ಮನೆಯಲ್ಲಿ ಶಾಂತಿ, ಸಮೃದ್ಧಿ ಹಾಗೂ ಸಕಾರಾತ್ಮಕ ಶಕ್ತಿಯ ಹರಿವಿಗಾಗಿ ಅನೇಕರು ತಾಮ್ರದ ಸೂರ್ಯನ ಪ್ರತಿಮೆಯನ್ನು ಮನೆಯ ಮುಂದೆ ಅಥವಾ ಒಳಗೆ ಇಡುತ್ತಾರೆ. ಈ ಕುರಿತು ಹಲವರಲ್ಲಿ “ತಾಮ್ರದ ಸೂರ್ಯ ಇಡೋದು ಒಳ್ಳೆಯದ?”, “ಇದು ಶಾಸ್ತ್ರಸಮ್ಮತವೇ?” ಎಂಬ ಪ್ರಶ್ನೆಗಳು ಉಂಟಾಗುತ್ತವೆ. ಇದಕ್ಕೆ ವಾಸ್ತು ಶಾಸ್ತ್ರ ಏನ್ ಹೇಳುತ್ತೆ ನೋಡೋಣ.
ವಾಸ್ತು ತಜ್ಞರ ಅಭಿಪ್ರಾಯದಂತೆ, ತಾಮ್ರದಿಂದ ತಯಾರಾದ ಸೂರ್ಯನನ್ನು ಮನೆಯ ಮುಖ್ಯ ಬಾಗಿಲಿನ ಮೇಲೆ ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದು ಅತ್ಯುತ್ತಮ. ಇದು ಮನೆಯಲ್ಲಿ ಋಣಾತ್ಮಕ ಶಕ್ತಿಯ ಹರಿವನ್ನು ತಡೆದು, ಧನಾತ್ಮಕ ಶಕ್ತಿಗೆ ದಾರಿಯನ್ನು ನೀಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.
ತಾಮ್ರದ ಸೂರ್ಯ ಮನೆಯ ಮೇಲೆ ಇರುವುದು ದುಷ್ಟ ಶಕ್ತಿಗಳನ್ನು ತಡೆಯುವ ಬಲವನ್ನ ಹೊಂದಿರುತ್ತದೆ. ಅಷ್ಟೇ ಅಲ್ಲ, ತಾಮ್ರದ ಶಕ್ತಿಯಿಂದ ಆಕರ್ಷಕ ಶಕ್ತಿ ಜಾಗೃತವಾಗುತ್ತದೆ, ಇದರಿಂದ ಅದೃಷ್ಟ ಹೆಚ್ಚಾಗುತ್ತದೆ. ಉದ್ಯಮಿಗಳು ಅಥವಾ ವ್ಯಾಪಾರಿಗಳು ತಮ್ಮ ಮನೆಯಲ್ಲಿ ಅಥವಾ ಕಚೇರಿಯಲ್ಲಿ ತಾಮ್ರದ ಸೂರ್ಯ ಇಟ್ಟರೆ ಲಾಭದ ಲಕ್ಷಣಗಳು ಹೆಚ್ಚಾಗುತ್ತವೆ ಎನ್ನಲಾಗುತ್ತದೆ.
ಈ ಪ್ರತಿಮೆಯನ್ನು ಬಾಗಿಲಿನ ಮೇಲ್ಭಾಗದಲ್ಲಿ, ವಿಶೇಷವಾಗಿ ಪೂರ್ವದಿಕ್ಕಿನಲ್ಲಿ ಇಡುವುದು ಶ್ರೇಷ್ಠ. ಪೂರ್ವ ದಿಕ್ಕು ಸೂರ್ಯನ ಬೆಳಕು ಬರುವ ದಿಕ್ಕು ಆಗಿರುವುದರಿಂದ, ಮನೆಗೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ಹರಿದಾಡುತ್ತದೆ ಎಂಬ ನಂಬಿಕೆ ಇದೆ.
ಇದರಿಂದ ಕುಟುಂಬದಲ್ಲಿ ಸಂಸಾರದ ಸಮಾಧಾನ, ಆರ್ಥಿಕ ಪ್ರಗತಿ, ಸದಸ್ಯರ ಮಧ್ಯೆ ಹೊಂದಾಣಿಕೆ ಹಾಗೂ ಗೌರವ ಹೆಚ್ಚಾಗುತ್ತದೆ. ಕಲಹಗಳು ನಿವಾರಣೆ ಆಗುವ ಸಾಧ್ಯತೆ ಕೂಡ ಇದೆ.
ವಾಸ್ತು ಶಾಸ್ತ್ರದ ಪ್ರಕಾರ ತಾಮ್ರದ ಸೂರ್ಯನ ಪ್ರತಿಮೆಯನ್ನು ಮನೆಯ ಮುಖ್ಯ ಬಾಗಿಲಿನ ಪೂರ್ವ ದಿಕ್ಕಿನಲ್ಲಿ ಇಡುವುದು ಅದೃಷ್ಟವನ್ನೂ ಹೆಚ್ಚಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ.