ಮಗಳು ತಂದೆಗೆ ಅತ್ಯಂತ ಹತ್ತಿರವಾಗಿರುತ್ತಾಳೆ. ಮಗುವಿನ ರೂಪದಲ್ಲಿದ್ದ ಮಗಳು, ತಂದೆಯ ಪ್ರೀತಿ, ಬೆಂಬಲದ ನೆರಳಿನಲ್ಲಿ ಬೆಳೆದಾಗಲೇ ಆಕೆಯ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆದ್ದರಿಂದ ಮಗಳ ಮೇಲೆ ಅತ್ಯಂತ ಪರಿಣಾಮ ಬೀರುವ ವ್ಯಕ್ತಿ ಅಂದರೆ ಅದು ತಂದೆ ಮಾತ್ರ. ಈ ಹಿನ್ನೆಲೆಯಲ್ಲಿ ತಂದೆ ತನ್ನ ಮಗಳ ಮುಂದೆ ಮಾಡುವ ಕೆಲವು ವರ್ತನೆಗಳು ಆಕೆಯ ಭವಿಷ್ಯದ ಮನೋಭಾವನೆ, ಆಳವಾದ ಸಂಬಂಧ ಮತ್ತು ಸ್ವಾಭಿಮಾನಕ್ಕೂ ಗಂಭೀರವಾಗಿ ಹಾನಿಕಾರಿಯಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಹೆಂಡತಿಯ ಮೇಲೆ ಕೂಗಾಡುವುದು
ಮಗಳ ಮುಂದೆ ತಾಯಿಯ ಮೇಲೆ ಕೂಗಾಡುವುದು ಅಥವಾ ಅವಮಾನಿಸುವ ಮಾತುಗಳನ್ನು ಆಡುವುದು ಎಚ್ಚರಿಕೆಯ ವಿಚಾರ. ಇದು ಮಗಳ ಮನಸ್ಸಿನಲ್ಲಿ ತಂದೆಯ ಬಗ್ಗೆ ಬೇಸರದ ಭಾವನೆ ಮೂಡಿಸುವುದಷ್ಟೇ ಅಲ್ಲ, ಎಲ್ಲಾ ಪುರುಷರ ಬಗ್ಗೆ ನಕಾರಾತ್ಮಕ ದೃಷ್ಟಿಕೋನ ಬೆಳೆಸಬಹುದು.
ಮಹಿಳೆಯರ ಬಗ್ಗೆ ಕೀಳರಿಮೆ ತೋರಿಸುವುದು
ಮಹಿಳೆಯರನ್ನು ಹಾಸ್ಯ ಅಥವಾ ವ್ಯಂಗ್ಯದ ರೂಪದಲ್ಲಿ ಮಾತನಾಡುವುದು, ಅವರ ಸಾಮರ್ಥ್ಯವನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ.
ಮಗಳ ಭಾವನೆಗಳ ಕಡೆಗಣನೆ
ತಂದೆ ಎಂದರೆ ಭದ್ರತೆಯ ಸಂಕೇತ. ಆದರೆ ಮಗಳ ಭಾವನೆಗೆ ಬೆಲೆ ಕೊಡುವ ಬದಲು ತಿರಸ್ಕರಿಸುವ ಮೂಲಕ, ಆಕೆ ಭಾವನಾತ್ಮಕವಾಗಿ ದೂರವಾಗಬಹುದು. ಇದು ಭವಿಷ್ಯದ ಸಂಬಂಧಕ್ಕೂ ತೊಂದರೆಯಾಗುತ್ತದೆ.
ಗಂಡ ಹೆಂಡತಿಯ ಜಗಳ
ತಂದೆ ಮಗಳ ಮುಂದೆ ತಾಯಿಗೆ ದೈಹಿಕ ಅಥವಾ ಮಾತಿನ ಹಾನಿ ಮಾಡುವಂತಹ ವರ್ತನೆ ತೋರಿದರೆ, ಆಕೆಯ ಆಂತರಿಕ ಭದ್ರತೆಗೆ ಭಂಗ ಬರುತ್ತದೆ. ಇದರಿಂದ ಆಕೆ ಪ್ರೀತಿಯ ಬಗ್ಗೆ, ಪತ್ನಿ-ಗಂಡನ ಸಂಬಂಧದ ಬಗ್ಗೆ ಭೀತಿಯಿಂದ ನೋಡಬಹುದು.
ಕೆಟ್ಟ ಅಭ್ಯಾಸಗಳು
ಶಾಲೆಯಲ್ಲಿ ತಾವು ಕೆಟ್ಟದ್ದು ಎಂದು ಕಲಿಯುವ ಚಟಗಳು, ಮನೆಯಲ್ಲಿಯೇ ತಂದೆಯಿಂದ ವ್ಯಕ್ತವಾಗಿದೆಯೆಂದರೆ, ಮಗಳು ಅದನ್ನು ತಳ್ಳಿಹಾಕಿ ದೂರ ಉಳಿಯಬಹುದು. ಇದರಿಂದ ತಂದೆ ಮಗಳು ನಡುವಿನ ಸಂಬಂಧ ಮುರಿಯಬಹುದು.