ಆಂಟಿ ರೇಬೀಸ್ ಇಂಜೆಕ್ಷನ್‌ಗಾಗಿ 20 ಕಿ.ಮೀ ನಡೆದು ಸಾಗಿದ 95 ವರ್ಷದ ಅಜ್ಜಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೇಬೀಸ್ ವಿರೋಧಿ ಇಂಜೆಕ್ಷನ್ ಪಡೆಯಲು 95 ವರ್ಷದ ವೃದ್ಧೆಯೊಬ್ಬರು ಸುಮಾರು 20 ಕಿ.ಮೀವರೆಗೂ ನಡೆದು ಸಾಗಿದ ಘಟನೆಯೊಂದು ಒಡಿಶಾದ ನುಪಾದಾದ ಸಿನಾಪಾಲಿ ಬ್ಲಾಕ್‌ನಲ್ಲಿರುವ ಸಿಕಾಬಹಲ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಂಗಳಬರಿ ಮಹಾರ ಎಂಬ ವೃದ್ಧ ಮಹಿಳೆಗೆ ಬೀದಿ ನಾಯಿಯೊಂದು ಕಚ್ಚಿತ್ತು. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಅಂತಿಮ ಇಂಜೆಕ್ಷನ್ ಪಡೆಯಬೇಕಿತ್ತು. ಆದರೆ. ಸಾರಿಗೆ ಸೌಲಭ್ಯವಿಲ್ಲ ಕಾರಣ, ಮಂಗಳಬರಿ ಮತ್ತು ಅವರ ಮಗ ಗುರುದೇವ್ ಮಹಾರ ಸಿನಾಪಾಲಿ ಅವರು ಸಮುದಾಯ ಆರೋಗ್ಯ ಕೇಂದ್ರವನ್ನು ತಲುಪಲು ಅನಿವಾರ್ಯವಾಗಿ ನಡೆದು ಸಾಗಬೇಕಾಯಿತು.

ಘಟನೆ ನನ್ನ ಗಮನಕ್ಕೆ ಬಂದಿದೆ. ಮುಷ್ಕರಕ್ಕೆ ಕರೆ ನೀಡಿರುವ ಸಂಘಟನೆಗಳೇ ಈ ಪರಿಸ್ಥಿತಿಗೆ ಕಾರಣ. ವೃದ್ಧ ಮಹಿಳೆಯನ್ನು ನಡೆಸಿಕೊಂಡು ಹೋಗುವ ಬದಲು ಕುಟುಂವು ಇತರರ ವಾಹನದ ಸಹಾಯ ಪಡೆದು ಕರೆದೊಯ್ಯಬಹುದಿತ್ತು ಎಂದು ಸಿನಾಪಾಲಿ ಬಿಡಿಒ ಕರ್ಮಿ ಓರಮ್ ಅವರು ಹೇಳಿದ್ದಾರೆ.

ಚಾಲಕರ ಸಂಘದ ಜಿಲ್ಲಾ ಅಧ್ಯಕ್ಷೆ ದುರ್ಗಾ ಚರಣ್ ಬಿಶಿ ಅವರು ಮಾತನಾಡಿ, ಪ್ರತಿಭಟನೆ ನಡೆಸುತ್ತಿದ್ದರೂ, ನಾವೇನು ಅಗತ್ಯ ಸೇವೆಗಳಿಗೆ ಅಡ್ಡಿಪಡಿಸಿಲ್ಲ. ಬಾಧಿತ ಕುಟುಂಬವಾಗಲಿ ಅಥವಾ ಆಡಳಿತವಾಗಲಿ ಈ ನಿರ್ದಿಷ್ಟ ಪರಿಸ್ಥಿತಿಯ ಬಗ್ಗೆ ನಮಗೆ ತಿಳಿಸಿಲ್ಲ. ನಮಗೆ ತಿಳಿಸಿದ್ದರೆ, ನಾವು ಖಂಡಿತವಾಗಿಯೂ ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತಿದ್ದೆವು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!