ಇತ್ತೀಚಿನ ದಿನಗಳಲ್ಲಿ ವಿಮಾನ ನಿಲ್ದಾಣಗಳಲ್ಲಿ ಲಗೇಜ್ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿವೆ. ಪ್ರಯಾಣಿಕರು ತಮ್ಮ ಲಗೇಜ್‌ಗಳು ತಡವಾಗಿ ತಲುಪುವುದು, ಬೇರೆಯವರ ಲಗೇಜ್ ತಮಗೆ ಸಿಗುವುದು ಅಥವಾ ಕೆಲವೊಮ್ಮೆ ಸಂಪೂರ್ಣವಾಗಿ ಲಗೇಜ್ ಕಳೆದು ಹೋಗುವಂತಹ ಪರಿಸ್ಥಿತಿಗಳು ಉಂಟಾಗುತ್ತವೆ. ಇದಕ್ಕೆ ಕಾರಣ, ಸಿಬ್ಬಂದಿ ಕೊರತೆ, ನಿರ್ವಹಣಾ ಲೋಪ. ಇಂತಹ ಪರಿಸ್ಥಿತಿಯಲ್ಲಿ ಪ್ರಯಾಣಿಕರು ತಮ್ಮ ಲಗೇಜ್ ನ ಸುರಕ್ಷತೆಗೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹುಮುಖ್ಯ.
ನಿಮ್ಮ ಲಗೇಜ್ ಬ್ಯಾಗ್‌ಗೆ ಲೇಬಲ್ ಅಂಟಿಸಿ
ಬ್ಯಾಗ್ ತಪ್ಪಿಹೋದರೂ ಅದು ನಿಮ್ಮ ಹೆಸರಿನಲ್ಲಿ ಗುರುತಿಸಲಾಗುವುದು. ಆದ್ದರಿಂದ ನಿಮ್ಮ ಲಗೇಜ್ ಮೇಲೆ ಸ್ಪಷ್ಟವಾದ ಲೇಬಲ್ ಅಂಟಿಸಬೇಕು. ಲೇಬಲ್‌ನಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸ ಇದ್ದರೆ ಅದು ನಿಮ್ಮ ಬ್ಯಾಗ್ ಪುನಃ ನಿಮಗೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಕೆಲವೊಮ್ಮೆ ನಿಮ್ಮ ವಿಳಾಸವನ್ನು ಸಹ ಸೇರಿಸಬಹುದು.
ಲಗೇಜ್ ಪ್ಯಾಕ್ ಮಾಡುವಾಗ ಮೌಲ್ಯಯುತ ವಸ್ತುಗಳನ್ನು ತಪ್ಪಿಸಿ
ಅತಿ ಮೌಲ್ಯಯುತ ವಸ್ತುಗಳು ಅಥವಾ ಭದ್ರತೆ ಇಲ್ಲದ ವಸ್ತುಗಳನ್ನು ಚೆಕ್ಡ್ ಲಗೇಜ್‌ನಲ್ಲಿ ಇರಿಸಲು ಬೇಡ. ಅದನ್ನು ಕ್ಯಾಬಿನ್ ಲಗೇಜ್‌ನಲ್ಲಿ (Cabin Baggage) ನಲ್ಲಿ ಇಟ್ಟುಕೊಳ್ಳಿ. ಪಾಸ್‌ಪೋರ್ಟ್, ಹಣ, ಇಲೆಕ್ಟ್ರಾನಿಕ್ ಉಪಕರಣಗಳು ಮೊದಲಾದ ಅಗತ್ಯ ವಸ್ತುಗಳನ್ನು Cabin ಬ್ಯಾಗ್‌ನಲ್ಲಿ ಇಡುವುದು ಉತ್ತಮ.
