ಬಿಎಂಟಿಸಿಗೆ 148 ಹೊಸ ಎಲೆಕ್ಟ್ರಿಕ್​ ಬಸ್​ಗಳು ಸೇರ್ಪಡೆ, ಸಂಚಾರ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಎಂಟಿಸಿಗೆ ಹೊಸದಾಗಿ 148 ಟಾಟಾ ಎಲೆಕ್ಟ್ರಿಕ್ ಬಸ್​ಗಳು ಸೇರ್ಪಡೆಗೊಂಡಿವೆ. ಶಾಂತಿನಗರದಲ್ಲಿ ಶುಕ್ರವಾರ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೊಸ ಬಸ್​ಗಳಿಗೆ ಹಸಿರು ನಿಶಾನೆ ತೋರಿದ್ದಾರೆ.

ಒಂದು ಕಿ.ಮೀ. ಗೆ 41.1 ಪೈಸೆ ರೂ. ಗುತ್ತಿಗೆ ಆಧಾರದಲ್ಲಿ ಈ 148 ಬಸ್​ಗಳು ಸಂಚಾರ ಮಾಡಲಿವೆ. ಸದ್ಯ ಬಿಎಂಟಿಸಿಯಲ್ಲಿ ಎಸಿ ವೋಲ್ವೋ, ಸೇರಿದಂತೆ 6900 ಬಸ್​ಗಳಿದ್ದು, ಈ 148 ಬಸ್​ಗಳು ಸೇರ್ಪಡೆಯೊಂದಿಗೆ ಒಟ್ಟು 7,048 ಬಸ್​ಗಳನ್ನು ಬಿಎಂಟಿಸಿ ಹೊಂದಿದೆ.​ ಈ ಎಲೆಕ್ಟ್ರಿಕ್​ ಬಸ್​ಗಳು 12 ವರ್ಷಗಳ ಕಾಲ ನಗರದಲ್ಲಿ ಸಂಚಾರ ಮಾಡಲಿವೆ. ಈ ಬಸ್​ಗಳಿಗೆ ಕಂಡಕ್ಟರ್ ಬಿಎಂಟಿಸಿ ನಿಗಮದಿಂದ ನೇಮಕ ಮಾಡಿದರೆ, ಡ್ರೈವರ್​ಗಳು ಎಲೆಕ್ಟ್ರಿಕ್ ಬಸ್ ಕಂಪನಿಯಿಂದ ಕೆಲಸ ಮಾಡಲಿದ್ದಾರೆ. ಈ 148 ಬಸ್​ಗಳು ಬೆಂಗಳೂರಿನ 30 ಮಾರ್ಗಗಳಲ್ಲಿ ಸಂಚಾರ ನಡೆಸಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!