ಮಳೆಗಾಲದ ಆರಂಭದೊಂದಿಗೆ ತಲೆಹೊಟ್ಟಿನ ಸಮಸ್ಯೆಯೂ ಹೆಚ್ಚಾಗುತ್ತದೆ. ತೇವಾಂಶ ಹೆಚ್ಚಿರುವ ಹವಾಮಾನ ಕೂದಲಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ತಲೆ ಹೊಟ್ಟಿನಿಂದಾಗಿ ತುರಿಕೆ, ಕೂದಲು ಉದುರುವುದು, ನೆತ್ತಿಯ ಮೇಲೆ ರಕ್ತಸ್ರಾವದ ತಳಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಈ ತಲೆಹೊಟ್ಟಿಗೆ ಪರಿಹಾರವಾಗಿ ಅನೇಕರು ರಾಸಾಯನಿಕ ಶಾಂಪೂಗಳನ್ನು ಬಳಸುತ್ತಾರೆ. ಆದರೆ ಅವುಗಳು ತಾತ್ಕಾಲಿಕ ಪರಿಹಾರವನ್ನೇ ನೀಡುತ್ತವೆ, ಕೆಲವೊಮ್ಮೆ ಕೂದಲಿಗೆ ತೀವ್ರ ಹಾನಿಯನ್ನೂ ಉಂಟುಮಾಡುತ್ತವೆ. ಈ ಸಮಸ್ಯೆಗೆ ಮನೆಮದ್ದುಗಳೇ ಉತ್ತಮ ಪರಿಹಾರ. ಇಲ್ಲಿದೆ ಪರಿಣಾಮಕಾರಿ ಮನೆಮದ್ದುಗಳ ಸಂಪೂರ್ಣ ವಿವರ.
ಬೇಕಿಂಗ್ ಸೋಡಾ ಬಳಕೆ
ಬೆಕ್ಕಿಂಗ್ ಸೋಡಾ ಒಂದು ಶ್ರೇಷ್ಠ ಎಕ್ಸ್‌ಫೋಲಿಯೇಟಿಂಗ್ ಏಜೆಂಟ್. ತಲೆಚರ್ಮದ ಮೇಲಿನ ಸಡಿಲ ತಲೆಹೊಟ್ಟು, ಕೊಬ್ಬು, ಮತ್ತು ಶಿಲೀಂಧ್ರಗಳನ್ನು ತೆಗೆಯಲು ಇದು ಸಹಾಯ ಮಾಡುತ್ತದೆ. ನಿಮ್ಮ ಸಾಮಾನ್ಯ ಶಾಂಪೂಗೆ ಸ್ವಲ್ಪ ಬೇಕಿಂಗ್ ಸೋಡಾ ಬೆರೆಸಿ ನೆತ್ತಿಗೆ ಹಚ್ಚಿ, ಮೃದುವಾಗಿ ಮಸಾಜ್ ಮಾಡಿ, ನಂತರ ತೊಳೆದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಬೆಳ್ಳುಳ್ಳಿ – ಶಕ್ತಿಶಾಲಿ ಶಿಲೀಂಧ್ರ ವಿರೋಧಿ
ಬೆಳ್ಳುಳ್ಳಿಯು ಶಕ್ತಿಶಾಲಿ ಶಿಲೀಂಧ್ರ ನಿವಾರಕವಾಗಿದ್ದು, ತಲೆಚರ್ಮದ ಮೇಲೆ ಇರುವ ಶಿಲೀಂಧ್ರದ ಬೆಳವಣಿಗೆಯನ್ನು ತಡೆಯುತ್ತದೆ. 2-3 ಎಸಳು ಬೆಳ್ಳುಳ್ಳಿಯನ್ನು ನುರಿದು ನೀರಿನಲ್ಲಿ ಮಿಶ್ರಣ ಮಾಡಿ ನೆತ್ತಿಗೆ ಹಚ್ಚಿ. ಇದಕ್ಕೆ ಜೇನುತುಪ್ಪ ಮತ್ತು ಶುಂಠಿ ಸೇರಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ತಲೆಹೊಟ್ಟನ್ನು ನಿವಾರಣೆ ಮಾಡಬಹುದು. ಕೆಲ ನಿಮಿಷ ಕಾಯಿಸಿ, ನಂತರ ತೊಳೆಯಿರಿ.
