March 23, 2026
Monday, March 23, 2026
spot_img

VIRAL | ಈ ಹೊಟೇಲ್‌ನಲ್ಲಿ ಟಿಪ್ಸ್‌ ಕೊಟ್ರೆ ವೇಟ್ರೆಸ್‌ ಡ್ಯಾನ್ಸ್‌ ಮಾಡ್ತಾರಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಮಾನ್ಯವಾಗಿ ಯಾವುದೇ ಹೊಟೇಲ್‌ನಲ್ಲಿ ವೇಟರ್‌ ಅಥವಾ ವೇಟ್ರೆಸ್‌ಗೆ ಟಿಪ್ಸ್‌ ಕೊಟ್ಟರೆ ಥ್ಯಾಂಕ್ಯೂ ಎಂದು ನಗುಮುಖದಿಂದ ಹೇಳಿ ಹೋಗ್ತಾರೆ. ಕೆಲವು ಹೊಟೇಲ್‌ಗಳಲ್ಲಿ ಟಿಪ್‌ ನೀಡಬಾರದು ಎನ್ನುವ ಬೋರ್ಡ್‌ ಹಾಕಿರುತ್ತಾರೆ.

ಆದರೆ ಇಲ್ಲೊಂದು ಕೆಫೆಯಲ್ಲಿ ನೀವು ಟಿಪ್‌ ಕೊಟ್ಟರೆ ನಮ್ಮ ವೇಟ್ರೆಸ್‌ ಡ್ಯಾನ್ಸ್‌ ಮಾಡ್ತಾರೆ ಎಂದು ಬರೆದಿದೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. ವೇಟ್ರೆಸ್‌ಗಳಿಬ್ಬರು ಬಿಲ್ಲಿಂಗ್‌ ಸೆಕ್ಷನ್‌ನಲ್ಲಿ ನಿಂತಿರುತ್ತಾರೆ.

ಬಿಲ್‌ ಪೇ ಮಾಡುವ ಜಾಗದಲ್ಲಿ ಬೋರ್ಟ್‌ ಇದೆ, ಇದರಲ್ಲಿ ಟಿಪ್ಸ್‌ ಕೊಟ್ಟರೆ ಡ್ಯಾನ್ಸ್‌ ಮಾಡುತ್ತೇವೆ ಎಂದು ಬರೆದಿದೆ. ಅಂತೆಯೇ ಕಸ್ಟಮರ್‌ ಟಿಪ್‌ ನೀಡುತ್ತಾರೆ. ವೇಟ್ರೆಸ್‌ ನಗುತ್ತಲೇ ಒಂದು ಸ್ಟೆಪ್‌ ಹಾಕಿದ್ದಾರೆ. ಇದು ಕ್ಯೂಟ್‌ ಆಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.ಇದು ಕೆಲಸದ ನಡುವೆ ಸಂತೋಷವನ್ನು ಹೆಚ್ಚಿಸುವ ಕೆಲಸ ಎಂದಿದ್ದಾರೆ. ಮತ್ತೊಬ್ಬರು ಈ ಕೆಫೆಯಲ್ಲಿ ಒಂದು ಸುಂದರ ಅನುಭವ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.

https://www.instagram.com/reels/DUCc6kuEo_q

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !