ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕಾಂತಾರ’ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಯಾಂಡಲ್‌ವುಡ್ ನಟ-ನಿರ್ದೇಶಕ ರಿಷಬ್ ಶೆಟ್ಟಿ ಈಗ ಬಾಲಿವುಡ್‌ನ ಕಡೆ ಮುಖ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಹೆಮ್ಮೆಯ ಪ್ರತಿಭೆ ರಿಷಬ್ ಶೆಟ್ಟಿಗೆ ಇದೀಗ ‘ಲಗಾನ್’, ‘ಜೋಧಾ ಅಕ್ಬರ್’, ‘ಮೊಹೆಂಜೋದಾರೋ’ ಮುಂತಾದ ಇತಿಹಾಸಾಧಾರಿತ ಚಿತ್ರಗಳಿಗೆ ಹೆಸರಾಗಿರುವ ಖ್ಯಾತ ನಿರ್ದೇಶಕ ಅಶುತೋಷ್ ಗೋವಾರಿಕರ್ ಅವರ ಮುಂದಿನ ಭಾರೀ ಬಜೆಟ್ ಚಿತ್ರಕ್ಕೆ ಆಫರ್ ಬಂದಿದ್ದು, ಈ ಸುದ್ದಿಯು ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ.
ಅಶುತೋಷ್ ಗೋವಾರಿಕರ್ directionನಲ್ಲಿ ನಡೆಯಲಿರುವ ಈ ಚಿತ್ರವು ವಿಜಯನಗರ ಸಾಮ್ರಾಜ್ಯದ ಮಹಾನ್ ಚಕ್ರವರ್ತಿ ಶ್ರೀಕೃಷ್ಣದೇವರಾಯನ ಕಥೆಯನ್ನು ಆಧಾರವಾಗಿರುತ್ತದೆ. ಈ ಪಾತ್ರಕ್ಕೆ ರಿಷಬ್ ಶೆಟ್ಟಿಯನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆಗಳು ಜೋರಾಗಿದ್ದು, ಅವರ ವಿಭಿನ್ನ ಅಭಿನಯ ಶೈಲಿ ಮತ್ತು ಬದ್ದತೆಯ ಕಾರಣದಿಂದ ಈ ಆಯ್ಕೆ ನಡೆದಿರಬಹುದು ಎನ್ನಲಾಗುತ್ತಿದೆ.
ಅಶುತೋಷ್ ಗೋವಾರಿಕರ್ ಎಂದಾಕ್ಷಣ ಇತಿಹಾಸದ ಆಳವಾದ ಅಧ್ಯಯನ ಮತ್ತು ನಿಖರತೆ ನೆನಪಿಗೆ ಬರುತ್ತದೆ. ‘ಲಗಾನ್’, ‘ಜೋಧಾ ಅಕ್ಬರ್’ ಚಿತ್ರಗಳಲ್ಲಿ ಅವರು ತೋರಿಸಿರುವ ಶೋಧನಾತ್ಮಕ ದೃಷ್ಟಿಕೋನ ಈ ಬಾರಿ ವಿಜಯನಗರದ ಹಿರಿಮೆಯನ್ನು ತೆರೆಯುವ ನಿಟ್ಟಿನಲ್ಲಿ ಸಿದ್ಧವಾಗಿದೆ.
ಇದೀಗ ಈ ಸಿನಿಮಾದ ಅಧಿಕೃತ ಘೋಷಣೆಯನ್ನು ಕಾದು ನೋಡುತ್ತಿರುವ ಸಿನಿಪ್ರೇಮಿಗಳು, ರಿಷಬ್ ಶೆಟ್ಟಿ ಶ್ರೀಕೃಷ್ಣದೇವರಾಯನ ಪಾತ್ರದಲ್ಲಿ ಹೇಗೆ ಕಾಣಿಸುತ್ತಾರೆ ಎಂಬ ಕುತೂಹಲದಲ್ಲಿದ್ದಾರೆ. ಅಲ್ಲದೆ, ಕಾಂತಾರ ಚಾಪ್ಟರ್-1 ನಂತರ ಈ ಬೃಹತ್ ಚಿತ್ರದಲ್ಲಿ ಭಾಗಿಯಾಗುತ್ತಿರುವುದು ರಿಷಬ್ ಶೆಟ್ಟಿಗೆ ಮತ್ತೊಂದು ಹೆಜ್ಜೆ ಆಗಲಿದೆ.