ಹೊಸದಿಗಂತ ವರದಿ, ವಿಜಯಪುರ:
ರಾಜ್ಯ ಕಾಂಗ್ರೆಸ್ ಸರ್ಕಾರ ಸತ್ತಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದರು.
ರಾಜ್ಯ ಸರ್ಕಾರದಲ್ಲಿ ಕುರ್ಚಿ ಗಲಾಟೆ ವಿಚಾರ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಆದರೆ ಕಾಂಗ್ರೆಸ್ನವರು ದೆಹಲಿಯಲ್ಲಿ ಬಿಡುಬಿಟ್ಟಿದ್ದಾರೆ ಎಂದು ದೂರಿದರು.
ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಿಮ್ಮ ಕುರ್ಚಿ ಗಟ್ಟಿ ಇದ್ದರೆ ದೆಹಲಿಗೆ ಹೋಗತಾಯಿರಲಿಲ್ಲ. ವಿಧಾನಸೌದಲ್ಲಿ ಕುಳಿತು ಅಭಿವೃದ್ಧಿ ಕೆಲಸಗಳನ್ನು ಮಾಡರೀ, ನಿಮಗ್ಯಾರು ಬ್ಯಾಡ್ ಅಂದಾರ ಎಂದರು.
ದೆಹಲಿಯಲ್ಲಿ ಕುಳಿತಿರಿ ಅಂದ್ದರೆ ನಿಮ್ಮ ಕುರ್ಚಿ ಅಲುಗಾಡ್ತಾಯಿದೆ. ನಿಮಗೆ ಏನೋ ಭಯ ಇದೆ ಎಂದು ತಿಳಿಯುತ್ತದೆ. ಅಲ್ಲದೆ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಕುರ್ಚಿಗೆ ವ್ಯಾಪಾರ (ಆಕ್ಷನ್) ನಡೆದಿದೆ ಎಂದರು.