ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ಗುಂಡಿಕ್ಕಿ ಕೊಂದಿರುವ ಅವರ ತಂದೆ ದೀಪಕ್ ಯಾದವ್ ಗೆ ಇದೀಗ ಪಶ್ಚಾತಾಪ ಕಾಡುತ್ತಿದ್ದು, ಮಗಳನ್ನು ಕೊಂದಿರುವ ನನ್ನನ್ನು ಗಲ್ಲಿಗೇರಿಸಿ ಎಂದು ಹೇಳಿದ್ದಾರೆ.
ಮಗಳನ್ನು ಕೊಂದ ಬಳಿಕ ಅವರಿಗೆ ಆಘಾತವಾಗಿದೆ .ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸೋದಿಲ್ಲ. ಜನರು ಮಗಳ ಸಂಪಾದನೆಯಲ್ಲಿ ನಾನು ಬದುಕುತ್ತಿದ್ದೇನೆ ಎಂದು ಹೇಳಿದ್ದರಿಂದ ನನಗೆ ಅವಮಾನವಾಗಿದೆ. ಹೀಗಾಗಿ ಮಗಳನ್ನು ಹತ್ಯೆ ಮಾಡಿರುವುದಾಗಿ ದೀಪಕ್ ಯಾದವ್ ತನಿಖೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.
ರಾಷ್ಟ್ರ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ಜುಲೈ 10 ರಂದು ಗುರುಗ್ರಾಮದಲ್ಲಿರುವ ಅವರ ಮನೆಯಲ್ಲೇ ತಂದೆ ದೀಪಕ್ ಯಾದವ್ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಟೆನಿಸ್ ಅಕಾಡೆಮಿ ನಡೆಸುತ್ತಿದ್ದ ರಾಧಿಕಾ ತಮ್ಮ ಮೂರು ಅಂತಸ್ತಿನ ಮನೆಯ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹಿಂದಿನಿಂದ ಬಂದ ತಂದೆ ಮೂರು ಬಾರಿ ಅವರ ಮೇಲೆ ಗುಂಡು ಹಾರಿಸಿದ್ದರು. ಬಳಿಕ ಕೂಡಲೇ ಪೊಲೀಸರು ಅವರನ್ನು ಬಂಧಿಸಿದ್ದರು.
ಈ ಕುರಿತು ಮಾತನಾಡಿರುವ ರಾಧಿಕಾ ಅವರ ಚಿಕ್ಕಪ್ಪ ವಿಜಯ್ ಯಾದವ್, ತನ್ನ ಮಗಳನ್ನೇ ದೀಪಕ್ ಹತ್ಯೆ ಮಾಡಿದ್ದಾನೆ. ಪೊಲೀಸ್ ಠಾಣೆಯಲ್ಲಿ ನೇಣು ಹಾಕುವ ನಿಯಮವಿದ್ದರೆ ಅವನನ್ನು ಕೂಡಲೇ ಗಲ್ಲಿಗೇರಿಸಿ ಎಂದು ಹೇಳಿದ್ದಾರೆ.
ವಿಚಾರಣೆ ವೇಳೆ ದೀಪಕ್ ಸರಿಯಾಗಿ ಮಾತನಾಡುತ್ತಿಲ್ಲ. ಕೇಳುವ ಪ್ರಶ್ನೆಗಳಿಗೆ ಕಡಿಮೆ ಉತ್ತರವನ್ನಷ್ಟೇ ನೀಡುತ್ತಿದ್ದಾರೆ. ಸೀಮಿತ ಮಾಹಿತಿಯನ್ನು ಮಾತ್ರ ಹಂಚಿಕೊಂಡಿದ್ದಾರೆ. ಬಹುಶಃ ಅವರು ಆಘಾತಕ್ಕೊಳಗಾಗಿದ್ದಾರೆ ಅಥವಾ ಪಶ್ಚಾತಾಪದಲ್ಲಿದ್ದಾರೆ. ಜನರು ತನ್ನ ಮಗಳ ಸಂಪಾದನೆಯಲ್ಲಿ ಬದುಕುತ್ತಿದ್ದಾರೆ ಎಂದು ಅನುಮಾನ ಮಾಡಿದ್ದರು. ಇದರಿಂದ ನನಗೆ ಬಹಳ ಮುಜುಗರವಾಗಿತ್ತು ಎಂದು ದೀಪಕ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ರಾಧಿಕಾ ಅವರ ತಾಯಿ ಮಂಜು ಯಾದವ್ಗೆ ಕ್ಲೀನ್ ಚಿಟ್ ನೀಡಲಾಗಿದೆ. ಮಗಳನ್ನು ಕೊಲೆ ಮಾಡುವ ದೀಪಕ್ ಯೋಜನೆ ಬಗ್ಗೆ ಅವರಿಗೆ ತಿಳಿದಿಲ್ಲ ಹಾಗೂ ಅವರು ರಾಧಿಕಾ ಮೇಲೆ ದಾಳಿಯಾಗಿದ್ದನ್ನೂ ನೋಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.