ಪ್ರೀತಿ, ದಾಂಪತ್ಯ ಅಥವಾ ಸ್ನೇಹ… ಯಾವುದೇ ಸಂಬಂಧವಾಗಿರಲಿ, ಅದು ನಂಬಿಕೆ, ಪ್ರಾಮಾಣಿಕತೆ ಮತ್ತು ಪರಸ್ಪರ ಸಹಕಾರದ ಮೇಲೆ ಆಧಾರಿತವಾಗಿರಬೇಕು. ಆದರೆ ಇತ್ತೀಚೆಗೆ ಬ್ರೇಕಪ್, ದಾಂಪತ್ಯ ವಿಚ್ಛೇದನಗಳ ಸುದ್ದಿಗಳು ಹೆಚ್ಚಾಗುತ್ತಿರುವುದು ಗಮನ ಸೆಳೆಯುವಂತಾಗಿದೆ. ಸುಂದರ ಸಂಬಂಧಗಳು ಹಾಳಾಗುವ ಪ್ರಮುಖ ಕಾರಣಗಳ ಬಗ್ಗೆ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಉಲ್ಲೇಖಿಸಿದ್ದು, ಈ ವೇಳೆ ನಾವು ಮಾಡುತ್ತಿರುವ ಕೆಲವು ಸಾಮಾನ್ಯ ತಪ್ಪುಗಳು ಈ ದುರ್ಘಟನೆಗೆ ಕಾರಣವಾಗುತ್ತವೆ.
ಎಲ್ಲದರಲ್ಲೂ ತಪ್ಪು ಹುಡುಕುವುದು
ಯಾವುದೇ ವಿಷಯವಿರಲಿ, ಸಂಗಾತಿಯಲ್ಲಿಯೇ ತಪ್ಪು ಹುಡುಕುತ್ತಿರುವ ಮಾನಸಿಕತೆಯು slowly but surely ಸಂಬಂಧವನ್ನು ದುರ್ಬಲಗೊಳಿಸುತ್ತೆ. ಚಾಣಕ್ಯರ ಪ್ರಕಾರ, ನಿರಂತರ ಟೀಕೆ ಪ್ರೀತಿಯ ಬದಲಿಗೆ ಅಂತರ ಹೆಚ್ಚಿಸಲು ಕಾರಣವಾಗುತ್ತದೆ. ಇದರಿಂದ ಸಂಬಂಧದಲ್ಲಿ ದ್ವೇಷ ಉಂಟಾಗಿ, ಮುರಿದು ಬೀಳುವ ಮಟ್ಟಿಗೆ ತಲುಪಬಹುದು.
ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಸಂಕಷ್ಟಗಳಿಗೆ ದಾರಿ
ಸಂಬಂಧದಲ್ಲಿ ಬಾಂಧವ್ಯ ಉಳಿಸಿಕೊಳ್ಳಲು ಶಾಂತಿ ಬಹುಮುಖ್ಯ. ಆದರೆ ಕೆಲವರು ಕೋಪದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಚಾಣಕ್ಯರು ಈ ಬಗ್ಗೆ ಎಚ್ಚರಿಸಿ, “ಕೋಪ ನಮ್ಮ ಅತಿದೊಡ್ಡ ಶತ್ರು” ಎಂದು ಹೇಳಿದ್ದಾರೆ. ಯಾವುದೇ ಸಮಸ್ಯೆಯಾದರೂ ಶಾಂತವಾಗಿ ಬಗೆಹರಿಸಬೇಕು. ಒಂದು ನಿರ್ಧಾರ ಕೂಡ ಸಂಬಂಧವನ್ನೇ ಮುರಿದುಬಿಡಬಹುದಾದಷ್ಟು ಶಕ್ತಿ ಹೊಂದಿರುತ್ತದೆ.
ಅತಿಯಾದ ನಿರೀಕ್ಷೆಗಳು ತೊಂದರೆ ತರುವ ಸಾಧ್ಯತೆ ಹೆಚ್ಚು
ಸಂಬಂಧಗಳಲ್ಲಿ ನಿಷ್ಕಲ್ಮಶ ಪ್ರೀತಿಗಿಂತ ಅತಿಯಾದ ನಿರೀಕ್ಷೆಗಳಿದ್ದರೆ, ಅದು ನಿರೀಕ್ಷಾಪೂರಣವಾಗದ ಕಾರಣದಿಂದ ಬಿಗುವನ್ನುಂಟುಮಾಡುತ್ತದೆ. ಒಂದು ನಿರೀಕ್ಷೆ ಪೂರೈಸದ ಸಂಗಾತಿಗೆ ತಕ್ಷಣ ದೋಷ ಹೊರಿಸಲಾಗುತ್ತದೆ. ನಿರೀಕ್ಷೆಗಳಿಲ್ಲದ ಪ್ರೀತಿ ನಿಜವಾದ ಸಂಬಂಧಕ್ಕೆ ದಾರಿ ಮಾಡಿಕೊಡುತ್ತದೆ.
ಸುಳ್ಳು ನಂಬಿಕೆಯನ್ನು ಕೊಲ್ಲುತ್ತದೆ
ಸಂಬಂಧಗಳ ಮೂಲವೇ ನಂಬಿಕೆ. ಆದರೆ ಸುಳ್ಳು ಹೇಳುವುದು ಈ ನಂಬಿಕೆಯನ್ನು ನಾಶ ಮಾಡುತ್ತದೆ. ಸತತ ಸುಳ್ಳುಗಳು ಭವಿಷ್ಯದ ಸಂಬಂಧಕ್ಕೆ ಅಪಾಯವಾಗುತ್ತವೆ. ಒಮ್ಮೆ ನಂಬಿಕೆ ಕುಸಿದರೆ, ಪುನಃ ಅದನ್ನು ಕಟ್ಟುವುದು ತುಂಬಾ ಕಷ್ಟ.
ಮೂರನೇ ವ್ಯಕ್ತಿಯ ಪ್ರಭಾವ – ಸಂಬಂಧದ ಶತ್ರು
ಮೂರನೇ ವ್ಯಕ್ತಿಯ ಮಾತಿಗೆ ಪ್ರಭಾವಿತರಾಗಿ, ತಮ್ಮ ಸಂಗಾತಿಯ ಬಗ್ಗೆ ಅನುಮಾನಿಸಿ, ಪ್ರಶ್ನಿಸುವುದು ಸಂಬಂಧವನ್ನು ಹಾಲು ಮಾಡುತ್ತದೆ. ಯಾವುದೇ ಸಂದರ್ಭದಲ್ಲೂ ಮೂರನೇ ವ್ಯಕ್ತಿಯ ಮಾತಿಗಿಂತ, ನೇರವಾಗಿ ಸಂಗಾತಿಯ ಮಾತಿಗೆ ಪ್ರಾಮುಖ್ಯತೆ ನೀಡಬೇಕು.