ಕೂದಲು ಉದುರುವ ಸಮಸ್ಯೆ ಈಗ ಸಾಮಾನ್ಯವಾಗಿಬಿಟ್ಟಿದೆ. ಎಣ್ಣೆ, ಸೀರಮ್, ಪ್ಯಾಕ್, ಶ್ಯಾಂಪೂ ಹೀಗೆ ಹಲವು ರೀತಿಯ ಪ್ರಯೋಗಗಳನ್ನು ಮಾಡಿದರೂ ನಿರೀಕ್ಷಿತ ಫಲಿತಾಂಶ ಸಿಗದು. ಇದರ ಪ್ರಮುಖ ಕಾರಣವೆಂದರೆ ಕೂದಲಿಗೆ ಒಳಗಿನಿಂದ ಶಕ್ತಿಯ ಅಗತ್ಯವಿದೆ. ಯಾವಾಗ ಬೇರುಗಳಿಗೆ ಪೋಷಣೆ ದೊರೆಯುತ್ತದೆಯೋ ಅಂದಾಗ ಮಾತ್ರ ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ. ಹೊರಗಿನ ಚಿಕಿತ್ಸೆ ಸ್ವಲ್ಪ ಸಮಯಕಷ್ಟೇ ಶಾಶ್ವತ ಪರಿಹಾರವು ಆಹಾರದಿಂದಲೇ ಸಾಧ್ಯ.
ಒಮೆಗಾ 3 ಮತ್ತು 6 ಕೊಬ್ಬಿನಾಮ್ಲಗಳು: ಕೂದಲಿಗೆ ಮೂಲ ಶಕ್ತಿ
ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳು ಕೂದಲು ಬೆಳೆಯಲು ಪ್ರಮುಖ ಪಾತ್ರವಹಿಸುತ್ತವೆ. ಇವು ದಪ್ಪ, ಉದ್ದ ಕೂದಲಿಗೆ ನೆರವಾಗುತ್ತವೆ. ಪ್ರತಿ ದಿನದ ಆಹಾರದಲ್ಲಿ ಇವುಳ್ಳ ಪದಾರ್ಥಗಳನ್ನು ಸೇರಿಸುವುದು ಉತ್ತಮ.
ಸಸ್ಯಾಹಾರಿಗಳಿಗೆ ಸೂಕ್ತ ಆಹಾರಗಳು:
ಚಿಯಾ ಬೀಜಗಳು, ಅಗಸೆ ಬೀಜಗಳು ಹಾಗೂ ವಾಲ್ನಟ್‌ಗಳು ಒಮೆಗಾ-3/6 ನ ಉತ್ತಮ ಮೂಲಗಳಾಗಿವೆ.
ದಿನಕ್ಕೆ 1 ಚಮಚ ಚಿಯಾ ಅಥವಾ ಅಗಸೆ ಬೀಜ ಸೇವಿಸಬಹುದು.
ಅಗಸೆ ಬೀಜಗಳನ್ನು ಒಣಗಿಸಿ ಪುಡಿಮಾಡಿ ಸೇವಿಸುವುದರಿಂದ ಅದು ದೇಹದಲ್ಲಿ ಚೆನ್ನಾಗಿ ಹೀರಿಕೊಳ್ಳುತ್ತದೆ.
ಮಾಂಸಾಹಾರಿಗಳಿಗೆ ಪೋಷಕ ಮೀನುಗಳು:
ಸಾಲ್ಮನ್ ಅಥವಾ ಸಾರ್ಡೀನ್ ತರಹದ ಮೀನುಗಳು ಈ ಕೊಬ್ಬಿನಾಮ್ಲಗಳಲ್ಲಿ ತುಂಬಿರುತ್ತವೆ. ಅವುಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಬಹುದಾಗಿದೆ.
ಕೂದಲು ಉದುರುವ ಕಾರಣಗಳು:
ಹಾರ್ಮೋನಲ್ ಬದಲಾವಣೆ, ಮಾಲಿನ್ಯ, ಖಾಯಿಲೆಗಳು, ಪೌಷ್ಟಿಕಾಂಶದ ಕೊರತೆ, ನಿದ್ರೆಯ ಕೊರತೆ, ಹೆಚ್ಚಾದ ಒತ್ತಡ – ಇವೆಲ್ಲವೂ ಕೂದಲು ಉದುರುವ ಪ್ರಮುಖ ಕಾರಣಗಳು. ಈ ಸಮಸ್ಯೆ ನಿವಾರಣೆಗೆ ಶುದ್ಧ, ಪೌಷ್ಟಿಕ ಆಹಾರವನ್ನು ದಿನನಿತ್ಯ ಸೇವಿಸಬೇಕು.
ಆಹಾರವೇ ಶ್ರೇಷ್ಠ ಪರಿಹಾರ:
ದೈನಂದಿನ ಆಹಾರದಲ್ಲಿ ಸರಿಯಾದ ಪದಾರ್ಥಗಳನ್ನು ಸೇರಿಸಿಕೊಂಡರೆ ಕೂದಲಿನ ಉದುರುವಿಕೆ 90%ರಷ್ಟು ಕಡಿಮೆಯಾಗುತ್ತದೆ. ಜೊತೆಗೆ ಕೂದಲು ದಪ್ಪವಾಗಿ ಬೆಳೆಯಲು ನೆರವಾಗುತ್ತದೆ. ಬಾಹ್ಯ ಚಿಕಿತ್ಸೆಗಳಿಗಿಂತ ಸರಳ ಆಹಾರ ಕ್ರಮಗಳೇ ಹೆಚ್ಚು ಪರಿಣಾಮಕಾರಿಯಾಗುತ್ತವೆ.
ಕೂದಲಿನ ಆರೋಗ್ಯಕ್ಕೆ ಎಲ್ಲಕ್ಕಿಂತ ಮೊದಲು ಒಳಗಿನ ಶಕ್ತಿ ಬೇಕು. ಆಹಾರದ ಮೂಲಕ ಸರಿಯಾದ ಪೋಷಣೆ ಒದಗಿಸಿದರೆ, ದಪ್ಪವಾದ, ಆರೋಗ್ಯಪೂರ್ಣ ಕೂದಲನ್ನು ಪಡೆಯುವುದು ಸಾಧ್ಯ.