ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ‘ಬಿಗ್ ಬ್ಯೂಟಿಫುಲ್ ಮಸೂದೆ’ಯಜಾರಿಗೆ ತಂದಿದ್ದಾರೆ. ಈ ಕಾಯಿದೆಯಡಿ ವೀಸಾ ಇಂಟಿಗ್ರೀಟಿ ಫೀಜು ಅನ್ನು ಪರಿಚಯಿಸಿದ್ದಾರೆ. ವಲಸೆಯೇತರ ವೀಸಾ ಕೆಟಗರಿಗಳಿಗೆ 250 ಡಾಲರ್ ಶುಲ್ಕ ವಿಧಿಸುತ್ತಿದ್ದಾರೆ. ಹೀಗಾಗಿ ಅಮೆರಿಕಾಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು ಈಗ ಹೆಚ್ಚಿನ ಶುಲ್ಕವನ್ನು ಪಾವತಿಸಿಯೇ ಅಮೆರಿಕಾಗೆ ಎಂಟ್ರಿ ಆಗಬೇಕಾಗಿದೆ.
2026 ರಿಂದ ಕ್ರೀಡೆ, ಶಿಕ್ಷಣ, ಪ್ರವಾಸ ಅಥವಾ ಉದ್ಯೋಗ ನಿಮಿತ್ತ ಅಮೆರಿಕಕ್ಕೆ ಹೋಗುವವರಿಗೆ ನೀಡಲಾಗುವ ವೀಸಾಗಳಿಗೆ ಈ ಹೊಸ ಶುಲ್ಕ ಪದ್ಧತಿ ಅನ್ವಯವಾಗುತ್ತದೆ. ಈಗ ಚಾಲ್ತಿಯಲ್ಲಿರುವ ಶುಲ್ಕದ ಬದಲು, 250 ಡಾಲರ್ ಗಳ ಶುಲ್ಕವನ್ನು ಹೇರಲಾಗಿದೆ. ಹಾಗಾಗಿ, ಪ್ರಸ್ತುತ ಈ ಮೇಲಿನ ವೀಸಾಗಳ ಮೇಲಿನ ಶುಲ್ಕ 16 ಸಾವಿರ ರೂ. ಇದೆ. ಹೊಸ ಶುಲ್ಕ ಪದ್ಧತಿ ಜಾರಿಯಾದ ಮೇಲೆ 40 ಸಾವಿರ ರೂ. ಅಥವಾ ಅದಕ್ಕೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಅಮೆರಿಕಾದ ವೀಸಾ ಇಂಟಿಗ್ರೀಟಿ ಫೀಜು ಅಂತ 250 ಡಾಲರ್ ಅನ್ನು ಪಾವತಿಸಬೇಕು. 250 ಡಾಲರ್ ಅಂದರೇ, ಭಾರತದ ರೂಪಾಯಿ ಲೆಕ್ಕದಲ್ಲಿ 21,400 ರೂಪಾಯಿ. ಇದು ನಾನ್ ರಿಫಂಡಬಲ್ ಸರ್ ಚಾರ್ಜ್. ಹಾಲಿ ಇರುವ ವೀಸಾ ಶುಲ್ಕಗಳ ಜೊತೆಗೆ ಇದನ್ನು ಪಾವತಿಸಬೇಕು. ವೀಸಾ ಕೊಡುವಾಗ ಇದನ್ನು ಕಡ್ಡಾಯವಾಗಿ ಪಾವತಿಸಬೇಕು ರಾಜತಾಂತ್ರಿಕ ವೀಸಾ ಹೊಂದಿರುವವರಿಗೆ ಮಾತ್ರ ಈ ಇಂಟಿಗ್ರಿಟಿ ಫೀಜುನಿಂದ ವಿನಾಯಿತಿ ನೀಡಲಾಗಿದೆ.
ಭಾರತದಿಂದ ಅಮೆರಿಕಾಗೆ ಹೋಗುವ ವಿದ್ಯಾರ್ಥಿಗಳು, ಟೆಕ್ಕಿಗಳು, ಟೂರಿಸ್ಟ್, ಬ್ಯುಸಿನೆಸ್ ಪ್ರಯಾಣಿಕರು ಈ ಹೆಚ್ಚುವರಿ ಇಂಟಿಗ್ರೀಟಿ ಶುಲ್ಕ ಪಾವತಿಸಿಯೇ ಅಮೆರಿಕಾಗೆ ಎಂಟ್ರಿ ಕೊಡಬೇಕಾಗಿದೆ.
ಸದ್ಯ ಅಮೆರಿಕಾಗೆ ಹೋಗುವ ಭಾರತೀಯ ವಿದ್ಯಾರ್ಥಿಗಳು, ಟೂರಿಸ್ಟ್ ಗಳು 185 ಡಾಲರ್ ಶುಲ್ಕ ಪಾವತಿಸಬೇಕಾಗಿದೆ. ಇದು 2026 ರಲ್ಲಿ 250 ಡಾಲರ್ಗೆ ಏರಿಕೆಯಾಗುತ್ತೆ . ವಿದ್ಯಾರ್ಥಿಗಳು, ಟೂರಿಸ್ಟ್ಗಳು 15,800 ರೂಪಾಯಿ ಪಾವತಿಸುತ್ತಿದ್ದವರು, 2026 ರಲ್ಲಿ ಬರೋಬ್ಬರಿ 40,502 ರೂಪಾಯಿ ಪಾವತಿಸಬೇಕಾಗುತ್ತೆ . ಈಗಿರುವ ವೀಸಾ ಶುಲ್ಕಕ್ಕಿಂತ ಎರಡೂವರೆ ಪಟ್ಟು ಹೆಚ್ಚು ಶುಲ್ಕ ಪಾವತಿಸಬೇಕಾಗಿದೆ. ಬಿ-1, ಬಿ-2 ಹಾಗೂ ಎಚ್-1ಬಿ ವೀಸಾ, ಎಫ್ ವೀಸಾಗಳಿಗೆ ಹೆಚ್ಚಿನ ಶುಲ್ಕ ಪಾವತಿಸಬೇಕಾಗಿದೆ.
ವೀಸಾ ನಿಯಮ ಪಾಲಿಸಿದ್ರೆ ರೀಫಂಡ್
ವೀಸಾ ಇಂಟಿಗ್ರೀಟಿ ಶುಲ್ಕವನ್ನು ಅಮೆರಿಕಾ ವಿಧಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಉದ್ಭವವಾಗಬಹುದು. ಅಮೆರಿಕಾಗೆ ಭೇಟಿ ನೀಡುವ ವಿದೇಶಿಯರು ಕಾನೂನುಬದ್ಧವಾಗಿ ವರ್ತಿಸಿ, ವೀಸಾ ಅವಧಿ ಮುಗಿದ ತಕ್ಷಣವೇ ಅಮೆರಿಕಾ ಬಿಟ್ಟು ಹೋಗಲೆಂದು ಈ ಶುಲ್ಕವನ್ನು ಪಾವತಿಸುವುದನ್ನು ಕಡ್ಡಾಯ ಮಾಡಲಾಗಿದೆ. ಇದು ಸೆಕ್ಯೂರಿಟಿ ಡಿಫಾಸಿಟ್ ಇದ್ದಂತೆ. ವೀಸಾ ನಿಯಮಗಳನ್ನು ಪಾಲಿಸುವವರಿಗೆ ರೀಫಂಡ್ ಮಾಡುವ ಮೂಲಕ ಈ ಹಣಕಾಸು ಪೋತ್ಸಾಹವನ್ನು ನೀಡಲಾಗುತ್ತೆ.