ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಅಮೋಘ ಪ್ರದರ್ಶನ ತೋರಿದ್ದಾರೆ.
ಮೊದಲ ದಿನ 251 ರನ್ಗಳಿಸಿದ್ದ ಇಂಗ್ಲೆಂಡ್ ತಂಡವನ್ನ ಇಂದು 387ಕ್ಕೆ ಆಲೌಟ್ ಆಗಿದೆ. ಜೋ ರೂಟ್ 104 ರನ್ಗಳ ಶತಕ ಸಿಡಿಸಿ ತಂಡದ ಟಾಪ್ ಸ್ಕೋರರ್ ಎನಿಸಿಕೊಂಡರು.
ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮ್ಯಾಚ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಮೊದಲ ಸೆಷನ್‌ನಲ್ಲಿ ಆರಂಭಿಕ ಬ್ಯಾಟರ್‌ಗಳಾದ ಬೆನ್ ಡಕೆಟ್ ಹಾಗೂ ಜಾಕ್ ಕ್ರಾಲಿ ವಿಕೆಟ್ ಕಳೆದುಕೊಂಡಿತು. ನಂತರ ಬಂದ ಒಲ್ಲಿ ಪೋಪ್ (44) ಹಾಗೂ , ಜೋ ರೂಟ್ 3ನೇ ವಿಕೆಟ್ಗೆ 109 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದ್ದರು. ಪೋಪ್ 104 ಎಸೆತಗಳಲ್ಲಿ 44 ರನ್ಗಳಿಸಿ ಔಟ್ ಆದರು. ನಂತರ ಬಂದ ಹ್ಯಾರಿ ಬ್ರೂಕ್ ಕೇವಲ 11 ರನ್ಗಳಿಸಿ ಬುಮ್ರಾ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಆದರೆ 5ನೇ ವಿಕೆಟ್ಗೆ ರೂಟ್ ಜೊತೆ ಒಂದಾದ ನಾಯಕ ಬೆನ್ ಸ್ಟೋಕ್ಸ್ 88 ರನ್ ಸೇರಿಸಿದ್ದರು.
ಮೊದಲ ದಿನ ರೂಟ್ 99 ಹಾಗೂ ಬೆನ್ ಸ್ಟೋಕ್ಸ್ 39 ರನ್ಗಳಿಂದ ಎರಡನೇ ದಿನದಾಟ ಆರಂಭಿಸಿದರು. ಆದರೆ ಸ್ಟೋಕ್ಸ್ 44 ರನ್ಗಳಿಸಿದ್ದ ವೇಳೆ ಬುಮ್ರಾ ಯಾರ್ಕರ್ಗೆ ತಲೆಬಾಗಿ ಪೆವಿಲಿಯನ್ ಸೇರಿಕೊಂಡರು. 99 ರನ್ಗಳಿಸಿದ್ದ ಜೋ ರೂಟ್ ಆಟ 104ಕ್ಕೆ ಸೀಮಿತವಾಯಿತು. ಅದೇ ಓವರ್ನ ನಂತರದ ಎಸೆತದಲ್ಲೇ ಕ್ರಿಸ್ ವೋಕ್ಸ್ (0) ಕೂಡ ಬುಮ್ರಾಗೆ 4ನೇ ಬಲಿಯಾದರು.
ಜೇಮಿ ಸ್ಮಿತ್ 56 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 51 ರನ್ಗಳಿಸಿದರೆ, ಬೆನ್ ಕಾರ್ಸ್ 83 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 56 ರನ್ಗಳಿಸಿ ಔಟ್ ಆದರು.
ಜಸ್ಪ್ರೀತ್ ಬುಮ್ರಾ 74 ರನ್ ನೀಡಿ 5 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 85ಕ್ಕೆ2 ವಿಕೆಟ್, ನಿತೀಶ್ ಕುಮಾರ್ ರೆಡ್ಡಿ 62ಕ್ಕೆ 2 ವಿಕೆಟ್, ರವೀಂದ್ರ ಜಡೇಜಾ 29ಕ್ಕೆ1 ವಿಕೆಟ್ ಪಡೆದು ಮಿಂಚಿದರು.