ಭಾರತೀಯ ಸ್ಟ್ರೀಟ್ ಫುಡ್ ಎಂದಾಗ ಮೊದಲಿಗೆ ನೆನಪಾಗೋದು ಗೋಲ್ಗಪ್ಪಾ ಅಥವಾ ಪಾನಿಪುರಿ. ಭಾರತದಲ್ಲಿ ಇದೊಂದು ಜನಪ್ರಿಯ ತಿಂಡಿ, ವಿಶೇಷವಾಗಿ ಸಂಜೆ ಸಮಯದಲ್ಲಿ ಬೀದಿ ಬದಿಗಳಲ್ಲಿ ಜನದಟ್ಟಣೆಗೆ ಕಾರಣವಾಗುವ ಆಹಾರ ಅಂದ್ರು ತಪ್ಪಾಗಲ್ಲ. ಕೈಗೆಟಕುವ ದರ, ಸಿಹಿ ಚಟ್ನಿ, ಜೊತೆಗೆ ಪಾನಿಯ ಖಾರ, ಅದ್ಭುತ. ಆದರೆ ಈ ಗೋಲ್ಗಪ್ಪಾ ಈಗ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅಮೆರಿಕ, ಯುಕೆ, ಚೀನಾ, ಜಪಾನ್, ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿಯೂ ಇದಕ್ಕೆ ಭಾರೀ ಡಿಮ್ಯಾಂಡ್ ಇದೆ. ಆದರೆ ರುಚಿಯ ಜೊತೆಗೆ ಈ ದೇಶಗಳಲ್ಲಿ ಗೋಲ್ಗಪ್ಪದ ಬೆಲೆ ಕೇಳಿದ್ರೆ ಆಶ್ಚರ್ಯವಾಗುವುದು ಖಚಿತ.
ಅಮೆರಿಕಾದಲ್ಲೂ ಗೋಲ್ಗಪ್ಪಾ ದಕ್ಕಿಸೋದು ದುಸ್ತರ!
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಹಲವು ರೀಲ್ಸ್ ಪ್ರಕಾರ, ಅಮೆರಿಕಾದಲ್ಲೊಂದು ಪ್ಲೇಟ್ ಗೋಲ್ಗಪ್ಪಕ್ಕೆ 600 ರಿಂದ 800 ರೂ. ತನಕ ಖರ್ಚು ಮಾಡಬೇಕಾಗುತ್ತೆ. ಅಂದರೆ, 7 ರಿಂದ 10 ಡಾಲರ್ ನೀಡಬೇಕು. ಆದರೆ ಇದರಲ್ಲಿ ಸಿಗೋದು ಕೇವಲ 6 ಅಥವಾ 8 ಪುರಿ! ಭಾರತದ 20 ರೂ.ಗೆ ಸಿಗುವ ರುಚಿಯಲ್ಲೆ ಆದರೂ ಬೆಲೆ ಶತಮಟ್ಟ ಹೆಚ್ಚಾಗಿದೆ. ಅಲ್ಲಿನ ಕೆಲವು ಅಂಗಡಿಗಳಲ್ಲಿ ಪ್ಯಾಕಿಂಗ್ ಗೊಲ್ಗಪ್ಪ ಕೂಡ ಲಭ್ಯವಿದ್ದು, 5 ಡಾಲರ್ ಗೆ 50 ಪುರಿಗಳ ಪ್ಯಾಕ್ ಸಿಗುತ್ತದೆ.
ಫ್ರಾನ್ಸ್ ನಲ್ಲಿ ಪಾನಿಪುರಿಗೆ 1089 ರೂ!
ಪಾನಿಪುರಿ ಬೆಲೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸುಮಾರು 300, ಚೀನಾದಲ್ಲಿ 350, ಕೆನಡಾದಲ್ಲಿ 450, ಜಪಾನ್‌ನಲ್ಲಿ 520, ಮಲೇಷಿಯಾದಲ್ಲಿ 200 ಆಗಿದ್ದರೆ, ಫ್ರಾನ್ಸ್‌ನಲ್ಲಿ ಮಾತ್ರ ಅದ್ಭುತ ಬೆಲೆ – 1089! ಅಲ್ಲಿ ಒಂದೇ ಪ್ಲೇಟ್‌ಗಾಗಿ ನೀವು ಈಷ್ಟು ಮೊತ್ತ ಖರ್ಚು ಮಾಡಬೇಕು. ಆದರೆ 8 ಪುರಿ ಸಿಗುತ್ತವೆ.
ವೈಟ್ ಹೌಸ್ ನಲ್ಲೂ ಪಾನಿಪುರಿ ಸರ್ವ್!
ಅಮೆರಿಕದ ವೈಟ್ ಹೌಸ್‌ನಲ್ಲಿ ನಡೆದ ಒಬ್ಬ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಪಾನಿಪುರಿ ಸರ್ವ್ ಮಾಡಲಾಗಿತ್ತು ಎಂಬ ಮಾಹಿತಿ ಭಾರೀ ಟ್ರೆಂಡಿಂಗ್ ಆಗಿತ್ತು. ಇದರಿಂದ ಈ ಊಟದ ಅಂತಾರಾಷ್ಟ್ರೀಯ ಕ್ರೇಜ್ ಎಷ್ಟು ಹೆಚ್ಚಿದೆಯೆಂಬುದು ಸ್ಪಷ್ಟವಾಗುತ್ತದೆ.
ಹೆಚ್ಚು ಬೆಲೆಗೆ ಕಾರಣವೇನು?
ಅನೇಕ ದೇಶಗಳಲ್ಲಿ ಭಾರತಕ್ಕಿಂತ ಜೀವನಮಟ್ಟ, ಸಂಬಳ, ಆಹಾರದ ಲಭ್ಯತೆ ಹಾಗೂ ಮಾರಾಟದ ಮೊತ್ತ ಎಲ್ಲವೂ ಭಿನ್ನ. ಅಷ್ಟಕ್ಕೂ ಅಲ್ಲಿಯ ಭಾರತೀಯ ಸಮುದಾಯ, ಮತ್ತು ಭಾರತೀಯ ರುಚಿಗೆ ಆಸಕ್ತರಾಗಿರುವ ಸ್ಥಳೀಯರ ಕಾರಣದಿಂದಲೂ ಈ ಆಹಾರ ಪ್ರಚಾರಕ್ಕಷ್ಟೇ ಅಲ್ಲ, ಬೆಲೆಗೂ ಏರಿಕೆಯಾಗುತ್ತಿದೆ.