ವಿಮಾನ ಸಂಸ್ಥೆಗೆ ತಕ್ಷಣ ಮಾಹಿತಿ ನೀಡಿ
ನಿಮ್ಮ ಲಗೇಜ್ ತಲುಪದಿದ್ದರೆ ಅಥವಾ ತಪ್ಪಿದರೆ, ತಕ್ಷಣ ವಿಮಾನ ಸಂಸ್ಥೆಯ ಸಿಬ್ಬಂದಿಗೆ ವಿಮಾನ ನಿಲ್ದಾಣದಲ್ಲಿಯೇ ಮಾಹಿತಿ ನೀಡಬೇಕು. ನೇರವಾಗಿ ‘Lost and Found’ ವಿಭಾಗವನ್ನು ಸಂಪರ್ಕಿಸಿ, ದೂರು ದಾಖಲಿಸಿ.
ನಿಯಮಗಳು ಮತ್ತು ವಿಮಾನ ಸಂಸ್ಥೆಯ ಪರಿಹಾರ ನೀತಿಗಳನ್ನು ತಿಳಿದುಕೊಳ್ಳಿ
ಪ್ರತಿಯೊಂದು ವಿಮಾನಯಾನ ಸಂಸ್ಥೆಗೆ ಲಗೇಜ್ ಕಳೆದುಹೋಗಿದ್ದರೆ ಅಥವಾ ತಡವಾಗಿ ತಲುಪಿದರೆ ಅನುಸರಿಸಬೇಕಾದ ನಿಯಮಗಳು ಇವೆ. ಕೆಲ ಸಂಸ್ಥೆಗಳು ವಿಮಾನ ದೆಸೆಯಿಂದ ತಡವಾದರೆ ಪೂರಕ ಹಣಪಾವತಿ ಅಥವಾ ಇನ್ನೊಂದು ವ್ಯವಸ್ಥೆ ನೀಡುತ್ತವೆ. ಅದರ ಬಗ್ಗೆ ಅವರ ವೆಬ್‌ಸೈಟ್ ಅಥವಾ ಗ್ರಾಹಕ ಸೇವಾ ಕೇಂದ್ರದ ಮೂಲಕ ಮಾಹಿತಿ ಪಡೆಯುವುದು ಸೂಕ್ತ.
ಮುನ್ಸೂಚನೆಯೊಂದಿಗೆ ಪ್ರಯಾಣಕ್ಕೆ ಸಿದ್ಧತೆ
ಪ್ರತಿಯೊಂದು ಪ್ರಯಾಣಕ್ಕೂ ಮುನ್ನ ವಿಮಾನ ನಿಲ್ದಾಣದ ಪ್ರಸ್ತುತ ಪರಿಸ್ಥಿತಿ, ಸಿಬ್ಬಂದಿ ಸ್ಥಿತಿ, ವಿಮಾನ ಸಮಯದ ಬದಲಾವಣೆಗಳ ಬಗ್ಗೆ ನಿಖರವಾಗಿ ತಿಳಿದುಕೊಳ್ಳಿ. ಸಮಯಕ್ಕೂ ಮೊದಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಲಗೇಜ್ ಚೆಕ್‌ಇನ್ ಮಾಡಿಸಿ.
ವಿಮಾನ ನಿಲ್ದಾಣಗಳಲ್ಲಿ ಮುಂದುವರಿಯುತ್ತಿರುವ ಗೊಂದಲದ ಸಂದರ್ಭಗಳಲ್ಲಿ ಪ್ರಯಾಣಿಕರು ಸ್ವಲ್ಪ ಮುನ್ನೆಚ್ಚರಿಕೆ ತೆಗೆದುಕೊಂಡರೆ, ಲಗೇಜ್ ಕಳೆದುಹೋಗುವ ಸಮಸ್ಯೆಯನ್ನು ತಪ್ಪಿಸಬಹುದು. ಸರಿಯಾದ ಲೇಬಲ್, ಲಗೇಜ್ ನಿಯಮಗಳ ಅರಿವು ಮತ್ತು ತಕ್ಷಣದ ದೂರು ನೀಡುವ ಜವಾಬ್ದಾರಿ ಇದ್ದರೆ, ನಿಮ್ಮ ಪ್ರಯಾಣವನ್ನು ಸುರಕ್ಷಿತವಾಗಿ ಮಾಡಬಹುದು.