ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿಬಿದ್ದ ಪರಿಣಾಮ ಮೀನುಗಾರ ಮೃತಪಟ್ಟ ದುರ್ಘಟನೆ ಪಡುಕೆರೆಯಲ್ಲಿ ಶುಕ್ರವಾರ ಸಂಭವಿಸಿದೆ.
ಉದ್ಯಾವರ ಪಿತ್ರೋಡಿ ನಿವಾಸಿ ನೀಲಾಧರ (೪೮) ಮೃತ ವ್ಯಕ್ತಿ. ಲೀಲಾಧರ್ ಇತರ ಮೀನುಗಾರರೊಂದಿಗೆ ನಾಡದೋಣಿ ಮೀನುಗಾರಿಕೆಗಾಗಿ ತೆರಳಿದ್ದು ಸಮುದ್ರದಲ್ಲಿ ಬಲೆಯನ್ನು ಬೀಸುವ ಸಮಯದಲ್ಲಿ ಸಮುದ್ರದ ಅಲೆಯ ಹೊಡೆತಕ್ಕೆ ನಾಡದೋಣಿ ಮಗುಚಿಬಿದ್ದಿದೆ. ಈ ವೇಳೆ ದೋಣಿಯ ಆಡಿ, ಬಲೆಗಳ ನಡುವೆ ಸಿಲುಕಿ ಮೃತಪಟ್ಟಿದ್ದಾರೆ.
ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.