ದಿನಭವಿಷ್ಯ: ಇಂದು ಮಕ್ಕಳ ಜೊತೆ ತಾಳ್ಮೆಯಿಂದ ವ್ಯವಹರಿಸಿದರೆ ಮಾತ್ರ ಮನೆಯಲ್ಲಿ ಶಾಂತಿ

ಮೇಷ
ನಿಮ್ಮ ವಿಚಾರಗಳಿಗೆ ಇತರರಿಂದ ಸೂಕ್ತ ಸ್ಪಂದನೆ ದೊರಕದು. ಅದರಿಂದ ನಿರಾಶೆ ಬೇಡ. ನಿಮ್ಮ ನಿಲುವು ಸರಿಯಾಗಿದ್ದರೆ ಮುಂದುವರಿಯಿರಿ.
ವೃಷಭ
ನಿಮ್ಮ ಅಹಂನಿಂದಾಗಿ ಸಣ್ಣ ಹಿನ್ನಡೆಯನ್ನೂ ದೊಡ್ಡದಾಗಿ ಭಾವಿಸಿ ಕೊರಗುವಿರಿ. ತಿಳಿಯಿರಿ, ಹೊಂದಾಣಿಕೆಯೂ ಬದುಕಲ್ಲಿ ಮುಖ್ಯ.
ಮಿಥುನ
ಕೆಲಸದಲ್ಲಿ ಏಕಾಗ್ರತೆ ಕಷ್ಟವಾದೀತು. ಮನೆಯ ಪರಿಸ್ಥಿತಿ ಚಿಂತೆಗೆ ಕಾರಣವಾಗುವುದು. ಸಮಸ್ಯೆಗೆ ಸುಲಭ ಪರಿಹಾರ ಸದ್ಯ ಕಾಣದು.
ಕಟಕ
ಸಂತೋಷ, ಬೇಸರ, ವಾಗ್ವಾದ, ಸಂಧಾನ ಎಲ್ಲವೂ  ಇಂದು ನಿಮ್ಮ ದಿನದ ಭಾಗವಾಗಲಿದೆ.  ವೃತ್ತಿಯಲ್ಲಿ ಏರುಪೇರು ಅನುಭವಿಸುವಿರಿ.
ಸಿಂಹ
ಗ್ರಹಗತಿ ಇಂದು ಅಧಿಕ ಖರ್ಚು, ಅಸಹನೆ, ಅಸಹಕಾರ ಸೂಚಿಸುತ್ತಿವೆ. ಎಲ್ಲ ವಿಷಯದಲ್ಲೂ ತಾಳ್ಮೆಯಿಂದ ವ್ಯವಹರಿಸಬೇಕು.
ಕನ್ಯಾ
ದೈಹಿಕ ಉದಾಸೀನತೆ ನಿಮ್ಮ ಮನಸ್ಸನ್ನು ಮಂಕು ಗೊಳಿಸಲು ಅವಕಾಶ ಕೊಡದಿರಿ. ಮಾನಸಿಕವಾಗಿ ಉತ್ಸಾಹದಿಂದ ಇರುವುದು ಮುಖ್ಯ.
ತುಲಾ
ನಿಮ್ಮ ಸುತ್ತಮುತ್ತ ಗೊಂದಲದ ಸ್ಥಿತಿ ಉಂಟಾದೀತು. ನಿಮ್ಮ ಮೇಲೂ ಪರಿಣಾಮ ಬೀರಬಹುದು. ಎಚ್ಚರದಿಂದ ನಿಭಾಯಿಸಿ.
ವೃಶ್ಚಿಕ
ಸಮಸ್ಯೆಯೊಂದರ ಪರಿಹಾರಕ್ಕೆ ಪ್ರಯತ್ನಿಸು ತ್ತಿದ್ದರೆ ಇಂದು ಪೂರಕ ದಾರಿ ತೋರಲಿದೆ. ಇಷ್ಟದೇವರ ಪ್ರಾರ್ಥನೆ ಕೂಡ ಮಾಡಿರಿ.
ಧನು
ಭವಿಷ್ಯದ ಕುರಿತು
ಅತಿಯಾದ ಚಿಂತೆ ಬೇಡ. ಕೆಲದಿನಗಳಲ್ಲಿ ನಿಮ್ಮ ಪಾಲಿಗೆ ಆಶಾದಾಯಕ ಪರಿಸ್ಥಿತಿ ಮೂಡಲಿದೆ. ಆರ್ಥಿಕ ಉನ್ನತಿ.
ಮಕರ
ಮಹತ್ವಾಕಾಂಕ್ಷಿ ಯೋಜನೆಗೆ ಸೂಕ್ತ ಕಾಲ ಕೂಡಿಬರಲಿದೆ. ಬಯಸಿದ ಸಹಕಾರ ಲಭ್ಯ. ಹೊಂದಿಕೊಳ್ಳುವ ಗುಣವಿರಲಿ.
ಕುಂಭ
ಹಣದ ವ್ಯವಹಾರ ಮಾಡುವಾಗ ಗೊಂದಲ ಸೃಷ್ಟಿಯಾದೀತು. ಎಚ್ಚರ ದಿಂದಿರಿ. ಕೌಟುಂಬಿಕ ವಿಷಯ ಇಂದು ಆದ್ಯತೆ ಪಡೆಯುವುದು.
ಮೀನ
ಮಕ್ಕಳ ಜತೆ ತಾಳ್ಮೆಯಿಂದ ವ್ಯವಹರಿಸಿ. ಸಣ್ಣ ವಿಷಯಗಳಿಗೆ ರೇಗದಿರಿ. ಕೌಟುಂಬಿಕ ಸಾಮರಸ್ಯಕ್ಕೆ ಭಂಗ ಬರಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!