ನಿಮ್ಮ ಆರೋಗ್ಯಕ್ಕೂ, ರುಚಿಗೂ ಒಳ್ಳೆಯ ಒಂದು ತಿಂಡಿ ಎಂದರೆ ಅದು ರವಾ ಉತ್ತಪಮ್. ಇದು ಪ್ರೋಟೀನ್ ಮತ್ತು ಫೈಬರ್‌ನಿಂದ ಸಮೃದ್ಧವಾಗಿದೆ. ಬೆಳಗಿನ ಉಪಹಾರಕ್ಕೂ, ಸಂಜೆ ಚಹಾ ಟೈಮ್‌ಗೆ ಪರ್ಫೆಕ್ಟ್ ಆಯ್ಕೆ.
ಬೇಕಾಗುವ ಪದಾರ್ಥಗಳು:
1 ಕಪ್ ರವಾ
1/4 ಕಪ್ ಸ್ವಲ್ಪ ಹುಳಿ ಮೊಸರು
1/4 ಕಪ್ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ
1 ದೊಡ್ಡ ಈರುಳ್ಳಿ, ನುಣ್ಣಗೆ ಕತ್ತರಿಸಿದ್ದು
1 ದೊಡ್ಡ ಟೊಮೆಟೊ, ನುಣ್ಣಗೆ ಕತ್ತರಿಸಿದ್ದು
2 ಹಸಿರು ಮೆಣಸಿನಕಾ, ಸಣ್ಣಗೆ ಹೆಚ್ಚಿದ್ದು
1 ಟೀಸ್ಪೂನ್ ತುರಿದ ಶುಂಠಿ
1/4 ಕಪ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
1 ಟೀಸ್ಪೂನ್ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಒಂದು ದೊಡ್ಡ ಬಟ್ಟಲಿನಲ್ಲಿ ರವೆ, ಹುಳಿ ಮೊಸರು ಮತ್ತು ಉಪ್ಪನ್ನು ಮಿಶ್ರಣ ಮಾಡಿಕೊಂಡು, ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪವಾಗುವವರೆಗೆ ನೀರನ್ನು ಸೇರಿಸಿ. 20 ನಿಮಿಷಗಳ ಅದನ್ನು ಮುಚ್ಚಿಡಿ.
ಈಗ ಈರುಳ್ಳಿ, ಕ್ಯಾಪ್ಸಿಕಂ, ಟೊಮೆಟೊ, ಹಸಿರು ಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು 1 ಚಮಚ ಎಣ್ಣೆಯನ್ನು ಬ್ಯಾಟರ್ ಗೆ ಸೇರಿಸಿ ಮತ್ತೊಮ್ಮೆ ಚನ್ನಾಗಿ ಮಿಶ್ರಣ ಮಾಡಿ.
ಈಗ ತವಾ ಬಿಸಿ ಮಾಡಿ ಒಂದು ಸೌಟ್ ಹಿಟ್ಟು ಸುರಿದು ಸುಮಾರು 2-3 ನಿಮಿಷಗಳ ಕಾಲ ಎರಡು ಬದಿಯನ್ನು ಚೆನ್ನಾಗಿ ಬೇಯಿಸಿದರೆ ರವಾ ಉತ್ತಪಮ್ ರೆಡಿ.