ಹೊಸದಿಗಂತ ವರದಿ ವಿಜಯಪುರ:
ಭೀಮೆಯ ಮಡಲಿನ ಲಿಂಬೆ ನಾಡಿನ ಸರ್ವಾಂಗೀಣ ಅಭಿವೃದ್ಧಿಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಚಾಲನೆ ನೀಡಿದರು.
ಪಟ್ಟಣದ ಪೊಲೀಸ್ ಕವಾಯತು ಮೈದಾನದಲ್ಲಿ ತಾಲೂಕಿನ 4557 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಾದ 19 ಕೆರೆಗಳ ಲೋಕಾರ್ಪಣೆ, ಜಿಟಿಟಿಸಿ ಕಾಲೇಜ್ ಶಂಕುಸ್ಥಾಪನೆ, ಹೊರ್ತಿ- ರೇವಣಸಿದ್ಧೇಶ್ವರ ಏತ ನೀರಾವರಿ (ಹಂತ 1, 2, 3), ಕೈಗಾರಿಕಾ ವಸಾಹತು ಪ್ರದೇಶ, ರಸ್ತೆ, ಪಶುವೈದ್ಯಕೀಯ ಆಸ್ಪತ್ರೆ, ಶಾಲೆ, ಕಾಲೇಜ್, ವಸತಿ ನಿಲಯ, ಸಿದ್ಧೇಶ್ವರ ಮೇಘಾ ಮಾರುಕಟ್ಟೆ, ಹೆದ್ದಾರಿ ಸೇರಿದಂತೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಲೋಕಾರ್ಪಣೆ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಶಾಸಕ ಯಶವಂತರಾಯಗೌಡ ಪಾಟೀಲ, ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಎಚ್.ಕೆ. ಪಾಟೀಲ, ದಿನೇಶ ಗೂಂಡುರಾವ, ಶರಣಪ್ರಕಾಶ ಪಾಟೀಲ, ಎಚ್.ಸಿ. ಮಹಾದೇವಪ್ಪ, ಶರಣಬಸಪ್ಪ ದರ್ಶನಾಪುರ, ಶಾಸಕ ವಿಠ್ಠಲ ಕಟಕಧೊಂಡ, ಅಶೋಕ ಮನಗೂಳಿ, ಡಿಸಿ ಡಾ.ಆನಂದ ಕೆ., ಎಸ್ಪಿ ಲಕ್ಷ್ಮಣ ನಿಂಬರಗಿ, ಜಿಪಂ ಸಿಇಒ ರಿಷಿ ಆನಂದ ಸೇರಿದಂತೆ ಇತರರು ಇದ್ದರು.