ಮಳೆಗಾಲದಲ್ಲಿ ಹಸಿರು ಪ್ರಕೃತಿಯನ್ನು ನೋಡುವುದೇ ಖುಷಿಯ ಅನುಭವ. ಆದರೆ ಆಹಾರದ ಸಂಗ್ರಹಣೆ—ವಿಶೇಷವಾಗಿ ತರಕಾರಿಗಳ ವಿಷಯಕ್ಕೆ ಬಂದಾಗ, ತೇವಾಂಶ ಹೆಚ್ಚಿರುವುದರಿಂದ ತರಕಾರಿಗಳು ಬೇಗನೇ ಹಾಳಾಗುತ್ತವೆ. ಈ ಸಂದರ್ಭದಲ್ಲಿ ಸರಿಯಾದ ಸಂಸ್ಕರಣೆ ಹಾಗೂ ಸಂರಕ್ಷಣಾ ವಿಧಾನಗಳನ್ನು ಬಳಸಿದರೆ ತರಕಾರಿಗಳನ್ನು ಹೆಚ್ಚು ದಿನಗಳ ತನಕ ತಾಜಾ ಆಗಿ ಇರಿಸಬಹುದು. ಮಳೆಗಾಲದಲ್ಲಿ ತರಕಾರಿಗಳನ್ನು ಸುರಕ್ಷಿತವಾಗಿ ಶೇಖರಿಸಲು ನೀವು ಅನುಸರಿಸಬಹುದಾದ 8 ಉಪಾಯಗಳು ಇಲ್ಲಿವೆ:
ತರಕಾರಿಗಳನ್ನು ಸರಿಯಾಗಿ ತೊಳೆಯಿರಿ
ಮಳೆಗಾಲದಲ್ಲಿ ಬಾಕ್ಟೀರಿಯಾ, ಶಿಲೀಂಧ್ರ ಮತ್ತು ಕೀಟಗಳ ಪ್ರಭಾವ ಹೆಚ್ಚಾಗಿರುತ್ತದೆ. ಗಟ್ಟಿ ತರಕಾರಿಗಳನ್ನು ಉಪ್ಪು ನೀರಿನಲ್ಲಿ ನೆನೆಸಿ ಚೆನ್ನಾಗಿ ತೊಳೆಯುವುದು ಅಗತ್ಯ. ಒಣಗಿದ ನಂತರ ಮಾತ್ರ ಅವುಗಳನ್ನು ಫ್ರಿಜ್ ಅಥವಾ ಕಪಾಟಿನಲ್ಲಿ ಶೇಖರಿಸಬೇಕು.
ಪ್ಲಾಸ್ಟಿಕ್ ಕವರ್‌ಗಳಿಗೆ ರಂಧ್ರ ಮಾಡಿ
ಬೆರು ತರಕಾರಿ (ಮೂಲಂಗಿ, ಕ್ಯಾರೆಟ್) ಸಂಗ್ರಹಿಸುವ ವೇಳೆ ಪ್ಲಾಸ್ಟಿಕ್ ಚೀಲಗಳಿಗೆ ಚಿಕ್ಕ ರಂಧ್ರಗಳನ್ನು ಮಾಡುವುದು ಉತ್ತಮ. ಇದು ತೇವಾಂಶವನ್ನು ಹೊರಹಾಕುವ ಮೂಲಕ ತರಕಾರಿ ಬೇಗನೆ ಹಾಳಾಗದಂತೆ ತಡೆಯುತ್ತದೆ. ಹಸಿಮೆಣಸು ಮತ್ತು ಕ್ಯಾಪ್ಸಿಕಂಗೂ ಈ ವಿಧಾನ ಸೂಕ್ತ.
ಸೊಪ್ಪು ತರಕಾರಿಗಳಿಗೆ ವಿಭಿನ್ನ ಸಂಸ್ಕರಣೆ
ಸೊಪ್ಪು ತರಕಾರಿಗಳನ್ನು ತಾವು ಮನೆಗೆ ತರುವ ತನಕ ಬೇರುಗಳೊಂದಿಗೆ ಇರುತ್ತವೆ. ಈ ಬೇರುಗಳನ್ನು ತಕ್ಷಣ ಕತ್ತರಿಸಿ ಎಲೆಗಳನ್ನು ತೊಳೆಯಬೇಕು. ನಂತರ ಬಟ್ಟೆ ಅಥವಾ ಕಾಗದದ ಟವಲ್‌ನಲ್ಲಿಟ್ಟು ಫ್ರಿಡ್ಜ್ ಗೆ ಇಡಬೇಕು.
