ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಶಿಯಲ್ ಮೀಡಿಯಾ ವೇದಿಕೆ X (ಹಿಂದೆ ಟ್ವಿಟರ್) ಭಾರತದ ಬಳಕೆದಾರರಿಗೆ ಸಿಹಿಸುದ್ದಿ ನೀಡಿದೆ. ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಪ್ರೀಮಿಯಂ ಚಂದಾದಾರಿಕೆ ದರವನ್ನು ಶೇ.48 ರಷ್ಟು ಕಡಿತಗೊಳಿಸಿ, ಈಗ ಕೆವಲ 470ಕ್ಕೆ ನಿಗದಿಪಡಿಸಲಾಗಿದೆ. ಈ ಹಿಂದೆ ಈ ಸೇವೆಗೆ ಬಳಕೆದಾರರು ಮಾಸಿಕ 900 ಪಾವತಿಸಬೇಕಾಗುತ್ತಿತ್ತು.
ಅದನ್ನು ಹೊಂದಿಕೊಂಡಂತೆ, X ವೆಬ್ ಬಳಕೆದಾರರ ಪ್ರೀಮಿಯಂ ಸೇವೆಯ ದರ ಕೂಡ ಶೇ.34ರಷ್ಟು ಕಡಿತಗೊಂಡಿದ್ದು, ಈಗ 427ಕ್ಕೆ ಲಭ್ಯವಿದೆ. ಮೊದಲು ಈ ಸೇವೆಗೆ 650 ವಿಧಿಸಲಾಗುತ್ತಿತ್ತು. ಕಂಪನಿಯು ತನ್ನ ಮೂಲ ಪ್ರೀಮಿಯಂ ಚಂದಾದಾರಿಕೆ ದರದಲ್ಲಿಯೂ ಬದಲಾವಣೆ ತಂದಿದ್ದು, ಹಿಂದಿನ 243.75 ನಿಂದ 170ಕ್ಕೆ ಇಳಿಸಿದೆ. ವಾರ್ಷಿಕ ಚಂದಾದಾರಿಕೆ ದರ 2,590.48ರಿಂದ 1,700ಕ್ಕೆ ಇಳಿಯಲಾಗಿದೆ.
ಪ್ರೀಮಿಯಂ ಪ್ಲಸ್ ಸೌಲಭ್ಯಗಳಿಗೆ ಹೆಚ್ಚಿದ ಆಕರ್ಷಣೆ
X ನ ಪ್ರೀಮಿಯಂ ಪ್ಲಸ್ ಸೇವೆ, ಜಾಹೀರಾತು ಮುಕ್ತ ಅನುಭವದ ಜೊತೆಗೆ, ಲೇಖನ ಬರೆಯುವ ಸೌಲಭ್ಯ, SuperGrok ಪ್ರವೇಶದಂತಹ ಆಧುನಿಕ ತಂತ್ರಜ್ಞಾನ ಸೇವೆಗಳನ್ನು ಒಳಗೊಂಡಿದೆ. ವೆಬ್ ಆವೃತ್ತಿಯಲ್ಲಿ ಈ ಪ್ಲಾನ್ ಈಗ 2,570 ಕ್ಕೆ ಲಭ್ಯವಿದೆ. ಈ ಹಿಂದೆ ಇದರ ಬೆಲೆ 3,470 ಆಗಿತ್ತು.
ಮೊಬೈಲ್ ಆವೃತ್ತಿಯಲ್ಲಿ ಈ ಪ್ರೀಮಿಯಂ ಪ್ಲಸ್ ಪ್ಲಾನ್ಗೆ ಮೊದಲು ಮಾಸಿಕ 5,100 ವಿಧಿಸಲಾಗುತ್ತಿತ್ತು. ಇತ್ತೀಚೆಗೆ ಈ ದರವನ್ನು ಕಡಿತಗೊಳಿಸಿ 3,000ಕ್ಕೆ ತಂದು ಇಡಲಾಗಿದೆ.
ದರ ಕಡಿತದ ಹಿಂದಿನ ಕಾರಣ
ಮೊಬೈಲ್ ಆಪ್ ಸ್ಟೋರ್ಗಳು ಹೆಚ್ಚುವರಿ ಶುಲ್ಕ ವಿಧಿಸುತ್ತಿರುವುದರಿಂದ, ಮೊಬೈಲ್ ಪ್ಲಾಟ್ಫಾರ್ಮ್ಗಳಲ್ಲಿ ದರ ಹೆಚ್ಚಿನದಾಗಿದ್ದು, ಅದನ್ನೇ ಇಳಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಇಂತಹ ಕಡಿತದಿಂದ, ಇನ್ನಷ್ಟು ಬಳಕೆದಾರರು ಪ್ರೀಮಿಯಂ ಸೇವೆ ಕಡೆಗೆ ಆಕರ್ಷಿತರಾಗಲಿದ್ದಾರೆ ಎಂಬ ನಿರೀಕ್ಷೆ ಇದೆ.