ಕೆಲವು ಸಂದರ್ಭಗಳಲ್ಲಿ ಹಳೆಯ ಪ್ರೀತಿಯ ನೆನಪುಗಳು ಮತ್ತೆ ಕಾಡುತ್ತವೆ. ಮರೆಯಲಾಗದ ಭಾವನೆಗಳು, ಹಳೆಯ ಸಂಬಂಧದ ಉಡುಗೊರೆಗಳು ಇಂದಿಗೂ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಆದರೆ, ಹಿಂದಿನ ಪ್ರೇಮಿ ಅಥವಾ ಪ್ರೇಯಸಿಯ ಬಗ್ಗೆ ಮತ್ತೆ ಒಲವು ಮೂಡಿದಾಗ, ಪುನಃ ಸಂಬಂಧ ಬೆಳೆಸುವುದೇ ಸೂಕ್ತವೆ? ಎಂಬ ಪ್ರಶ್ನೆ ಎದುರಾಗುವುದು ಸಹಜ. ಅಂತಹ ನಿರ್ಣಯದ ಮುನ್ನ ನೀವು ಈ ಪ್ರಮುಖ ಪ್ರಶ್ನೆಗಳನ್ನು ನಿಮ್ಮೊಳಗೆ ಕೇಳಿಕೊಳ್ಳಿ.
ಏನು ತಪ್ಪಿತ್ತೆಂದು ಇಬ್ಬರಿಗೂ ಸ್ಪಷ್ಟವಾಗಿದೆಯೆ?: ಹಿಂದಿನ ಸಂಬಂಧ ಕೊನೆಗೊಳ್ಳಲು ಕಾರಣವಾದ ವಿಷಯಗಳ ಬಗ್ಗೆ ನೀವು ಮತ್ತು ನಿಮ್ಮ ಮಾಜಿ ಪ್ರೇಮಿ ಇಬ್ಬರೂ ಸ್ಪಷ್ಟವಾಗಿರುವಿರಾ? ಮುನ್ನಡೆವ ಮೊದಲು ಆ ತಪ್ಪುಗಳನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳುವುದು ಮತ್ತು ಅವುಗಳನ್ನು ಪುನಃ ಮಾಡದಂತೆ ತಡೆಗಟ್ಟುವುದು ಅತ್ಯಂತ ಅಗತ್ಯ.
ನಿಮ್ಮ ಹೃದಯ ಆಕೆಗಾಗಿ ಮಿಡಿಯುತ್ತಿದ್ಯಾ?: ನೀವು ನಿಜವಾಗಿಯೂ ಆ ವ್ಯಕ್ತಿಯೇನೋ ತೀರಾ ಮಿಸ್ ಮಾಡುತ್ತಿದ್ದೀರಾ ಅಥವಾ ಕೇವಲ ಆತನ/ಆಕೆಯೊಂದಿಗೆ ಕಳೆದ ಸಮಯವನ್ನೋ ಮಿಸ್ ಮಾಡುತ್ತಿದ್ದೀರಾ ಎಂಬ ಪ್ರಶ್ನೆ ಬಹುಮುಖ್ಯ. ಒಬ್ಬ ವ್ಯಕ್ತಿಯ ಜೊತೆಗೆ ಇರುವ ಭಾವನಾತ್ಮಕ ತೃಪ್ತಿ, ಆರಾಮ, ಅಥವಾ ಆನುಭವವೇನೋ ನಿಮಗೆ ಹೆಚ್ಚು ಅರ್ಥವತ್ತಾಗಿ ಕಾಣುತ್ತಿದೆಯೆ?
ಇದೊಂದು ಪರಸ್ಪರ ಬದ್ಧ ಸಂಬಂಧವಾಗಬಹುದೆ?: ಮತ್ತೆ ಸಂಬಂಧ ಬೆಳೆಸಲು ನೀವು ಇಬ್ಬರೂ ಒಂದೇ ಮಟ್ಟದಲ್ಲಿ ಬದ್ಧರಾಗಿರುವಿರಾ? ಇದೊಂದು ಬದ್ಧತೆ ಮತ್ತು ಭರವಸೆಗಳ ಮೇಲೆ ಆಧಾರಿತ ನೈಜ ಸಂಬಂಧವೋ ಅಥವಾ ಕೇವಲ ಒಬ್ಬ ವ್ಯಕ್ತಿಯ ಇಚ್ಛೆಯೊಳಗೆ ಸೀಮಿತವೋ ಎಂಬುದು ಸ್ಪಷ್ಟವಾಗಬೇಕು.
ವಿಷಯಗಳು ಬದಲಾಗಿವೆ ಎಂಬುದಕ್ಕೆ ಪುರಾವೆ ಇದೆಯೇ?: ಹಿಂದಿನ ತಪ್ಪುಗಳು ಮರುಕಳಿಸದಂತೆ ನೀವಿಬ್ಬರು ಪ್ರಯತ್ನಿಸುತ್ತಿದ್ದೀರಾ? ಕ್ಷಮೆ ಕೇಳುವುದು, ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಹೆಜ್ಜೆ ಇಡುವುದು, ನಿಮ್ಮ ವ್ಯಕ್ತಿತ್ವದಲ್ಲಿ ಏನು ಬದಲಾಗಿದೆ ಎಂಬುದರ ಪುರಾವೆ ನೀಡುವುದು – ಈ ಎಲ್ಲವೂ ಗಂಭೀರತೆಯ ಸಂಕೇತಗಳಾಗಿವೆ.
ಹಿಂದೆ ಮಾಡಿದ ತಪ್ಪುಗಳನ್ನು ಮರುಕಳಿಸದಂತೆ ಯಾವ ಕ್ರಮ ತೆಗೆದುಕೊಳ್ಳುತ್ತೀರಾ?: ಒಮ್ಮೆ ಮತ್ತೆ ಸಂಪರ್ಕದಲ್ಲಿ ಬಂದ್ರೆ, ನೀವು ಯಾವುದೇ ತೊಂದರೆ ಅಥವಾ ಮನಸ್ತಾಪ ಪುನರಾವೃತ್ತಿಯಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಸಂವಹನದಲ್ಲಿ ಸ್ಪಷ್ಟತೆ, ನಿಯಮಗಳು ಮತ್ತು ಪ್ರಾಮಾಣಿಕತೆ ಬಹುಪಾಲು ಸಮಸ್ಯೆಗಳಿಗೆ ಪರಿಹಾರವಾಗಬಹುದು.