ಆಲೂಗಡ್ಡೆ ಮತ್ತು ಈರುಳ್ಳಿ ಶೇಖರಣೆ ಪ್ರತ್ಯೇಕವಾಗಿ
ಮೊಳಕೆ ಬಂದ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಣ ಮತ್ತು ಗಾಳಿಯಾಡುವ ಸ್ಥಳದಲ್ಲಿ ಇಡಬೇಕು. ರೆಫ್ರಿಜರೇಟರ್‌ನಲ್ಲಿ ಇಡಬಾರದು, ಇದರಿಂದ ರುಚಿಯಲ್ಲಿ ಬದಲಾವಣೆ ಉಂಟಾಗಬಹುದು. ಬಟ್ಟೆ ಚೀಲ ಅಥವಾ ಕಾಗದದ ಚೀಲ ಬಳಸಿದರೆ ಉತ್ತಮ.
ನೈಸರ್ಗಿಕ ಸಂರಕ್ಷಕಗಳ ನೆರವು
ಬೇವಿನ ಎಲೆ, ಕರಿಬೇವಿನ ಎಲೆ ಹಾಗೂ ಬೆಳ್ಳುಳ್ಳಿ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾವನ್ನು ತಡೆಯುವ ನೈಸರ್ಗಿಕ ಗುಣಗಳನ್ನು ಹೊಂದಿವೆ. ಈ ವಸ್ತುಗಳನ್ನು ಫ್ರಿಜ್ ಅಥವಾ ತರಕಾರಿ ಪಾತ್ರೆಗಳಲ್ಲಿ ಇಟ್ಟರೆ ಅವು ಹೆಚ್ಚು ಕಾಲ ತಾಜಾ ಇರುತ್ತವೆ.
ಹಣ್ಣು ಮತ್ತು ತರಕಾರಿಗಳನ್ನು ಪ್ರತ್ಯೇಕಿಸಿ
ಹಣ್ಣುಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ. ಇದು ತರಕಾರಿಗಳನ್ನು ಬೇಗನೆ ಹಾಳಾಗುತ್ತವೆ. ಹೀಗಾಗಿ ಹಣ್ಣುಗಳು ಮತ್ತು ತರಕಾರಿಗಳನ್ನು ಪ್ರತ್ಯೇಕ ಶೇಖರಣೆಯಲ್ಲಿ ಇಡುವುದು ಸೂಕ್ತ.
ಫ್ರಿಡ್ಜ್‌ನ ಸ್ವಚ್ಛತೆ ಮುಖ್ಯ
ಫ್ರಿಡ್ಜ್‌ನ ಒಳಭಾಗದಲ್ಲಿ ಬ್ಯಾಕ್ಟೀರಿಯಾ ಕೂಡಾ ತರಕಾರಿಗಳನ್ನು ಹಾಳುಮಾಡಬಹುದು. ಆದ್ದರಿಂದ ವಿನೆಗರ್ ಅಥವಾ ಅಡಿಗೆ ಸೋಡಾದ ದ್ರಾವಣದಲ್ಲಿ ಫ್ರಿಜ್ ಅನ್ನು ತಿಂಗಳಿಗೆ ಒಂದಷ್ಟು ಬಾರಿ ಒರೆಸಿ ಒಣಗಿಸಬೇಕು.
ಸಂಸ್ಕರಣೆಯ ನಂತರವೇ ಶೇಖರಣೆ
ಮನೆಯಿಗೆ ತರಕಾರಿಗಳನ್ನು ತರುವವೇಳೆ ಅವುಗಳನ್ನು ತಕ್ಷಣ ತೊಳೆಯದೆ ನೇರವಾಗಿ ಫ್ರಿಜ್‌ನಲ್ಲಿ ಇಡುವುದು ತಪ್ಪು. ಮೊದಲೇ ತೊಳೆಯುವುದು, ಒಣಗಿಸುವುದು ಹಾಗೂ ಬೇರೆಬೇರೆ ಬಟ್ಟೆ ಅಥವಾ ಕಾಗದದ ಪ್ಯಾಕ್‌ನಲ್ಲಿ ಇಡುವುದು ಸೂಕ್ತ.