ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಸೂರ್ಯನ ಬೆಳಕು ಕಡಿಮೆ ಇರುವ ಕಾರಣ ಮತ್ತು ಬಟ್ಟೆಗಳ ತೇವಾಂಶದ ಪ್ರಮಾಣ ಹೆಚ್ಚಾಗಿರುವುದರಿಂದ, ಬಟ್ಟೆಗಳು ಸರಿಯಾಗಿ ಒಣಗದೆ ಕೆಟ್ಟ ವಾಸನೆ (Clothes Smelling) ಬರಲು ಪ್ರಾರಂಭಿಸುತ್ತವೆ. ಇದರಿಂದ ಮನೆಮಂದಿಗೆ ತೊಂದರೆ ಮಾತ್ರವಲ್ಲದೆ, ಆ ಬಟ್ಟೆಗಳನ್ನು ಮತ್ತೆ ಹಾಕಿಕೊಳ್ಳೋದಕ್ಕೂ ಅಸಹ್ಯವಾಗೋದು ನಿಜ. ಹಾಗಾಗಿ ಈ ಮಳೆಗಾಲದಲ್ಲಿ ಬಟ್ಟೆಗಳು ವಾಸನೆ ಬಾರದಂತೆ ನೋಡಿಕೊಳ್ಳಲು ಇಲ್ಲಿವೆ ಕೆಲವು ಟಿಪ್ಸ್.
ಬಟ್ಟೆಗಳನ್ನು ರಾಶಿಯಾಗಿ ಹಾಕಬೇಡಿ: ಒದ್ದೆ ಬಟ್ಟೆಗಳನ್ನು ಒಟ್ಟಾಗಿ ಒಂದೇ ಕಡೆ ರಾಶಿಯಾಗಿ ಹಾಕುವುದರಿಂದ ಬ್ಯಾಕ್ಟೀರಿಯಾ ವೇಗವಾಗಿ ಹರಡುತ್ತದೆ. ಇದು ಬಟ್ಟೆಯಲ್ಲಿ ವಾಸನೆ ಬರಲು ಪ್ರಮುಖ ಕಾರಣವಾಗಿದೆ. ಆದ್ದರಿಂದ ಒದ್ದೆಯಾದ ಬಟ್ಟೆಗಳನ್ನು ತಕ್ಷಣವೇ ಒಗೆಯುವುದು ಉತ್ತಮ.
ಹೆಚ್ಚು ಹೊತ್ತು ನೆನೆಸಬೇಡಿ: ಡಿಟೆರ್ಜೆಂಟ್ ಹಾಕಿ ಬಟ್ಟೆಗಳನ್ನು ಗಂಟೆಗಟ್ಟಲೆ ನೀರಿನಲ್ಲಿ ನೆನೆಸಿಡೋದು ಮಳೆಗಾಲದಲ್ಲಿ ತಪ್ಪು ಅಭ್ಯಾಸ. ಇದು ಬ್ಯಾಕ್ಟೀರಿಯಾ ಬೆಳವಣಿಗೆಗೆ ವಾತಾವರಣ ಒದಗಿಸುತ್ತದೆ. ಕಡಿಮೆ ಹೊತ್ತಿನಲ್ಲಿ ಬಟ್ಟೆಗಳನ್ನು ಒಗೆದು ತಕ್ಷಣವೇ ಒಣಗಲು ಬಿಡಿ.
ಅಡಿಗೆ ಸೋಡಾ ಬಳಸಿ: ಬಟ್ಟೆ ಒಗೆಯುವಾಗ ಡಿಟೆರ್ಜೆಂಟ್ ಜೊತೆಗೆ ಅರ್ಧ ಚಮಚ ಅಡಿಗೆ ಸೋಡಾ ಸೇರಿಸಿದರೆ, ಅದು ಬಟ್ಟೆಯೊಳಗಿನ ದುಷಿತ ವಾಸನೆಗಳನ್ನು ತೆಗೆದು ಹಾಕುತ್ತದೆ ಮತ್ತು ತಾಜಾ ಪರಿಮಳ ನೀಡುತ್ತದೆ.
ವಿನೆಗರ್ ಸಹಕಾರಿ: ಅರ್ಧ ಕಪ್ ವಿನೆಗರ್ ಅನ್ನು ಕೊನೆಯಲ್ಲಿ ಹಾಕಿ ಮತ್ತೊಮ್ಮೆ ತೊಳೆದರೆ ಅದು ಬ್ಯಾಕ್ಟೀರಿಯಾಗಳನ್ನು ನಾಶಮಾಡಿ ಬಟ್ಟೆಗಳಿಗೆ ಸ್ವಚ್ಛತೆಯನ್ನು ನೀಡುತ್ತದೆ.
ಫ್ಯಾಬ್ರಿಕ್ ಕಂಡೀಷನರ್ ಬಳಸಿ: ಬಟ್ಟೆಗೆ ಉತ್ತಮವಾದ ಪರಿಮಳ ನೀಡಲು ಪರಿಮಳಯುಕ್ತ ಫ್ಯಾಬ್ರಿಕ್ ಕಂಡೀಷನರ್ ಬಳಸಿ. ಇದು ವಾಸನೆಯ ಅಡಚಣೆಗೆ ತಾತ್ಕಾಲಿಕ ಪರಿಹಾರ ನೀಡುತ್ತದೆ.
ಪೂರ್ಣವಾಗಿ ಒಣಗಿದ ನಂತರ ಮಾತ್ರ ಮಡಚಿ ಇಡಿ: ಸ್ವಲ್ಪ ತೇವಾಂಶ ಉಳಿದರೂ ಅದು ಕ್ಯಾಬಿನೆಟ್ ಒಳಗೆ ಶೀಘ್ರದಲ್ಲೇ ಕೆಟ್ಟ ವಾಸನೆ ಉಂಟುಮಾಡುತ್ತದೆ. ಆದ್ದರಿಂದ ಬಟ್ಟೆ ಸಂಪೂರ್ಣವಾಗಿ ಒಣಗಿದ ನಂತರ ಮಾತ್ರ ಮಡಚಿ ಇಡುವುದು ಸೂಕ್ತ.