Fish Benefits | ಹಾರ್ಟ್ ಪ್ರಾಬ್ಲಂನಿಂದ ಬಚಾವಾಗ್ಬೇಕಾ? ಹಾಗಿದ್ರೆ ಈ ಮೀನು ಬೆಸ್ಟ್ ಒಪ್ಶನ್ !

ಮಾಂಸಾಹಾರ ಪ್ರಿಯರಿಗೆ ಮೀನಿನಂತ ರುಚಿ ಹಾಗೂ ಆರೋಗ್ಯ ತುಂಬಿದ ಆಹಾರವೇ ಇಲ್ಲ ಎಂಬುದು ನಿಜ. ಮೀನಿನ ವಿವಿಧ ಪ್ರಭೇದಗಳಲ್ಲಿ ಕೆಲವು ಮಾತ್ರ ಹೆಚ್ಚು ಜನಪ್ರಿಯವಾಗಿದ್ದರೂ, ಕೆಲವೊಂದು ಮೀನುಗಳು ತಮ್ಮ ಪೌಷ್ಟಿಕತೆಗೆ ಹೆಸರುವಾಸಿಯಾಗಿವೆ. ಅಂಥದ್ದೇ ಒಂದು ವಿಶಿಷ್ಟ ಮೀನು ಎಂದರೆ “ತುಂಬಿಲಿ” ಅಥವಾ ಲಿಜರ್ಡ್ ಫಿಶ್. ಇದು ಕಡುಗೆಂಪು ಬೆನ್ನು, ಬಿಳಿ ಹೊಟ್ಟೆ ಮತ್ತು ಉದ್ದವಾದ ದೇಹ ಹೊಂದಿರುವ ಇದು ಸಿಹಿನೀರಿನ ಮೀನು.

ನಿಮ್ಮ ಮಗು ಬುದ್ಧಿವಂತ ಮಗುವಾಗಿ ಹುಟ್ಟಬೇಕು ಎಂದರೆ ಈ 4 ಬಗೆಯ ಮೀನುಗಳನ್ನು ತಿನ್ನಲು  ಮರೆಯದಿರಿ! | The 4 best fish to eat during pregnancy - Kannada BoldSky

ಈ ಮೀನು ಹೆಚ್ಚಿನ ಸಂಖ್ಯೆಯಲ್ಲಿ ಹಿಂದು ಮಹಾಸಾಗರ ಹಾಗೂ ಬಂಗಾಳಕೊಲ್ಲಿಯ ಸಮುದ್ರ ಪ್ರದೇಶಗಳಲ್ಲಿ ದೊರೆಯುತ್ತಿದ್ದು, ವರ್ಷದ ಬಹುತೇಕ ಭಾಗದಲ್ಲಿ ಲಭ್ಯವಿರುತ್ತದೆ. ಇದರ ಲಭ್ಯತೆ ಮತ್ತು ರುಚಿಯೇ ಈ ಮೀನಿನ ಬೆಲೆಯಲ್ಲಿ ಏರಿಳಿತಕ್ಕೂ ಕಾರಣವಾಗುತ್ತದೆ.

ಆಕರ್ಷಕ ಲಕ್ಷಣಗಳು:
ಸಾಮಾನ್ಯವಾಗಿ 15–20 ಸೆಂ.ಮೀ ಉದ್ದವಿರುವ ಈ ಸಣ್ಣ ಮೀನು ಪ್ರತಿ ಕಿಲೋಗೆ 200ರಷ್ಟರ ಮೌಲ್ಯ ಹೊಂದಿದೆ. ಮಾಂಸ ಹಿಟ್ಟಿನಂತಹ ಮೃದುವಾಗಿದ್ದು, ಮಧ್ಯಭಾಗ ಸ್ವಲ್ಪ ದಪ್ಪವಾಗಿ ಕಾಣಿಸುತ್ತದೆ. ಇದರಲ್ಲಿ ಮುಳ್ಳುಗಳ ಪ್ರಮಾಣ ಹೆಚ್ಚು.

ಪೌಷ್ಟಿಕ ತತ್ವಗಳು ಹಾಗೂ ಔಷಧೀಯ ಪ್ರಯೋಜನಗಳು:

ತುಂಬಿಲಿ ಮೀನು ಪೋಷಕಾಂಶಗಳ ಸಮೃದ್ಧ ಭಂಡಾರವಾಗಿದೆ.

ಇದರಲ್ಲಿ ಇರುವ ಒಮೆಗಾ-3 ಕೊಬ್ಬಿನಾಮ್ಲ ಹಾಗೂ ಅಮೈನೋ ಆಮ್ಲಗಳು ದೇಹದ ಬೊಜ್ಜುತನವನ್ನು ತಡೆದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಮೂಳೆ ನೋವು, ತುರಿಕೆ, ದದ್ದು ಮುಂತಾದ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯಕ.

ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳ ಬಲವರ್ಧನೆಗೆ, ಹಲ್ಲುಗಳ ರಕ್ಷಣೆಗೆ ಸಹಾಯಕ.

ಹೃದಯಾಘಾತ ಹಾಗೂ ಪಾರ್ಶ್ವವಾಯುವಂತಹ ಗಂಭೀರ ಸಮಸ್ಯೆಗಳಿಗೆ ತಡೆಯುವ ಗುಣವಿದೆ.

ಪ್ರೋಟೀನ್ ಅಧಿಕವಾಗಿರುವುದರಿಂದ ತೂಕ ನಿಯಂತ್ರಣ ಮತ್ತು ಶರೀರದ ಆರೋಗ್ಯ ನಿರ್ವಹಣೆಗೆ ಬಹುಪಾಲು ಸಹಾಯ ಮಾಡುತ್ತದೆ.

బట్టర్ (వెన్న)గార్లిక్ ఫిష్ ఫ్రై రిసిపి | Butter Garlic Fish Fry - Telugu  BoldSky

ಈ ಮೀನನ್ನು ಫ್ರೈ ಮಾಡಿದರೆ ಅತ್ಯುತ್ತಮ ರುಚಿಯನ್ನು ನೀಡುತ್ತದೆ. ಜೊತೆಗೆ ಫಿಶ್ ಗ್ರೇವಿಯಲ್ಲೂ ಬಳಸಬಹುದು. ಸಾಂಪ್ರದಾಯಿಕ ರುಚಿ ಮತ್ತು ಆರೋಗ್ಯ ಎರಡೂ ಬೇಕೆಂದರೆ ಈ ಮೀನನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಸೂಕ್ತ.

ತುಂಬಿಲಿ ಮೀನು ಆರೋಗ್ಯಪೂರ್ಣ ಆಹಾರದ ಹುಡುಕಾಟದಲ್ಲಿರುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ರುಚಿ ಮತ್ತು ಪೌಷ್ಟಿಕತೆಯ ಸಮಪಂಗಡವನ್ನು ಹೊಂದಿರುವ ಈ ಸಿಹಿನೀರಿನ ಮೀನು, ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದಾದ ಆಯ್ಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!