನ್ನು ದೂರವಿಡಿ. ಖರ್ಚು ಕಡಿಮೆ ಮಾಡಲು ಮೊದಲು ಗಮನ ಕೊಡಿ.
ತುಲಾ
ಮನದ ಬೇಗುದಿ ಸಂತೋಷ ಅನುಭವಿಸಲು ಅಡ್ಡಿ ತರುತ್ತದೆ. ಉದ್ಯಮಿಗಳು ಯೋಚಿಸಿ ನಿರ್ಧಾರ ತಾಳಬೇಕು. ವಿದ್ಯಾರ್ಥಿಗಳಿಗೆ ಒತ್ತಡ.
ವೃಶ್ಚಿಕ
ಏನೋ ಮಾಡಲು ಹೋಗಿ ಇನ್ನೇನೋ ಆದೀತು. ಹಾಗಾಗಿ ನಿಮ್ಮ ಕೆಲಸದಲ್ಲಿ ಎಚ್ಚರ ವಹಿಸಿರಿ. ದುಡುಕಿನ ಕ್ರಮ ಪ್ರತಿಕೂಲವಾದೀತು.
ಧನು
ಹೆಚ್ಚು ಪ್ರಾಕ್ಟಿಕಲ್ ಆಗಿ ವರ್ತಿಸಿರಿ. ಸಣ್ಣ ವಿಷಯಕ್ಕೂ ಭಾವುಕರಾಗಿ ಚಿಂತಿಸದಿರಿ. ಆತ್ಮೀಯ ವ್ಯಕ್ತಿಯ ಜತೆ ವಿರಸ ಕಟ್ಟಿಕೊಳ್ಳಬೇಡಿ.
ಮಕರ
ಹೊಸ ಅವಕಾಶ ನಿಮಗೆ ತೆರೆಯಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಕಳೆದು ಹೋದುದಕ್ಕೆ ಚಿಂತಿಸುತ್ತಾ ಕೂರಬೇಡಿ.
ಕುಂಭ
ಕೆಲಸದ ಒತ್ತಡದಿಂದ ಹೊರಬಂದು ಸಂತೋಷ ಅನುಭವಿಸಿರಿ. ಕೇವಲ ದುಡಿಮೆಯೇ ಬದುಕಲ್ಲ. ಕೌಟುಂಬಿಕ ಪರಿಸರದಲ್ಲೂ ಆನಂದವಿದೆ.
ಮೀನ
ನಿಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆ ತನ್ನಿರಿ. ಇದರಿಂದ ಕೆಲವಾರು ಸಮಸ್ಯೆ ಪರಿಹಾರವಾಗಲಿದೆ. ಸಾಂಸಾರಿಕ ಸೌಹಾರ್ದ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