FOOD | ರೆಸ್ಟೋರೆಂಟ್ ಸ್ಟೈಲ್ ಕಾಜು ಮಶ್ರೂಮ್ ಮಸಾಲಾ! ಒಂದ್ಸಲ ಟ್ರೈ ಮಾಡಿ

ಮಳೆಗಾಲದಲ್ಲಿ ಬಿಸಿಯ ಬಿಸಿಯ ತಿಂಡಿಗಳ ಜತೆಗೆ ರುಚಿಕರ ಗ್ರೇವಿ ಆಧಾರಿತ ಕರಿಗಳು ಅತ್ಯುತ್ತಮ ಆಯ್ಕೆ. ಇವತ್ತು ಮನೆಯಲ್ಲಿಯೇ ಸಿಂಪಲ್ ಆಗಿ ರೆಸ್ಟೋರೆಂಟ್ ಶೈಲಿಯ “ಕಾಜು ಮಶ್ರೂಮ್ ಮಸಾಲಾ” ಮಾಡೋದು ಹೇಗೆ ಅಂತ ನೋಡೋಣ.

ಬೇಕಾಗುವ ಪದಾರ್ಥಗಳು:

ಟೊಮೆಟೊ – 3
ಗೋಡಂಬಿ – 1/4 ಕಪ್ (15 ನಿಮಿಷಗಳ ಕಾಲ ನೆನೆಸಿಡಿ)
ಮೆಣಸಿನಕಾಯಿ-3
ಬೆಳ್ಳುಳ್ಳಿ ಎಸಳು – 4
ಏಲಕ್ಕಿ – 2
ಲವಂಗ – 3
ಒಂದು ಸಣ್ಣ ತುಂಡು ಶುಂಠಿ
ಮೊಸರು – 1/4 ಕಪ್
ಒಣ ಮೆಣಸಿನಕಾಯಿ – 2
ಕರಿ ಮೆಣಸು – 1/2 ಟೀ ಸ್ಪೂನ್
ಅಣಬೆ – 150 ಗ್ರಾಂ
ಗೋಡಂಬಿ – 3/4 ಕಪ್
ಎಣ್ಣೆ – ಬೇಕಾಗುವಷ್ಟು
ಈರುಳ್ಳಿ – 1
ಜೀರಿಗೆ – 1 ಟೀ ಸ್ಪೂನ್
ಗರಂ ಮಸಾಲಾ – 1/2 ಟೀ ಸ್ಪೂನ್
ಧನಿಯಾ ಪುಡಿ-1/2 ಟೀ ಸ್ಪೂನ್
ಉಪ್ಪು – ಬೇಕಾಗುವಷ್ಟು
ನೀರು – ಬೇಕಾಗುವಷ್ಟು
ತುಪ್ಪ – 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು
ನಿಂಬೆ ರಸ – ಸ್ವಲ್ಪ

ಮಾಡುವ ವಿಧಾನ:

ಮೊದಲು ಟೊಮೆಟೊ, ಶುಂಠಿ, ಮೆಣಸಿನಕಾಯಿ, ಬೆಳ್ಳುಳ್ಳಿ, ಲವಂಗ, ಏಲಕ್ಕಿ, ಕರಿ ಮೆಣಸು, ನೆನೆಸಿದ ಗೋಡಂಬಿ ಮತ್ತು ಮೊಸರು ಸೇರಿಸಿ ನುಣ್ಣಗೆ ಪೇಸ್ಟ್‌ ಮಾಡಿ. ಇದಕ್ಕೆ ಸ್ವಲ್ಪ ನೀರನ್ನೂ ಸೇರಿಸಬಹುದು.

ಸ್ಟೌವ್ ಮೇಲೆ ಬಾಣಲೆ ಇಟ್ಟು ಎಣ್ಣೆ ಮೊದಲಿಗೆ ಗೋಡಂಬಿ ಹಾಕಿ ಹುರಿಯಿರಿ. ನಂತರ ಮಶ್ರೂಮ್‌ಗಳನ್ನು ಸೇರಿಸಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ಇದನ್ನು ಬೇರೆ ಬಟ್ಟಲಿಗೆ ತೆಗೆದು ಬಿಡಿ. ಈಗ ಅದೇ ಎಣ್ಣೆಯಲ್ಲಿ ಜೀರಿಗೆ, ಈರುಳ್ಳಿ ಹಾಕಿ ಹಾಕಿ ಹುರಿದ ಮೇಲೆ ಗರಂ ಮಸಾಲಾ, ಧನಿಯಾ ಪುಡಿ ಸೇರಿಸಿ ಮಿಶ್ರಣ ಮಾಡಿ. ಬಳಿಕ ತಯಾರಿಸಿದ ಗೋಡಂಬಿ ಪೇಸ್ಟ್‌ ಸೇರಿಸಿ ಎಣ್ಣೆ ಮೇಲಕ್ಕೆ ಬರುವವರೆಗೆ ಬೇಯಿಸಿ.

ಅನಂತರ ಬೇಕಾದಷ್ಟು ನೀರು ಸೇರಿಸಿ ದಪ್ಪ ಗ್ರೇವಿ ತಯಾರಿಸಿ. ಉಪ್ಪು, ಹುರಿದ ಗೋಡಂಬಿ ಮತ್ತು ಮಶ್ರೂಮ್ ಸೇರಿಸಿ 5 ನಿಮಿಷ ಬೇಯಿಸಿ. ಕೊನೆಯದಾಗಿ ತುಪ್ಪ, ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ನಿಂಬೆ ರಸ ಹಾಕಿ 2 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿದರೆ ಕಾಜು ಮಶ್ರೂಮ್ ಮಸಾಲಾ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!