ಮೊಸರು – ಪ್ರಕೃತಿಯಿಂದ ಬಂದ ಔಷಧ
ಮೊಸರು ತಲೆಗೆ ಹಚ್ಚಿದರೆ ತಲೆಚರ್ಮ ತಂಪಾಗುವುದು ಮಾತ್ರವಲ್ಲ, ಶಿಲೀಂಧ್ರ ಬೆಳವಣಿಗೆಯನ್ನೂ ತಡೆಯುತ್ತದೆ. ತಾಜಾ ಮೊಸರನ್ನು ತಲೆಗೆ ಹಚ್ಚಿ 10-15 ನಿಮಿಷ ಇಟ್ಟುಕೊಂಡು ನಂತರ ಶಾಂಪೂ ಬಳಸಿ ತೊಳೆಯಿರಿ. ವಾರದಲ್ಲಿ ಮೂರು ಬಾರಿ ಇದು ಮಾಡಿದರೆ ಸ್ಪಷ್ಟವಾದ ವ್ಯತ್ಯಾಸ ಕಾಣಬಹುದು.
ನಿಂಬೆ ರಸ – ಶುದ್ಧೀಕರಣದ ಶಕ್ತಿ
ನಿಂಬೆ ರಸ ಮತ್ತು ತೆಂಗಿನ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ತಲೆಗೆ ಮಸಾಜ್ ಮಾಡಿದರೆ ಶಿಲೀಂಧ್ರ ನಿವಾರಣೆಯಾಗುತ್ತದೆ. ಈ ಮಿಶ್ರಣವನ್ನು ಅರ್ಧ ಗಂಟೆ ತಲೆಗೆ ಹಚ್ಚಿಕೊಂಡು ನಂತರ ತೊಳೆಯಿರಿ. ನಿಂಬೆ ರಸ ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆದು, ತಲೆಚರ್ಮದ ಸ್ವಾಭಾವಿಕ pH ಸಮತೋಲನವನ್ನು ನಿರ್ವಹಿಸುತ್ತದೆ.
ಬೇವು – ಶುದ್ಧತೆಯ ಚಿಹ್ನೆ
ಬೇವಿನ ಎಲೆಗಳು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ವಿರುದ್ಧ ಹೋರಾಡುವ ಗುಣ ಹೊಂದಿವೆ. ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರಿನಿಂದ ತಲೆ ತೊಳೆಯುವುದು ಅಥವಾ ಬೇವಿನ ಎಣ್ಣೆಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ತಲೆಗೆ ಹಚ್ಚುವುದು ಉತ್ತಮ. ಬೇವಿನ ಪೇಸ್ಟ್ ಅನ್ನು ಸಹ ನೇರವಾಗಿ ತಲೆಗೆ ಹಚ್ಚಬಹುದು.
ತಲೆಹೊಟ್ಟಿನ ಸಮಸ್ಯೆ ಸರಳವಾದ ಮನೆಯಲ್ಲಿ ದೊರಕುವ ವಸ್ತುಗಳಿಂದಲೇ ನಿವಾರಣೆಯಾಗಬಹುದು. ಮುಖ್ಯವಾಗಿ ಶುದ್ಧತೆ ಮತ್ತು ನಿಯಮಿತ ಚಿಕಿತ್ಸೆಯೊಂದಿಗೆ ಈ ಮನೆಮದ್ದುಗಳನ್ನು ಅನುಸರಿಸಿದರೆ, ಮಳೆಗಾಲದ ತಲೆಚರ್ಮದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.