ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಮಿಡಿ ಕಿಲಾಡಿಗಳು ಶೋ ಮೂಲಕ ಎಲ್ಲರ ಮಾತಾಗಿದ್ದ ಹಾಸ್ಯ ಕಲಾವಿದ ಸಂಜು ಬಸಯ್ಯ ತನ್ನ ಪತ್ನಿಗೆ ಇನ್ಸ್ಟಾಗ್ರಾಮ್ ಅಶ್ಲೀಲವಾಗಿ ಮೆಸೇಜ್ ಕಳಿಸಿದ್ದ ಯುವಕನಿಗೆ ಬುದ್ಧಿ ಹೇಳಿ ಕಳುಹಿಸಿದ್ದಾನೆ.
ಸಂಜು ಬಸಯ್ಯ ಪತ್ನಿ ಪಲ್ಲವಿ ಬಳ್ಳಾರಿ ಯುವಕನೊಬ್ಬ ಅಶ್ಲೀಲವಾಗಿ ಮೆಸೇಜ್, ಹಾಗೂ ಫೋಟೋಗಳನ್ನು ಕಳುಹಿಸಿ ಹಿಂಸೆ ನೀಡುತ್ತಿದ್ದವನಿಗೆ ತಕ್ಕ ಪಾಠ ಕಲಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ವಿಜಯನಗರ ಮೂಲದ ಯುವಕ ಸಂಜು ಬಸಯ್ಯ ಅಶ್ಲೀಲ ಮೆಸೇಜ್ ಹಾಕಿದ್ದ. ಆಗ ತಾಳ್ಮೆ ಕಳೆದುಕೊಳ್ಳದೆ ನಟ ಸಂಜು ಬಸಯ್ಯ ಪೊಲೀಸರ ಗಮನಕ್ಕೆ ತಂದಿದ್ದಾರೆ.
ನಟ ದೂರು ನೀಡುತ್ತಿದ್ದಂತೆ ಬೈಲಹೊಂಗಲ ಠಾಣೆ ಪೊಲೀಸರು ಅಲರ್ಟ್ ಆಗಿದ್ದಾರೆ. ಅಶ್ಲೀಲ ಸಂದೇಶ ಕಳಿಸಿದವನಿಗೆ ಠಾಣೆಗೆ ಕರೆಸಿ ಬುದ್ದಿ ಹೇಳಿದ್ದಾರೆ. ಆಗ ಯುವಕನ ಭವಿಷ್ಯ ಹಾಳಾಗಬಾರದೆಂದು ನಟ ಸಂಜು ಬಸಯ್ಯ ಬುದ್ದಿ ಹೇಳಿ ಕಳಿಸಿದ್ದಾರೆ.