Sadabahar Flowers | ನಿತ್ಯಪುಷ್ಪ ಹೂ: ಮನೆ ಅಂಗಳದಲ್ಲಿರುವ ಆರೋಗ್ಯದ ಖಜಾನೆ!

ನಮ್ಮ ಮನೆ ಮೆಟ್ಟಿಲು, ಬಾಲ್ಕನಿ, ಅಥವಾ ಹಳ್ಳಿ ರಸ್ತೆಯ ಬದಿಯಲ್ಲಿ ಕಾಣುವ ನಿತ್ಯಪುಷ್ಪ ಹೂವುಗಗಳು ನೋಡೋದಕ್ಕೆ ಚಂದ ಆದರೆ ಅದರಲ್ಲಿ ಔಷಧೀಯ ಗುಣ ಇದೆ ಎಂಬುದು ಕೆಲವೇ ಜನರು ತಿಳಿದಿದೆ. ಕೇವಲ ಅಲಂಕಾರ ಅಥವಾ ಸುಗಂಧ ನೀಡುವ ನಿಟ್ಟಿನಲ್ಲಿ ಮಾತ್ರವಲ್ಲದೆ, ಆಯುರ್ವೇದದಲ್ಲಿ ಇದರ ಹೂವಿನ ಔಷಧೀಯ ಗುಣಗಳು ಅಪಾರವೆಂದು ಗುರುತಿಸಲಾಗಿದೆ. ಅಂದಮೇಲೆ, ಈ ನಿತ್ಯಹರಿದ್ವರ್ಣ ಹೂವುಗಳಲ್ಲಿ ಆರೋಗ್ಯವರ್ಧಕ ಗುಣನಗಳೇನು ಎಂಬುದನ್ನು ನೋಡೋಣ.

beautiful flower of Sada Bahar (Madagascar Periwinkle) beautiful purple colour flower of Madagascar Periwinkle with rain water droplet on flower in monsoon season. Sadabahar flower stock pictures, royalty-free photos & images

ಆಯುರ್ವೇದದ ಔಷಧೀಯ ಶಕ್ತಿಯಿಂದ ತುಂಬಿರುವ ಹೂವು
ನಿತ್ಯಪುಷ್ಪ ಅಥವಾ ಸದಾಬಹರ್ (Sadabahar) ಹೂವು ಸಸ್ಯವಿಜ್ಞಾನದಲ್ಲಿ “Catharanthus roseus” ಎಂದು ಕರೆಯಲ್ಪಡುತ್ತದೆ. ಇದರ ಹೂವುಗಳು ಮತ್ತು ಎಲೆಗಳು ಆಯುರ್ವೇದದಲ್ಲಿ ಅನೇಕ ತೊಂದರೆಗಳಿಗೆ ಔಷಧಿಯಾಗಿ ಬಳಕೆಯಾಗುತ್ತವೆ.

ಮಧುಮೇಹ ನಿಯಂತ್ರಣ
ನಿತ್ಯಪುಷ್ಪ ಹೂವುಗಳನ್ನು ಮಧುಮೇಹ ನಿಯಂತ್ರಣಕ್ಕೆ ಸಹಜ ಮನೆಮದ್ದು ಎಂಬಂತೆ ಬಳಸಲಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಹೂವಿನ ಪುಷ್ಪಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಧಾನವಾಗಿ ಕಡಿಮೆಯಾಗುತ್ತೆ ಎನ್ನುತ್ತಾರೆ.

Sadabahar/Catharanthus roseus/Periwinkle White Flower Plant with Pot :  Amazon.in: Garden & Outdoors

ಚಯಾಪಚಯ ಕ್ರಿಯೆ ಸುಧಾರಣೆಗೆ ನೆರವಾಗುತ್ತದೆ
ಈ ಹೂವುಗಳು ದೇಹದ ಮೆಟಾಬಾಲಿಕ್ ಕ್ರಿಯೆ ಅಥವಾ ಚಯಾಪಚಯ ವ್ಯವಸ್ಥೆಗೆ ಸಹ ಸಹಕಾರಿ. ದಿನನಿತ್ಯ ಈ ಹೂವುಗಳ ಹಸಿರು ಎಲೆ ಅಥವಾ ಹೂವನ್ನು ಸೇವಿಸುವುದರಿಂದ ದೇಹದ ಶುದ್ಧೀಕರಣ ಪ್ರಕ್ರಿಯೆ ಸುಧಾರಿಸುತ್ತದೆ.

ಜೀರ್ಣಕ್ರಿಯೆಗೆ ಅನುಕೂಲ, ಹೊಟ್ಟೆ ಸಮಸ್ಯೆಗಳಿಗೆ ಪರಿಹಾರ
ಅನಿಲ, ಆಮ್ಲೀಯತೆ, ಮತ್ತು ಮಲಬದ್ಧತೆಯನ್ನು ನಿತ್ಯಪುಷ್ಪ ಹೂವಿನ ಸೇವನೆಯ ಮುಖಾಂತರ ಕಡಿಮೆ ಮಾಡಬಹುದು. ಹೊಟ್ಟೆ ನೋವು ಅಥವಾ ಸುಸ್ತು ಅನುಭವಿಸುವವರು ಇದನ್ನು ನಿತ್ಯ ಆಹಾರ ಕ್ರಮದಲ್ಲಿ ಸೇರಿಸಬಹುದಾಗಿದೆ.

Sadabahar Images – Browse 139 Stock Photos, Vectors, and Video | Adobe Stock

ಚರ್ಮದ ತೊಂದರೆಗಳಿಗೆ ಸಹಾಯಕರ
ಮೊಡವೆ, ಉರಿ ಅಥವಾ ಇತರ ಚರ್ಮದ ಸಮಸ್ಯೆಗಳಿಗೆ ಈ ಹೂವಿನ ಪೇಸ್ಟ್ ಅನ್ನು ತಯಾರಿಸಿ ಭಾಗಕ್ಕೆ ಹಚ್ಚಿದರೆ ಮೊಡವೆಗಳು ಕಡಿಮೆಯಾಗುತ್ತದೆ. ಇದರ ರಸವನ್ನು ಕೂಡ ಆಂತರಿಕವಾಗಿ ಸೇವಿಸಬಹುದಾಗಿದೆ, ಆದರೆ ವೈದ್ಯರ ಸಲಹೆ ಮೂಲಕ.

ಎಚ್ಚರಿಕೆಯಿಂದ ಬಳಕೆ ಮಾಡಬೇಕು
ನಿತ್ಯಹರಿದ್ವರ್ಣ ಹೂವು ಔಷಧೀಯವಾಗಿದ್ದರೂ, ಎಲ್ಲರ ದೇಹಕ್ಕೆ ಹೊಂದಿಕೆಯಾಗುತ್ತವೆ ಎನ್ನುವುದು ಖಚಿತವಲ್ಲ. ಗರ್ಭಿಣಿಯರು ಅಥವಾ ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವವರು ಇದನ್ನು ಬಳಸುವ ಮೊದಲು ತಜ್ಞರ ಸಲಹೆ ಪಡೆಯುವುದು ಅತ್ಯಗತ್ಯ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!