ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಆರು ದಿನಗಳಿಂದ ದೆಹಲಿಯಲ್ಲಿ ನಾಪತ್ತೆಯಾಗಿದ್ದ ತ್ರಿಪುರಾದ ವಿದ್ಯಾರ್ಥಿನಿ ಸ್ನೇಹಾ ಯಮುನಾ ತಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
19 ವರ್ಷದ ವಿದ್ಯಾರ್ಥಿನಿ ದೆಹಲಿ ವಿಶ್ವವಿದ್ಯಾಲಯದ ಆತ್ಮ ರಾಮ ಸನಾತನ ಧರ್ಮ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್ಸಿ. ಗಣಿತಶಾಸ್ತ್ರದ ವಿದ್ಯಾರ್ಥಿನಿಯಾಗಿದ್ದರು. ಅವರು ತನ್ನ ಕುಟುಂಬದೊಂದಿಗೆ ದೆಹಲಿಯ ಪರ್ಯಾವರಣ್ ಕಾಂಪ್ಲೆಕ್ಸ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಜುಲೈ 7ರಂದು ನಾಪತ್ತೆಯಾಗಿದ್ದರು.
ಪೂರ್ವ ದೆಹಲಿಯ ಗೀತಾ ಕಾಲೋನಿ ಪ್ರದೇಶದ ಬಳಿಯಮುನಾ ನದಿಯಿಂದ ಅವರ ಶವವನ್ನು ವಶಪಡಿಸಿಕೊಳ್ಳಲಾಗಿದೆ. ಆಕೆಯ ಕುಟುಂಬದವರು ನೀಡಿರುವ ಮಾಹಿತಿ ಪ್ರಕಾರ ಸ್ನೇಹಾ ಸಿಗ್ನೇಚರ್ ಸೇತುವೆಯಿಂದ ಜಿಗಿಯಲು ಯತ್ನಿಸಿದ್ದಳು ಆಗ ಕ್ಯಾಬ್ ಚಾಲಕ ಆಕೆಯನ್ನು ರಕ್ಷಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಆ ಪ್ರದೇಶದಲ್ಲಿ ಸಿಸಿಟಿವಿ ಸರಿಯಾಗಿ ಕೆಲಸ ಮಾಡದ ಕಾರಣ , ಸ್ನೇಹಾ ಕ್ಯಾಬ್ನಿಂದ ಇಳಿದ ಬಳಿಕ ಆಕೆಯ ಚಲನವಲನಗಳನ್ನು ಸರಿಯಾಗಿ ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಸ್ನೇಹಾ ಅಕ್ಕ ಬಿಪಾಶಾ ನೀಡಿರುವ ನಾಪತ್ತೆ ದೂರಿನ ಪ್ರಕಾರ ಪೊಲೀಸರು ಜುಲೈ 7ರ ಬೆಳಗ್ಗೆ ಸ್ನೇಹಾ ತಾಯಿ ಪಿಂಕಿ ಅವರಿಗೆ ತನ್ನ ಸ್ನೇಹಿತೆ ಪಿಟುನಿಯಾಳನ್ನು ಸರಾಯ್ ರೋಹಿಲ್ಲಾ ರೈಲು ನಿಲ್ದಾಣದಲ್ಲಿ ಬಿಡುವುದಾಗಿ ಹೇಳಿದ್ದಳು. ಸ್ನೇಹಾ ಬೆಳಗ್ಗೆ 5.15ರ ಸುಮಾರಿಗೆ ಮನೆಯಿಂದ ಹೊರಟಿದ್ದಳು.
ನಾವು ಬೆಳಗ್ಗೆ 8.45ಕ್ಕೆ ಕರೆ ಮಾಡಲು ಯತ್ನಿಸಿದಾಗ ಫೋನ್ ಸ್ವಿಚ್ಡ್ ಆಫ್ ಆಗಿತ್ತು.ಆಕೆಯ ಸ್ನೇಹಿತೆಯನ್ನು ಸಂಪರ್ಕಿಸಿದಾಗ ಆಕೆ ತನ್ನನ್ನು ಭೇಟಿಯಾಗಲು ಬಂದೇ ಇಲ್ಲ ಎಂದು ಹೇಳಿದ್ದರು. ನಂತರ ನಾನು ಪಿಟೂನಿಯಾದಿಂದ ಕ್ಯಾಬ್ ಚಾಲಕನ ಸಂಖ್ಯೆಯನ್ನು ತೆಗೆದುಕೊಂಡು ಅವನಿಗೆ ಕರೆ ಮಾಡಿದೆ. ಅವರು ಸ್ನೇಹಾಳನ್ನು ವಜೀರಾಬಾದ್ನ ಸಿಗ್ನೇಚರ್ ಬ್ರಿಡ್ಜ್ನಲ್ಲಿ ಡ್ರಾಪ್ ಮಾಡಿದ್ದಾರೆ ಎಂದು ಹೇಳಿದರು ಎಂದು ಬಿಪಾಶಾ ಹೇಳಿದ್ದಾರೆ.