ಮನೋರಂಜನೆಯ ಹೆಸರಿನಲ್ಲಿ ಈಗ ಸೋಷಿಯಲ್ ಮೀಡಿಯಾ ರೀಲ್ಸ್‌ಗಳು ಜನರ ದಿನಚರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಕೆಲವರೆಗೆ ಟೈಮ್ ಪಾಸ್ ಆಗಲಿ ಎಂದು ನೋಡುವ ಈ ರೀಲ್ಸ್‌ಗಳು ಇತ್ತೀಚೆಗೆ ಕೆಲವರಲ್ಲಿ ವ್ಯಸನದ ಮಟ್ಟಕ್ಕೆ ತಲುಪಿದ್ದು, ಕೆಲಸ, ಓದು, ನಿದ್ರೆ, ಆರೋಗ್ಯ ಎಲ್ಲದರ ಮೇಲೂ ಕೆಟ್ಟ ಪ್ರಭಾವ ಬೀರುತ್ತಿವೆ. ಈ ಅಡಿಕ್ಷನ್‌ನಿಂದ ಹೊರಬರಲು ಕೆಲವು ಉಪಾಯಗಳನ್ನು ಪಾಲಿಸುವುದು ಅಗತ್ಯವಾಗಿದೆ.
ಸಮಯಕ್ಕೆ ಸೀಮಿತಗೊಳಿಸಿ ರೀಲ್ಸ್ ವೀಕ್ಷಣೆ
ಮೊದಲಿಗೆ ಪ್ರತಿದಿನ ನೀವು ರೀಲ್ಸ್ ನೋಡಲು ಸಮಯ ನಿಗದಿಪಡಿಸಿಕೊಳ್ಳಿ. ಕೆಲವರು 5 ನಿಮಿಷ ನೋಡೋಣ ಎಂದು ಕೂತು ಗಂಟೆಗಟ್ಟಲೆ ಕಾಲ ಕಳೆಯುತ್ತಾರೆ. ಈ ಬದಲಿಗೆ 15-20 ನಿಮಿಷಕ್ಕಿಂತ ಹೆಚ್ಚು ಬೇಡ ಎಂಬ ಗಡಿ ಹಾಕಿ, ಅದರಲ್ಲೂ ಟೈಮರ್ ಅಥವಾ ಆಪ್ ಲಿಮಿಟ್ ಸೆಟ್ ಮಾಡಿ.
ನೋಟಿಫಿಕೇಶನ್ ಆಫ್ ಮಾಡುವುದು ಬಹುಮುಖ್ಯ
ಸೋಷಿಯಲ್ ಮೀಡಿಯಾದ ನೋಟಿಫಿಕೇಶನ್‌ಗಳು ವ್ಯಸನಕ್ಕೆ ದಾರಿ ಮಾಡುತ್ತವೆ. ಯಾರು ಏನು ಶೇರ್ ಮಾಡಿದ್ದಾರೆ ಎಂದು ಗೊತ್ತಾದರೆ ತಕ್ಷಣ ನೋಡಬೇಕೆನಿಸುತ್ತದೆ. ಆದ್ದರಿಂದ, ನಿಮ್ಮ ಫೋನ್‌ನ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ ಅಥವಾ ಮ್ಯೂಟ್ ಮಾಡುವುದು ಉತ್ತಮ.
ಹೆಚ್ಚುವರಿ ಸಮಯದಲ್ಲಿ ಹೊಸ ಹವ್ಯಾಸಗಳತ್ತ ಮುಖ
ಫ್ರೀ ಟೈಮ್‌ನಲ್ಲಿ ರೀಲ್ಸ್ ನೋಡುವ ಬದಲಿಗೆ ಪುಸ್ತಕ ಓದುವುದು, ಸಂಗೀತ ಕೇಳುವುದು, ಆಟ ಆಡುವುದು ಅಥವಾ ಚಿತ್ರ ಬಿಡಿಸುವಂತಹ ಸೃಜನಾತ್ಮಕ ಚಟುವಟಿಕೆಗಳತ್ತ ಗಮನ ಹರಿಸಿ. ಇದು ನಿಮ್ಮ ಮನಸ್ಸನ್ನು ಬ್ಯುಸಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಡೇಟಾ ಆಫ್ ಮಾಡಿ, ಫೋನ್ ನಿಂದ ದೂರವಿರಿ
ನೀವು ಕುಟುಂಬ ಅಥವಾ ಸ್ನೇಹಿತರ ಜೊತೆಗೆ ಇದ್ದಾಗ ಮೊಬೈಲ್ ಡೇಟಾ ಆಫ್ ಮಾಡಿ. ಜೊತೆಗೆ, ಫೋನ್‌ನ್ನು ನಿಮ್ಮಿಂದ ದೂರವಿಡಿ. ಹೀಗೆ ಮಾಡಿದರೆ ಎಚ್ಚರಿಕೆಯಿಂದ ಮೊಬೈಲ್ ಬಳಸಲು ಸಹಾಯವಾಗುತ್ತದೆ.
ಡಿಜಿಟಲ್ ಡಿಟಾಕ್ಸ್
ವಾರಕ್ಕೆ ಕನಿಷ್ಠ ಒಂದು ದಿನ “ಡಿಜಿಟಲ್ ಡಿಟಾಕ್ಸ್” ಮಾಡಿ. ಈ ದಿನದಲ್ಲಿ ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್ ಎಲ್ಲವನ್ನೂ ಆಫ್ ಮಾಡಿ, ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಿರಿ ಅಥವಾ ಪ್ರಕೃತಿಯಲ್ಲಿ ಕಾಲ ಕಳೆಯಿರಿ. ಇದು ನಿಮ್ಮ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ.
ಫೋನ್ ಬಳಕೆ ನಿಯಂತ್ರಣ ನಿಮ್ಮ ಕೈಯಲ್ಲಿದೆ
ಅಂತಿಮವಾಗಿ, ರೀಲ್ಸ್ ನೋಡುವ ಅಡಿಕ್ಷನ್‌ನಿಂದ ಪೂರ್ತಿಯಾಗಿ ಹೊರಬರಬೇಕಾದರೆ, ನಿಮ್ಮ ಸದುಪಯೋಗ ಮತ್ತು ಸಮಯದ ಪ್ರಾಮುಖ್ಯತೆಯನ್ನು ನೀವು ಸ್ವತಃ ಅರ್ಥಮಾಡಿಕೊಳ್ಳಬೇಕು. ಮೊಬೈಲ್ ನಿಮ್ಮ ಸೇವೆಗೆ ಇರಲಿ, ನೀವು ಮೊಬೈಲ್ ಸೇವೆಗೆ ಅಲ್ಲ ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಿ.