ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ವಿರುದ್ಧ ಒಂದಲ್ಲ ಒಂದು ರೀತಿಯಲ್ಲಿ ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಪಾಕಿಸ್ತಾನದ ಮತ್ತೊಂದು ಕುತಂತ್ರ ಬಯಲಾಗಿದೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಾದ ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಭಾರತದ ಮೇಲೆ ದಾಳಿ ನಡೆಸಲು ನೇಪಾಳವನ್ನು ಮಾರ್ಗವಾಗಿ ಬಳಸಲು ಮುಂದಾಗಿವೆ ಎನ್ನಲಾಗಿದೆ. ಈ ಬಗ್ಗೆ ನೇಪಾಳ ಅಧ್ಯಕ್ಷರ ಸಲಹೆಗಾರ ಸುನಿಲ್ ಬಹದ್ದೂರ್ ಥಾಪಾ ಎಚ್ಚರಿಕೆ ನೀಡಿದ್ದಾರೆ.
ಕಠ್ಮಂಡುವಿನಲ್ಲಿ ನೇಪಾಳ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಕೋಆಪರೇಷನ್ ಅಂಡ್ ಎಂಗೇಜ್‌ಮೆಂಟ್ (NIICE) ಆಯೋಜಿಸಿದ್ದ ಉನ್ನತ ಮಟ್ಟದ ವಿಚಾರ ಸಂಕಿರಣದಲ್ಲಿ ದಕ್ಷಿಣ ಏಷ್ಯಾದಲ್ಲಿನ ಭಯೋತ್ಪಾದನಾ ಬೆದರಿಕೆಗಳನ್ನು ಪರಿಹರಿಸುವ ಬಗ್ಗೆ ಈ ಕಾರ್ಯಕ್ರಮದಲ್ಲಿ ಚರ್ಚಿಸಲಾಗಿದೆ. ಕಾರ್ಯಕ್ರಮದಲ್ಲಿ ಪ್ರಾದೇಶಿಕ ತಜ್ಞರು ಮತ್ತು ನೀತಿ ನಿರೂಪಕರ ಭಾಗವಹಿಸುವಿಕೆಯನ್ನು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಥಾಪಾ, ಭಾರತದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗಿ ನೇಪಾಳದ ಮೇಲೆ ಪರಿಣಾಮ ಬೀರುತ್ತವೆ, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಹಾಳುಮಾಡುತ್ತವೆ ಎಂದು ಎಚ್ಚರಿಕೆ ನೀಡಿದರು.
ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡುವುದು ಸಾರ್ಕ್‌ನ ಪರಿಣಾಮಕಾರಿತ್ವ ಮತ್ತು ವಿಶಾಲ ಪ್ರಾದೇಶಿಕ ಏಕೀಕರಣಕ್ಕೆ ಪ್ರಮುಖ ಅಡಚಣೆಯಾಗಿದೆ. ಅಕ್ರಮ ಹಣ ವರ್ಗಾವಣೆಯ ವಿರುದ್ಧ ಕಠಿಣ ಕ್ರಮ, ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಭಾರತದೊಂದಿಗೆ ಗಡಿಗಳಲ್ಲಿ ಜಂಟಿ ಗಸ್ತು ಸೇರಿದಂತೆ ಬಲವಾದ ಭಯೋತ್ಪಾದನಾ ನಿಗ್ರಹ ಸಹಕಾರವನ್ನು ವಿಚಾರ ಸಂಕಿರಣವು ಒತ್ತಾಯಿಸಿತು. ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದಿದ್ದಾರೆ.
ಭಾರತ ಮತ್ತು ನೇಪಾಳ 1,751 ಕಿಮೀ ಉದ್ದದ ತೆರೆದ ಗಡಿಯನ್ನು ಹಂಚಿಕೊಂಡಿವೆ, ಈ ಗಡಿಯು ಭಯೋತ್ಪಾದಕರು ಭಾರತಕ್ಕೆ ನುಸುಳಲು ಸುಲಭಗೊಳಿಸುತ್ತದೆ. ಅಲ್ಲದೇ ಉಗ್ರರು ಆಗಾಗ್ಗೆ ತಮ್ಮ ಗುರುತನ್ನು ಮರೆಮಾಡಲು ನಕಲಿ ನೇಪಾಳದ ದಾಖಲೆಗಳನ್ನು ಬಳಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ, ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್‌ನಂತಹ ಪಾಕಿಸ್ತಾನ ಮೂಲದ ಉಗ್ರರು ನೇಪಾಳ ಮೂಲಕ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ ಅರೆಸ್ಟ್ ಆಗಿದ್ದಾರೆ.