ಬಿರಿಯಾನಿ ಎಂದಾಗಲೆ ಬಾಯಲ್ಲಿ ನೀರು ಬರೋದು ಆಗೋದು ಸಹಜ. ಆದರೆ ಸಾಮಾನ್ಯ ತರಕಾರಿಗಳ ಮಿಶ್ರಣ ಅಥವಾ ಮಾಂಸದ ಬದಲಿಗೆ ಆರೋಗ್ಯಕರ ಮತ್ತು ವಿಶಿಷ್ಟ ರುಚಿಯ ನುಗ್ಗೆಕಾಯಿಯಿಂದ ಬಿರಿಯಾನಿ ಮಾಡಿದರೆ ಹೇಗಿರುತ್ತೆ? ಹೌದು, ಇವತ್ತು ನಾವು ನುಗ್ಗೆಕಾಯಿ ಬಿರಿಯಾನಿ ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಸಾಮಗ್ರಿಗಳು:
ಅಕ್ಕಿ
ನುಗ್ಗೆಕಾಯಿ
ದಾಲ್ಚಿನ್ನಿ
ಏಲಕ್ಕಿ
ಲವಂಗ
ಚಕ್ರಮೊಗ್ಗು
ಈರುಳ್ಳಿ
ಟೊಮೆಟೋ
ಪುದೀನ
ಕೊತ್ತಂಬರಿ ಸೊಪ್ಪು
ಹಸಿರು ಮೆಣಸಿನಕಾಯಿ
ಹಸಿರು ಬಟಾಣಿ
ಮೊಸರು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಬಿರಿಯಾನಿ ಪೌಡರ್
ಕಸೂರಿ ಮೇಥಿ
ಖಾರದ ಪುಡಿ
ಅಡುಗೆ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಮೊದಲಿಗೆ ಬಾಣಲೆ ಬಿಸಿ ಮಾಡಿ ಎಣ್ಣೆ, ಸಾಸಿವೆ, ದಾಲ್ಚಿನ್ನಿ, ಲವಂಗ, ಏಲಕ್ಕಿ, ಚಕ್ಕೆ, ಚಕ್ರಮೊಗ್ಗು ಇತ್ಯಾದಿಗಳನ್ನು ಹಾಕಿ ಸುವಾಸನೆ ಬರುವವರೆಗೂ ಫ್ರೈ ಮಾಡಿ. ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಆಗುವವರೆಗೆ ಹುರಿಯಬೇಕು.
ಇದಕ್ಕೆ ಪುದೀನ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ಕಸೂರಿ ಮೇಥಿ ಸೇರಿಸಿ. ನಂತರ ಹಸಿರು ಮೆಣಸು, ಖಾರದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಟೊಮೆಟೋ, ಹಸಿರು ಬಟಾಣಿ ಮತ್ತು ಉಪ್ಪು ಹಾಕಿ ಮತ್ತೆ ಫ್ರೈ ಮಾಡಿ.
ಇದಕ್ಕೆ ಕತ್ತರಿಸಿದ ನುಗ್ಗೆಕಾಯಿ ಹಾಗೂ ಸ್ವಲ್ಪ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಬಿರಿಯಾನಿ ಪೌಡರ್ ಸೇರಿಸಿ ಸ್ವಲ್ಪ ಕಾಲ ಬೇಯಿಸಬೇಕು.
ಇದಕ್ಕಾಗೆ,ನೀರನ್ನು ಹಾಕಿ ಕುದಿಸಿ. ಕುದಿಯುವಾಗ ನೆನೆಸಿಟ್ಟ ಅಕ್ಕಿಯನ್ನು ಸೇರಿಸಿ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ. ನೀರು ಅರ್ಧವಾಗುವವರೆಗೆ ಕುದಿಸಿ, ನಂತರ ಉರಿ ಕಡಿಮೆ ಮಾಡಿ, ಮುಚ್ಚಿ 15 ನಿಮಿಷ ದಮ್ ಕೊಟ್ಟರೆ ನುಗ್ಗೆಕಾಯಿ ಬಿರಿಯಾನಿ ಸವಿಯಲು ರೆಡಿ.