ಹೊಸದಿಗಂತ ವರದಿ,ಭಟ್ಕಳ:
ಇಲ್ಲಿನ ನಗರ ಪೊಲೀಸ್ ಠಾಣೆಗೆ ಈ ಮೇಲ್ ಸಂದೇಶ ಕಳಿಸುವ ಮೂಲಕ ಭಟ್ಕಳ ಪಟ್ಟಣವನ್ನು ಸ್ಪೋಟಿಸುವ ಬೆದರಿಕೆ ಹಾಕಲಾಗಿದ್ದು ಪಟ್ಟಣಕ್ಕೆ ಬಾಂಬ್ ನಿಷ್ಕ್ರಿಯ ದಳ,ಶ್ವಾನ ದಳ ಆಗಮಿಸಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ.
ಕಣ್ಣನ್ ಗುರುಸ್ವಾಮಿ ಎನ್ನುವವರ ಹೆಸರಿನಲ್ಲಿ ಜುಲೈ 10 ಶುಕ್ರವಾರ ಬೆಳಿಗ್ಗೆ ಎರಡು ಬಾರಿ [email protected]
ಮೇಲೆ ಐಡಿಯಿಂದ [email protected] ಮೇಲ್ ಐಡಿಗೆ ಈ ಮೇಲ್ ಸಂದೇಶ ರವಾನಿಸಲಾಗಿದ್ದು ಭಟ್ಕಳ ನಗರದಲ್ಲಿ ಬಾಂಬ್ ಸ್ಪೋಟಕ್ಕೆ ಯೋಜನೆ ರೂಪಿಸಿರುವುದಾಗಿ 24 ಗಂಟೆಗಳಲ್ಲಿ ಎಲ್ಲಾ ಬಾಂಬುಗಳು ಸ್ಪೋಟಗೊಳ್ಳಲಿವೆ ಎಂಬ ಬೆದರಿಕೆ ಹಾಕಲಾಗಿದೆ.
ಈ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ನವೀನ್ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದು ಭಟ್ಕಳದ ಪ್ರಮುಖ ಸ್ಥಳಗಳಲ್ಲಿ, ಜನ ಸಂದಣಿ ಪ್ರದೇಶಗಳಲ್ಲಿ ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಗುತ್ತಿದೆ.