ರಷ್ಯಾ ಇಂಧನ ಆಮದುದಾರರಿಗೆ 500% ಸುಂಕ? ಏನಿದು ಟ್ರಂಪ್‌ ಹೊಸ ವರಸೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಷ್ಯಾದಿಂದ ತೈಲ, ಅನಿಲ ಮತ್ತು ಯುರೇನಿಯಂನಂತಹ ಇಂಧನ ಉತ್ಪನ್ನಗಳನ್ನು ಖರೀದಿಸುವ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 500% ವರೆಗಿನ ಭಾರೀ ಸುಂಕ ವಿಧಿಸುವ ಬಗ್ಗೆ ಗಂಭೀರವಾಗಿ ಪರಿಗಣನೆ ನಡೆಸುತ್ತಿದ್ದಾರೆ. ಈ ನಿರ್ಧಾರ ಜಾರಿಗೆ ಬಂದರೆ, ಭಾರತ ಮತ್ತು ಚೀನಾ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.

ಈ ಕ್ರಮದ ಹಿನ್ನಲೆಯಲ್ಲಿ ಉದ್ದೇಶ ರಷ್ಯಾದ ಇಂಧನದಿಂದ ಉತ್ಪನ್ನವಾಗುವ ಆದಾಯದ ಹರಿವು ಕಡಿಮೆ ಮಾಡುವುದು ಮತ್ತು ಉಕ್ರೇನ್ ವಿರುದ್ಧದ ಯುದ್ಧವನ್ನು ಅಂತ್ಯಗೊಳಿಸಲು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಿಸುವುದು. ಅಮೆರಿಕದ ಸೆನೆಟರ್ ಲಿಂಡ್ಸೆ ಗ್ರಹಾಂ ಸಹ ಈ ಪ್ರಸ್ತಾಪವನ್ನು ಬಲವಾಗಿ ಬೆಂಬಲಿಸಿದ್ದು, “ರಷ್ಯಾದಿಂದ ಇಂಧನ ಖರೀದಿಸುವುದೂ ಉಕ್ರೇನ್‌ಗೆ ಸಹಾಯ ಮಾಡದಿರುವುದೂ ನಿರೂಪಿತ ಹೊಣೆಗಾರಿಕೆಯ ವಿಷಯ” ಎಂದು ಹೇಳಿದ್ದಾರೆ.

ಈ ನಿರ್ಧಾರ ಜಾರಿಗೆ ಬಂದರೆ 2025ರ ಆಗಸ್ಟ್ 1ರಿಂದ ರಷ್ಯಾದ ಇಂಧನ ಆಮದು ಮುಂದುವರಿಸಿರುವ ದೇಶಗಳು, ವಿಶೇಷವಾಗಿ ಭಾರತ ಮತ್ತು ಚೀನಾದಂತಹ ಪ್ರಮುಖ ಆಮದುದಾರರು, ಅಮೆರಿಕದ ಮಾರುಕಟ್ಟೆಗೆ ರಫ್ತು ಮಾಡಲಿರುವ ಉತ್ಪನ್ನಗಳ ಮೇಲೆ 500% ವರೆಗಿನ ಭಾರೀ ಸುಂಕವನ್ನು ಎದುರಿಸಬೇಕಾಗಬಹುದು.

ಇದೇ ವೇಳೆ, ಟ್ರಂಪ್ ಅವರು ಇತ್ತೀಚೆಗಷ್ಟೇ 14 ದೇಶಗಳ ಮೇಲೆ ಹೊಸ ಸುಂಕ ವಿಧಿಸಿ ಆದೇಶ ಹೊರಡಿಸಿರುವುದರಿಂದ, ಈ ಮುಂದಿನ ಕಠಿಣ ಕ್ರಮಗಳು ಜಾಗತಿಕ ವ್ಯಾಪಾರ ಸಂಬಂಧಗಳ ಮೇಲೆ ವಿಶೇಷವಾಗಿ ಭಾರತದೊಂದಿಗೆ ಉದ್ವಿಗ್ನತೆ ಉಂಟುಮಾಡುವ ಸಂಭವ ಹೆಚ್ಚಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!