1998ರ ಕೊಯಮತ್ತೂರು ಸರಣಿ ಸ್ಫೋಟ ಪ್ರಕರಣ : 27 ವರ್ಷದ ನಂತರ ಆರೋಪಿ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

1998ರ ಕೊಯಮತ್ತೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಾದಿಕ್‌ನನ್ನು ಕರ್ನಾಟಕದ ವಿಜಯಪುರದಲ್ಲಿ ಬಂಧಿಸಿರುವುದಾಗಿ ತಮಿಳುನಾಡು ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಮಾಹಿತಿ ನೀಡಿದೆ.

1998 ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟದಲ್ಲಿ 58 ಜನರು ಸಾವನ್ನಪ್ಪಿ 250 ಜನರು ಗಾಯಗೊಂಡಿದ್ದರು. ಘಟನೆ ನಡೆದು ಸುಮಾರು 27 ವರ್ಷಗಳ ನಂತರ, ಕೊಯಮತ್ತೂರು ನಗರ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಕೊಯಮತ್ತೂರು ಘಟಕವು ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದೆ.

ಸಾದಿಕ್‌ ಕೊಯಮತ್ತೂರು ಮೂಲದವನಾಗಿದ್ದು, ರಾಜಾ, ಟೇಲರ್‌ ರಾಜಾ, ವಲರಂತ ರಾಜಾ, ಶಹಜಹಾನ್ ಅಬ್ದುಲ್ ಮಜೀದ್ ಮಕಂದರ್‌ ಮತ್ತು ಶಹಜಹಾನ್ ಶೇಖ್ ಹೀಗೆ ಹಲವು ಹೆಸರುಗಳನ್ನು ಇಟ್ಟುಕೊಂಡು ತಲೆಮರೆಸಿಕೊಂಡಿದ್ದ.

ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಭಯೋತ್ಪಾದನಾ ನಿಗ್ರಹ ದಳ ಮತ್ತು ಕೊಯಮತ್ತೂರು ನಗರ ಪೊಲೀಸರ ವಿಶೇಷ ತಂಡವು ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಿದೆ. ವಿಜಯಪುರದಲ್ಲಿ ಟೇಲರ್‌ ರಾಜಾ ಎನ್ನುವ ಹೆಸರಿನಲ್ಲಿದ್ದ ಸಾದಿಕ್‌ ವಾಸಿಸುತ್ತಿದ್ದ ಎಂದು ಎಟಿಎಸ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!